ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು: ವಿದ್ಯಾರ್ಥಿ ತಂಡಗಳ ಹೊಡೆದಾಟ ಪ್ರಕರಣ - ಮತ್ತೆ 8 ಮಂದಿ ಬಂಧನ, ಡ್ರಗ್ಸ್ ಸೇವನೆ ದೃಢ.

Twitter
Facebook
LinkedIn
WhatsApp
ಮಂಗಳೂರು: ವಿದ್ಯಾರ್ಥಿ ತಂಡಗಳ ಹೊಡೆದಾಟ ಪ್ರಕರಣ – ಮತ್ತೆ 8 ಮಂದಿ ಬಂಧನ, ಡ್ರಗ್ಸ್ ಸೇವನೆ ದೃಢ.

ಮಂಗಳೂರು: ವಿದ್ಯಾರ್ಥಿ ತಂಡದ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆ ಪೊಲೀಸರು 8 ವಿದ್ಯಾರ್ಥಿಗಳನ್ನು ಬಂಧಿಸಿದ್ಧಾರೆ.

ಬಂಧಿತ ವಿದ್ಯಾರ್ಥಿಗಳನ್ನು ಮೊಹಮ್ಮದ್‌, ವಿಮಲ್‌, ಫಹಾದ್‌‌ ಮುನಾಫ್‌‌‌, ಶಾಹೀದ್‌‌‌, ಕಾನೆ ಜಾನ್ಸನ್‌‌, ಆದರ್ಶ್‌‌, ಮೊಹಮ್ಮದ್‌ ನಾಸೀಫ್‌‌, ತಾಹೀರ್‌ ಸೇರಿದಂತೆ ಎಂಟು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 8 ಮಂದಿಯ ಪೈಕಿ ನಾಲ್ವರು ಡ್ರಗ್ಸ್‌‌ ಸೇವಿಸಿರುವುದು ದೃಢಪಟ್ಟಿದೆ.

ನಗರದ ಗುಜ್ಜರಕೆರೆ ಪ್ರದೇಶದಲ್ಲಿ ಪದವಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಡಿ.2ರಂದು ಘರ್ಷಣೆ ನಡೆದಿದೆ. ಯೇನಪೋಯ ಕಾಲೇಜಿನ ಹಾಸ್ಟೆಲ್‌‌ ಬಳಿಯಲ್ಲಿ ಆದರ್ಶ್‌ ಪ್ರೇಮ್‌ ಕುಮಾರ್‌ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಸಿನಾನ್ ಮತ್ತು ಅದೇ ಕಾಲೇಜಿನ ಇತರ ಎಂಟು ವಿದ್ಯಾರ್ಥಿಗಳು ಇಂಟರ್ಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ್ ಹಾಗೂ ಮೊಹಮ್ಮದ್ ನಾಸಿಫ್ ಗಾಯಗೊಂಡಿದ್ದಾರೆ.

ಪ್ರಕರಣದ ಸಂಬಂಧ ಯೇನಪೋಯ ಹಾಸ್ಟೆಲ್‌‌ಗೆ ಮಂಗಳೂರು ಎಸ್‌ಪಿ ಶಶಿಕುಮಾರ್‌ ಭೇಟಿ ನೀಡಿದ್ದು, ಈ ಸಂದರ್ಭ ಘಟನೆಯ ಬಗ್ಗೆ ಅವರಿಗೆ ತಿಳಿಸಿದ್ದು, ಕೂಡಲೇ ಹಾಸ್ಟೆಲ್‌ ಅನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ 2 ವಿದ್ಯಾರ್ಥಿ ಗುಂಪಿನವರೂ ದೂರು, ಪ್ರತಿದೂರು ನೀಡಿದ್ದು, ಪ್ರಕರಣದ ಸಂಬಂಧ 9 ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿ.2ರಂದು 10.45 ಗಂಟೆಯ ಸುಮಾರಿಗೆ ವಿಖ್ಯಾತ್‌ ಶೆಟ್ಟಿ ಅವರು ವೈಯುಕ್ತಿಕ ಕೆಲಸ ಮುಗಿಸಿಕೊಂಡು ಗುಜ್ಜರಕೆರೆ ಕಡೆಗೆ ಬರುತ್ತಿರುವ ಸಂದರ್ಭ ಯೇನಪೋಯ ಹಾಸ್ಟೆಲ್‌ನ ಸುಮಾರು 100-150 ವಿದ್ಯಾರ್ಥಿಗಳು ಗುಂಪು ಸೇರಿಕೊಂಡು ಬೊಬ್ಬೆ ಹಾಕುತ್ತಿದ್ದರು. ಪಿಎಸ್‌ಐ ಹಾಗೂ ಪೊಲೀಸರು ಬೊಬ್ಬೆ ಹಾಕುತ್ತಿದ್ದವರಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿಯಪಡಿಸುತ್ತಿದ್ದರೂ ಕೂಡಾ ಅವರು ಪೊಲೀಸರ ಮಾತನ್ನು ಕೇಳದೇ ಸ್ಥಳೀಯರ ಮೇಲೆ ಹಾಗೂ ಸ್ಥಳೀಯ ಮನೆಗಳ ಮೇಲೆ ಕಲ್ಲು, ಗಾಜಿನ ಚೂರುಗಳನ್ನು ಬಿಸಾಡಿ ವಿಖ್ಯಾತ್ ಶೆಟ್ಟಿ ಹಾಗೂ ಇತರರ ಮೇಲೆ ಗಾಯಗೊಳಿಸಿದ್ದಾರೆ. ಇದರಿಂದ 10,000 ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು