ಶನಿವಾರ, ಮೇ 4, 2024
ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬರೋಬ್ಬರಿ 400 ಜನರಿಂದ ಬಾಲಕಿ ಮೇಲೆ ಅತ್ಯಾಚಾರ!!

Twitter
Facebook
LinkedIn
WhatsApp
ಬರೋಬ್ಬರಿ 400 ಜನರಿಂದ ಬಾಲಕಿ ಮೇಲೆ ಅತ್ಯಾಚಾರ!!

ಮಹಾರಾಷ್ಟ್ರ : ನಿಜಕ್ಕೂ ಇದು ಅಮಾನವೀಯ ಘಟನೆ. ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವ ಕೃತ್ಯವಿದು. ಹೌದು, ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ನಡೆದಿದೆ. ಇನ್ನು ಸಂತ್ರಸ್ತ ಬಾಲಕಿಗೆ ದೂರು ನೀಡಲು ಯತ್ನಿಸಿದಾಗ ಪೊಲೀಸರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹಾರಾಷ್ಟ್ರದ ಬೀಡ್‌ನಲ್ಲಿ ಅಪ್ರಾಪ್ತ ಬಾಲಕಿ ಎರಡು ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ತಂದೆಯೊಂದಿಗೆ ವಾಸವಾಗಿದ್ದ ಆಕೆಯನ್ನು ಎಂಟು ತಿಂಗಳ ಹಿಂದೆಯಷ್ಟೇ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರದಲ್ಲಿ ಪತಿ ಹಾಗೂ ಅತ್ತೆ, ಮಾವ ಕಿರುಕುಳ ಕೊಟ್ಟು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ಆಕೆ ಓಡಿಹೋಗಿ ಮತ್ತೆ ತಂದೆಯೊಂದಿಗೆ ವಾಸವಾಗಿದ್ದಾಳೆ. ಆದರೆ ತಂದೆ ಆಕೆಯನ್ನು ಮನೆಗೆ ಸೇರಿಸದಿದ್ದಾಗ, ಆಕೆ ಬೀಡ್ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಳು. ಈ ವೇಳೆಯಲ್ಲಿ ಆಕೆ ಲೈಂಗಿಕ ಶೋಷಣೆಯನ್ನು ಎದುರಿಸಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಆಕೆ ಈಗ ಎರಡು ತಿಂಗಳ ಗರ್ಭಿಣಿ. ಈ ವಾರ ಆಕೆ ಪೊಲೀಸರಿಗೆ ದೂರು ನೀಡಿದ ನಂತರ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ಮತ್ತು ಕಿರುಕುಳ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್‌ಐಎ ನೀಡಿರುವ ಮಾಹಿತಿಯ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೀಡ್‌ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ರಾಜಾ ರಾಮಸಾಮಿ ತಿಳಿಸಿದ್ದಾರೆ ಎಂದು ಹೇಳಿದೆ.
ಸಂತ್ರಸ್ತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ ದೂರನ್ನು ನೀಡಿದ್ದಾಳೆ. ತನನ್ನ ಹಲವು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಹೋದಾಗ ಪೊಲೀಸರು ತನ್ನ ದೂರನ್ನು ಆಲಿಸಿಲ್ಲ. ಅಷ್ಟೇ ಅಲ್ಲದೇ ಓರ್ವ ಪೊಲೀಸ್‌ ಸಿಬ್ಬಂದಿಯೂ ಕೂಡ ತನ್ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು