ಶನಿವಾರ, ಫೆಬ್ರವರಿ 8, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಾರ್ವೆಯ ಕಾಂಗ್ಸ್‌ಬರ್ಗ್‌ನಲ್ಲಿ ಶಂಕಿತನಿಂದ ಸಾರ್ವಜನಿಕರ ಮೇಲೆ ಬಿಲ್ಲು-ಬಾಣಗಳಿಂದ ದಾಳಿ. 5 ಜನರ ಹತ್ಯೆ.

Twitter
Facebook
LinkedIn
WhatsApp
ನಾರ್ವೆಯ ಕಾಂಗ್ಸ್‌ಬರ್ಗ್‌ನಲ್ಲಿ ಶಂಕಿತನಿಂದ ಸಾರ್ವಜನಿಕರ ಮೇಲೆ ಬಿಲ್ಲು-ಬಾಣಗಳಿಂದ ದಾಳಿ. 5 ಜನರ ಹತ್ಯೆ.

ಕಾಂಗ್ಸ್‌ಬರ್ಗ್‌ (ನಾರ್ವೆ): ಬಿಲ್ಲು-ಬಾಣಗಳಿಂದ ಸಜ್ಜಿತನಾಗಿದ್ದ ವ್ಯಕ್ತಿಯೋರ್ವನು ಬುಧವಾರ ಸಂಜೆ ನಾರ್ವೆಯ ಆಗ್ನೇಯ ಭಾಗದ ಕಾಂಗ್ಸ್‌ಬರ್ಗ್ ಎಂಬಲ್ಲಿ ಹಠಾತ್ ದಾಳಿ ನಡೆಸಿ 5 ಜನರ ಹತ್ಯೆ ಮಾಡಿ ಇಬ್ಬರನ್ನು ಗಾಯಗೊಳಿಸಿದ್ದು ಅವನನ್ನು ಬಂಧಿಸಿದ್ದೇವೆ ಎಂದ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಕಾಂಗ್ಸ್‌ಬರ್ಗ್ ನಗರದ ಹೃದಯಭಾಗದ ಅನೇಕ ಪ್ರದೇಶಗಳಲ್ಲಿ ನಡೆದಿರುವ ದಾಳಿಗಳ ಹಿಂದಿನ ನೈಜ ಉದ್ದೇಶ ಇನ್ನೂ ತಿಳಿದುಬಂದಿಲ್ಲವಾದರೂ ಭಯೋತ್ಪಾದಕ ಕೃತ್ಯದ ಉದ್ದೇಶಗಳನ್ನು ತಳ್ಳಿಹಾಕುವಂತಿಲ್ಲ ಎಂದು ತಿಳಿಸಿದ ಪೋಲೀಸ್ ಅಧಿಕಾರಿ, ಓಯ್‌ವಿಂಡ್ ಆಸ್, ಕೃತ್ಯದಲ್ಲಿ 5 ಜನ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಇಬ್ಬರು ಆಸ್ಪತ್ರೆಯ ತುರ್ತು ಚಿಕಿತ್ಸಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಪ್ರಾಣಗಳಿಗೆ ಅಪಾಯವಿದೆಯಂದೇನೂ ಎನಿಸುತ್ತಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಾಯಗೊಂಡಿರುವ ಇಬ್ಬರಲ್ಲಿ ಒಬ್ಬರು ಕರ್ತವ್ಯದಲ್ಲಿಲ್ಲದ ಪೋಲೀಸ್ ಅಧಿಕಾರಿಯಾಗಿದ್ದು ದಾಳಿ ನಡೆದ ಪ್ರದೇಶಗಳಲ್ಲೊಂದರ ಮಳಿಗೆಯೊಂದರಲ್ಲಿದ್ದರು ಎಂದೂ ಅವರು ತಿಳಿಸಿದರು. ಈ ಕೃತ್ಯವನ್ನೆಸಗಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು ನಮಗಿರುವ ಮಾಹಿತಯ ಪ್ರಕಾರ ಅವನೊಬ್ಬನೇ ಈ ಕೃತ್ಯವನ್ನು ನಡೆಸಿದ್ದಾನೆ ಎಂದೂ ಅವರು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, ಘಟನೆ ನಡೆದ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದ ಭಯೋತ್ಪಾದಕ ದಾಳಿ ಎಂಬ ಶಂಕೆ ಮೂಡುವುದು ಸಹಜವಾದರೂ ಬೇರೆಲ್ಲಾ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಬೇಕಾಗುತ್ತದೆ ಎಂದರು.
ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಕಾನ್ಸ್‌ಬರ್ಗ್‌ವಾಸಿ 37 ವರ್ಷದ ಡೇನಿಶ್ ನಾಗರಿಕನೆಂದು ಗುರುತಿಸಲಾಗಿದೆಯೆಂದು ತಿಳಿಸಿದ ಅವರು ಈ ಮೊದಲು ಸ್ಥಳೀಯ ದೂರದರ್ಶನದಲ್ಲಿ ವರದಿಯಾಗಿದ್ದಂತೆ ನಾರ್ವೆ ದೇಶದ ಪ್ರಜೆಯಲ್ಲವೆಂದು ತಿಳಿಸಿದರು. ಸಾಮಾಜಿಕ ಜಾಲತಾಣಗಳ ಮಾಯಿತಿಗಳಲ್ಲಿ ಅನೇಕ ಊಹಾಪೋಹಗಳು ಕಂಡುಬಂದಿದ್ದು ಇದಕ್ಕೆ ಸಂಬಂಧಪಡದ ವ್ಯಕ್ತಿಗಳ ಹೆಸರುಗಳೂ ಕಂಡಬಂದ ಕಾರಣ ಮಾಹಿತಿಗಳ ಸತ್ಯಾಸತ್ಯತೆಯನ್ನು ನಾವು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆವು ಎಂದೂ ಅವರು ತಿಳಿಸಿದರು. ಶಂಕಿತನನ್ನು ಸಮೀಪದ ಡ್ರಾಮನ್‌ ನಗರದ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದೆಯೆಂದೂ ಅವರು ತಿಳಿಸಿದರು.
ಈ ಕೃತ್ಯದ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಟಿವಿ2 ವಾಹಿನಿಗೆ ತಿಳಿಸಿದಂತೆ ಪ್ರದೇಶದಲ್ಲಿ ಸ್ವಲ್ಪ ಶಾಂತಿಭಂಗವುಂಟಾಗಿ ಮಹಿಳೆಯೊಬ್ಬಳು ರಕ್ಷಣೆಗಾಗಿ ಸುರಕ್ಷಿತ ಸ್ಥಳಕ್ಕೆ ಓಡುತ್ತಿದ್ದು ಬಿಲ್ಲು-ಬಾಣಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬನು ಮೂಲೆಯೊಂದರಲ್ಲಿ ನಿಂತಿದ್ದುದು ಕಂಡುಬಂತು ಎಂದು ತಿಳಿಸಿದರು. ಅದಾದ ನಂತರ, ಜನರು ರಕ್ಷಣೆಗಾಗಿ ಅತ್ತಿಂದಿತ್ತ ಓಡತ್ತಿದ್ದು ಅವರಲ್ಲಿ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯೊಬ್ಬರು ಇದ್ದರು ಎಂದೂ ಅವರು ತಿಳಿಸಿದರು.

ರಾಜಧಾನಿ ಓಸ್ಲೋದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ, 2500 ಜನಸಂಖ್ಯೆಯ ನಗರದಲ್ಲಿ ನಡೆದ ದಾಳಿಗಳ ಬಗ್ಗೆ ಸಂಜೆ 6:13ಕ್ಕೆ ಮಾಹಿತಿ ಪಡೆದ ಪೋಲೀಸರು ಸುಮಾರು 6:47ರ ಸಮಯದಲ್ಲಿ ಶಂಕಿತನನ್ನು ವಶಕ್ಕೆ ಪಡೆದರು.
ಇಂತಹ ಘಟನೆಗಳು ನಮ್ಮನ್ನು ಗಾಬರಿಗೊಳಿಸುತ್ತವೆ ಎಂದು ಪ್ರಧಾನ ಮಂತ್ರಿ ಎರ್ನಾ ಸೋಲ್‌ಬರ್ಗ್ ತಿಳಿಸಿದರು. ಇಂದು ಅವರ ಅಧಿಕಾರದ ಕಡೆಯ ದಿನವಾಗಿದ್ದು ಇತ್ತೀಚಿನ ಪಾರ್ಲಿಮೆಂಟ್‌ ಚುನಾವಣೆಗಳಲ್ಲಿ ಜಯಗಳಿಸಿದ ಲೇಬರ್ ಪಕ್ಷದ ಜೊನಾಸ್ ಸ್ಟೋರ್‌ರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಕಾಂಗ್ಸ್‌ಬರ್ಗ್‌ಲ್ಲಿ ದಾಳಿ ನಡೆದ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವ ಪೋಲೀಸರು ಸಾರ್ವಜನಿಕರು ಮನೆಗಳಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ದೂರದರ್ಶನದಲ್ಲಿ ಅಂಬ್ಯುಲೆನ್ಸ್‌ಗಳು ಹಾಗೂ ಸಶಸ್ತ್ರ ಪೋಲೀಸರು ಪ್ರದೇಶದಲ್ಲಿದ್ದುದು ಕಂಡುಬಂತಲ್ಲದೇ ಒಂದು ಹೆಲಿಕ್ಯಾಪ್ಟರ್ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕಳುಹಿಸಲಾಯಿತು.
ಸ್ಕಾಂಡಿನೇವಿಯನ್ ದೇಶದ ಪೋಲೀಸರು ಸಾಮಾನ್ಯ ಪರಿಸ್ಥಿತಿಗಳಲ್ಲಿ ಹೆಚ್ಚು ಶಸ್ತ್ರಸಜ್ಜಿತರಾಗಿರುವುದಿಲ್ಲ, ಆದರೆ, ಈ ಘಟನೆಯ ನಂತರ ರಾಷ್ಟ್ರೀಯ ಪೋಲೀಸ್ ನಿರ್ದೇಶನಾಲಯವು ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ದೇಶಾದ್ಯಂತ ಸಂಪೂರ್ಣ ಶಸ್ತ್ರಸಜ್ಜಿತರಾಗಿರಬೇಕೆಂದು ಆದೇಶ ನೀಡಿದೆ.
ಪ್ರತ್ಯಕ್ಷದರ್ಶಿಯೊಬ್ಬರು ಕಳುಹಿಸಿದ, ಕಪ್ಪು ಬಾಣವೊಂದು ಗೋಡೆಗೆ ನಾಟಿಕೊಂಡಿರುವ ಛಾಯಾಚಿತ್ರವನ್ನು ಸ್ಥಳೀಯ ವಾರ್ತಾಸಂಸ್ಥೆಯೊಂದು ಬಿತ್ತರಿಸಿತ್ತು. ಇತರೆ ಛಾಯಾಚಿತ್ರಗಳಲ್ಲಿ, ಕೆಲವು ಸ್ಪರ್ಧಾತ್ಮಕ ಮಟ್ಟದ ಬಾಣಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದುದು ಕಂಡುಬಂತು.

ನಾರ್ವೆ ದೇಶದಲ್ಲಿ ಇಂತಹ ಘಟನೆಗಳು ಸಂಭವಿಸುವುದು ಅಪರೂಪವಾದರೂ ಸುಮಾರು 10 ವರ್ಷಗಳ ಹಿಂದೆ ತೀವ್ರ ಬಲಪಂಥೀಯ ವಿಚಾರಧಾರೆಯ ಆಂಡರ್ಸ್ ಬ್ರೆವಿಕ್ ಎಂಬಾತ 77 ಜನರನ್ನು ಹತ್ಯ ಮಾಡಿದ್ದು ಎರಡನೇ ವಿಶ್ವಯುದ್ಧದ ನಂತರದ ಅತಿದೊಡ್ಡ ಹತ್ಯಾಕಾಂಡವಾಗಿತ್ತು. ಮೊದಲು ಪ್ರಧಾನಮಂತ್ರಿ ಕಾರ್ಯಾಲಯದ ಪಕ್ಕದ ಕಟ್ಟಡದಲ್ಲಿ ಬಾಂಬ್ ಸ್ಫೋಟಿಸಿದ್ದ ಬ್ರೆವಿಕ್ ನಂತರ ಉಟೋಯಾ ದ್ವೀಪದಲ್ಲಿ ನಡೆಯುತ್ತಿದ್ದ ಎಡಪಂಥೀಯರು ಭಾಗವಹಿಸಿದ್ದ ಯುವ ಬೇಸಿಗೆ ಶಿಬಿರವೊಂದರ ಮೇಲೆ ಗುಂಡಿನ ಮಳೆಗರೆದಿದ್ದ. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ, ಸ್ವಘೋಷಿತ ನಿಯೋ-ನಾಝಿ ಫಿಲಿಪ್ ಮಾನ್‌ಶಾಸ್ 2019ರ ಆಗಸ್ಟ್‌ನಲ್ಲಿ ಓಸ್ಲೋ ನಗರದ ಹೊರವಲಯದಲ್ಲಿರುವ ಮಸೀದಿಯೊಂದರ ಮೇಲೆ ಗುಂಡಿನ ಮಳೆಗರೆದಿದ್ದು ಅಲ್ಲಿದ್ದವರೇ ಅವನನ್ನು ವಶಕ್ಕೆ ಪಡೆದಿದ್ದರು, ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ. ಇದಕ್ಕೂ ಮೊದಲು ಅವನು ಚೀನಾದಿಂದ ದತ್ತು ಪಡೆಯಲಾಗಿದ್ದ ತನ್ನ ಮಲ ಸಹೋದರಿಯನ್ನೇ ಗುಂಡು ಹಾರಿಸಿ ಕೊಂದಿದ್ದ ಹಾಗೂ ಇದನ್ನು ಜನಾಂಗೀಯ ಹತ್ಯೆ ಎಂದು ಪರಿಗಣಿಸಲಾಗಿತ್ತು.
ಕೆಲವು ಜಿಹಾದಿ ದಾಳಿಗಳನ್ನೂ ರಕ್ಷಣಾಪಡೆಗಳು ವಿಫಲಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು