Dholpur: ಆಟೋ-ಬಸ್ ನಡುವೆ ಭೀಕರ ಅಪಘಾತ,12 ಮಂದಿ ಸಾವು

ಆಟೋ-ರಿಕ್ಷಾ ಮತ್ತು ಬಸ್ ನಡುವೆ ಡಿಕ್ಕಿಯ ರಭಸಕ್ಕೆ ತ್ರಿಚಕ್ರ ವಾಹನ ಛಿದ್ರ ಛಿದ್ರವಾಗಿದ್ದು, ಬಸ್ಸಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ.
Dholpur: ರಾಜಸ್ಥಾನದ ಧೋಲ್‌ಪುರದ ಬಾರಿಯಲ್ಲಿ ಆಟೋ-ರಿಕ್ಷಾ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಅಪಘಾತಕ್ಕೆ ಒಳಗಾದವರೆಲ್ಲರೂ ಮದುವೆ ಸಮಾರಂಭದಿಂದ ಹಿಂತಿರುಗುತ್ತಿದ್ದಾಗ ಬಾರಿ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುನಿಪುರ್ ಬಳಿ ಅಪಘಾತ ಸಂಭವಿಸಿದೆ.
ಸಂತ್ರಸ್ತರು ಬರೌಲಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತರಲ್ಲಿ ಐವರು ಮಕ್ಕಳು, ಮೂವರು ಹುಡುಗಿಯರು, ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಟೆಂಪೋ ಪ್ರಯಾಣಿಕರು ಬಾರಿ ನಗರದ ಗುಮತ್ ಮೊಹಲ್ಲಾ ನಿವಾಸಿಗಳು. ಪೊಲೀಸರು ಎಲ್ಲಾ ಶವಗಳನ್ನು ಬರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.
ಬರಿ ಸಿಟಿಯ ಕರೀಂ ಕಾಲೋನಿ ಗುಮಾತ್ ಮೊಹಲ್ಲಾದ ಕುಟುಂಬವು ಬರೌಲಿ ಗ್ರಾಮದಲ್ಲಿನ (Dholpur) ಸಂಬಂಧಿಕರ ಮನೆಯಲ್ಲಿ ನಡೆದ ‘ಭಾತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿತ್ತು ಎಂದು ಬಾರಿ ಕೊತ್ವಾಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಿವ ಲಹರಿ ಮೀನಾ ತಿಳಿಸಿದ್ದಾರೆ.
“ರಾತ್ರಿ 11 ಗಂಟೆ ಸುಮಾರಿಗೆ ಸುನಿಪುರ್ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸ್ಲೀಪರ್ ಕೋಚ್ ಬಸ್ ಅವರು ಪ್ರಯಾಣಿಸುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದು 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಹೇಳಿದರು.
ಅಪಘಾತದ ನಂತರ ಗುಮತ್ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಮೃತರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನು ಬೆಚ್ಚಿ ಬೀಳಿಸಿದೆ.
ಅಪಘಾತದ ನಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಪಘಾತದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಪ್ರಾಥಮಿಕ ತನಿಖೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ. ಬಸ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಅಪರಾಧಿಗಳನ್ನು ಶಿಕ್ಷಿಸಲು ಕಾನೂನು ಜಾರಿಗೆ ಕೇಂದ್ರದ ಚಿಂತನೆ
ನವದೆಹಲಿ: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯೊಡ್ಡುವ ವ್ಯಕ್ತಿಗಳನ್ನು ಪತ್ತೆ ಮಾಡಲು ಗುಪ್ತಚರ ಹಾಗೂ ಸೈಬರ್ ಭದ್ರತೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಕಾನೂನು ಜಾರಿಗೊಳಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ. ಭಾರತ ಅಥವಾ ಬೇರೆ ಯಾವುದೇ ಸ್ಥಳಗಳಿಂದ ಬಾಂಬ್ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ಈ ಕಾನೂನು ರೂಪುಗೊಳ್ಳಲಿದೆ ಎಂದು ತಿಳಿದುಬಂದಿದೆ.
ಭಾರತವನ್ನು ಆರ್ಥಿಕವಾಗಿ ತೀವ್ರವಾಗಿ ಬಾಧಿಸುತ್ತಿರುವ ಇಂತಹ ಚಟುವಟಿಕೆಗಳ ಹಿಂದಿನ ನಿಜವಾದ ಅಪರಾಧಿಗಳನ್ನು ಏಜೆನ್ಸಿಗಳು ಕಂಡುಹಿಡಿಯುವವರೆಗೆ, ಪ್ರಸ್ತಾವಿತ ಕಾನೂನಿನಲ್ಲಿ ಕೇಂದ್ರ ಗೃಹ ಸಚಿವಾಲಯ (MHA) ನಿಬಂಧನೆಗಳ ಬಗ್ಗೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ನಿಂದ ಪ್ರಸ್ತಾವನೆಯನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳ್ಳು ಬಾಂಬ್ ಬೆದರಿಕೆ ಪ್ರಕರಣಗಳಲ್ಲಿ ಆರೋಪಿಗಳಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು BCAS ಪ್ರಸ್ತಾಪಿಸಿದೆ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ. ಏರ್‌ಕ್ರಾಫ್ಟ್ ಕಾಯ್ದೆ, 1934 ಮತ್ತು ಏರ್‌ಕ್ರಾಫ್ಟ್ ರೂಲ್ಸ್, 1937 ಗೆ ತಿದ್ದುಪಡಿಗಳನ್ನು ತರಲು, MHA ಕಾನೂನು ಮತ್ತು ನ್ಯಾಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ತಲೆ ಮೇಲೆ ಕಲ್ಲು ಹಾಕಿ ಸ್ನೇಹಿತರಿಂದಲೇ ಹತ್ಯೆ!
ಮಾಗಡಿ(ಅ.19): ಹದಿನೈದು ದಿನಗಳ ಹಿಂದೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಷಯಕ್ಕೆ ನಡೆದಿದ್ದ ಜಗಳ ದ್ವೇಷಕ್ಕೆ ತಿರುಗಿ ಸ್ನೇಹಿತರಿಂದಲೇ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿ ಪ್ರವೀಣ್ (32) ಕೊಲೆ ಗೀಡಾಗಿರುವ ಯುವಕ.
ಗುರುವಾರ ರಾತ್ರಿ 11 ಗಂಟೆಯಲ್ಲಿ ಪಟ್ಟಣದ ನಿರ್ಮಲಾ ಟಾಕೀಸ್ ಮುಂದೆ ಪಾನಮತ್ತನಾಗಿದ್ದ ಪ್ರವೀಣ್ ಮೇಲೆ ಸ್ನೇಹಿತರು ಬಂದು ಗಲಾಟೆ ಮಾಡಿ ಕಲ್ಲು ಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ತರಕಾರಿ ಮಾರಾಟ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ ಪ್ರವೀಣ್ ಹಾಗೂ ಸ್ನೇಹಿತರು ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ವೇಳೆ ಪ್ರವೀಣ ನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.
ಬೆರಳಚ್ಚು ತಂಡ ಸ್ಥಳಕ್ಕಾಗಮಿಸಿ ಈ ಪರೀಶೀಲಿಸಿತು. ಮಾಗಡಿ ಪೊಲೀಸರು ನಡೆಸುತ್ತಿದ್ದಾರೆ. ಮೃತರಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದು ಕಳೆದ 15 ದಿನದ ಹಿಂದೆ ಮೃತ ಪ್ರವೀಣನ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು.
ಜೀವವಿಮೆ ಮೇಲಿನ ಜಿಎಸ್‌ಟಿ ರದ್ದತಿಗೆ ಸಚಿವರ ಶಿಫಾರಸು:
ನವದೆಹಲಿ: ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗುತ್ತಿದ್ದ ಶೇ.18ರಷ್ಟು ಜಿಎಸ್‌ಟಿ ತೆರಿಗೆಯನ್ನು ತೆಗೆದು ಹಾಕಬೇಕು ಎಂದು ಸರಕು- ಸೇವಾ ತೆರಿಗೆ (ಜಿಎಸ್) ಮಂಡಳಿಗೆ ಜಿಎಸ್ಟಿ ಕುರಿತ ರಾಜ್ಯ ಸಚಿವರ ಸಮೂಹ ಶಿಫಾರಸು ಮಾಡಿದೆ.
ಇದೇ ವೇಳೆ, 20 ಲೀ. ನೀರಿನ ಬಾಟಲಿ, ಬೈಸಿಕಲ್ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಆದರೆ ಐಷರಾಮಿ ಕೈಗಡಿ ಯಾರ ಮತ್ತು ಐಷರಾಮಿ ಶೂಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಶೇ.18ರಿಂದ ಶೇ.28ಕ್ಕೆ ಏರಿಸಬೇಕು ಎಂದೂ ಅದು ಶಿಫಾರಸಿನಲ್ಲಿ ತಿಳಿಸಿದೆ. ತನ್ನ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯಸ್ಥರಾಗಿರುವ ಜಿಎಸ್‌ಟಿ ಮಂಡ ಳಿಗೆ ಸಮಿತಿ ಸಲ್ಲಿಸಿದೆ. ಈ ಬಗ್ಗೆ ಜಿಎಸ್‌ಟಿ ಮಂಡಳಿ ತನ್ನ ಮುಂದಿನ ತಿಂಗಳಿನ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಭೆ ನಿರ್ಣಯಗಳು: ಜೀವ ವಿಮೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ವಿಮೆಯ 5 ಲಕ್ಷ ರು.ಗಳ ಕವರೇಜ್ ವರೆ ಗಿನ ವಿಮೆಗಳಿಗೆ ಜಿಎಸ್‌ಟಿಯಿಂದ ವಿನಾ ಯಿತಿ ನೀಡಬೇಕು ಎಂದು ಶಿಫಾರಸು ಮಾಡಲು ಸಭೆ ನಿರ್ಣಯಿಸಿತು.
ಆದರೆ, 5 ಲಕ್ಷ ರು.ಗಿಂತ ಅಧಿಕ ಮೊತ್ತದ ಕವರೇಜ್‌ನ ವಿಮೆಗಳ ಮೇಲಿನ ಶೇ.18 ತೆರಿಗೆ ಮುಂದುವರೆಯಲಿದೆ. ಜೊತೆಗೆ, ಕವರೇಜ್ ಮೊತ್ತವನ್ನು ಲೆಕ್ಕಿಸದೆ, ಹಿರಿಯ ನಾಗರಿಕರ ವಿಮೆ ಮೇಲಿನ ತೆರಿಗೆಗಳನ್ನು ಜಿಎಸ್‌ಟಿ ಮಂಡಳಿ ರದ್ದು ಗೊಳಿಸುವ ನಿರೀಕ್ಷೆಯಿದೆ.
ನೋಟ್ ಪುಸ್ತಕದ ಮೇಲಿನ ಶೇ.12ರಷ್ಟು ಜಿಎಸ್ಟಿ ಯನ್ನು ಶೇ.5ಕ್ಕೆ ಇಳಿಸಬೇಕು. 20 ಲೀ. ನೀರಿನ ಬಾಟಲಿ, 10,000 ರು.ಒಳಗಿನ ಬೈಸಿಕಲ್ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕೆ ಇಳಿಸುವಂತೆ ಸಭೆ ನಿರ್ಣಯಿಸಿದೆ. ಜೊತೆಗೆ 25,000 ರು. ಮೇಲಿನ ಕೈಗಡಿ ಯಾರ, 15,000 ರು.ಮೇಲಿನ ಶೂಗಳ ಮೇಲೆ ಮೇಲೆ ಶೇ.18 ರಷ್ಟು ಜಿಎಸ್ಟಿ ವಿಧಿಸುವಂತೆ ಜಿಎಸ್‌ಟಿ ಮಂಡಳಿಗೆ ಸಚಿವರ ಸಮಿತಿ ಶಿಫಾರಸು ಮಾಡಿದೆ.