ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

IND vs NZ: ಸೊನ್ನೆಗೆ ಔಟಾದ 5 ಬ್ಯಾಟರ್​ಗಳು, 46ಕ್ಕೆ ಭಾರತ ಆಲೌಟ್‌; ಹೀನಾಯ ದಾಖಲೆ!

Twitter
Facebook
LinkedIn
WhatsApp
IND vs NZ: ಸೊನ್ನೆಗೆ ಔಟಾದ 5 ಬ್ಯಾಟರ್​ಗಳು, 46ಕ್ಕೆ ಭಾರತ ಆಲೌಟ್‌

IND vs NZ, ಬೆಂಗಳೂರು: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊಲದ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ವಿಲಿಯಂ ಓ’ರೂರ್ಕ್ (William O’Rourke), ಮ್ಯಾಟ್‌ ಹೆನ್ರಿ ವೇಗಿಗಳ ಆರ್ಭಟಕ್ಕೆ ನಲುಗಿದ ಟೀಂ ಇಂಡಿಯಾ (Team India) 46 ರನ್‌ಗಳಿಗೆ ಆಲೌಟ್‌ ಆಗಿ ಭಾರೀ ಮುಖಭಂಗ ಅನುಭವಿಸಿದೆ. ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಕೆಟ್ಟ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದೆ.

 25 ವರ್ಷಗಳ ನಂತರ ಭಾರತ ತಂಡದ ಐವರು ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದಕ್ಕೂ ಮುನ್ನ 1999 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಐವರು ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

IND vs NZ: ಸೊನ್ನೆಗೆ ಔಟಾದ ಬ್ಯಾಟರ್​ಗಳು:

  • ವಿರಾಟ್ ಕೊಹ್ಲಿ (0)
  • ಸರ್ಫರಾಝ್ ಖಾನ್ (0)
  • ಕೆಎಲ್ ರಾಹುಲ್ (0)
  • ರವೀಂದ್ರ ಜಡೇಜಾ (0)
  • ರವಿಚಂದ್ರನ್ ಅಶ್ವಿನ್ (0)
NAYAN BAKERY

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ (M Chinnaswamy Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಕಿವೀಸ್‌ ವೇಗಿಗಳ ಅಬ್ಬರಕ್ಕೆ ಮಕಾಡೆ ಮಲಗಿತು. ನಿಧಾನಗತಿ ಬ್ಯಾಟಿಂಗ್‌ ಆರಂಭಿಸಿದ ಭಾರತ ಒಂದೊಂದು ಕದಿಯಲು ತಿಣುಕಾಡಿತು. ರೋಹಿತ್‌ (Rohit Sharma), ಕೊಹ್ಲಿ, ರಾಹುಲ್‌ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬಹುಬೇಗನೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಂತಿಮವಾಗಿ ಭಾರತ 46 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket – IND vs NZ) 3ನೇ ಅತೀ ಕಡಿಮೆ ರನ್‌ ಗಳಿಸಿದ ಕೆಟ್ಟ ದಾಖಲೆಯನ್ನು ಹೆಗಲಿಗೇರಿಸಿಕೊಂಡಿತು.

ಟೀಂ ಇಂಡಿಯಾ ಪರ ರಿಷಭ್‌ ಪಂತ್‌ (Rishabh Pant) 20 ರನ್‌, ಯಶಸ್ವಿ ಜೈಸ್ವಾಲ್‌ 13 ರನ್‌ ಗಳಿದರು. ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು. ರೋಹಿತ್‌ ಶರ್ಮಾ 2ರನ್‌, ಕುಲೀಪ್‌ ಯಾದವ್‌ 2ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಸಿರಾಜ್‌ 4 ರನ್‌ ಗಳಿಸಿದರು. ಇನ್ನುಳಿದಂತೆ ವಿರಾಟ್‌ ಕೊಹ್ಲಿ, ಸರ್ಫರಾಜ್‌ ಖಾನ್‌, ಕೆ.ಎಲ್‌ ರಾಹುಲ್‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ಶೂನ್ಯ ಸುತ್ತಿದರು.

ಇದು ಭಾರತದಲ್ಲಿ ಟೀಮ್ ಇಂಡಿಯಾದ ಅತ್ಯಲ್ಪ ಮೊತ್ತ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್​ಗೆ ಆಲೌಟ್ ಆಗಿದ್ದು ಕಳಪೆ ದಾಖಲೆಯಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಟೀಮ್ ಇಂಡಿಯಾ ಬ್ಯಾಟರ್​ಗಳು ಹಳೆಯ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಭಾರತೀಯ ಉಪಖಂಡದಲ್ಲಿ ಅತೀ ಕಡಿಮೆ ಸ್ಕೋರ್​ಗಳಿಸಿದ ಹೀನಾಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ್ 53 ರನ್ ಕಲೆಹಾಕಿದ್ದು ಅತ್ಯಲ್ಪ ಮೊತ್ತವಾಗಿತ್ತು. ಇದೀಗ 46 ರನ್​ಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ.

ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತೀ ಕಡಿಮೆ ಸ್ಕೋರ್​ಗೆ ಆಲೌಟ್ ಆದ ಅನಗತ್ಯ ದಾಖಲೆ ಕೂಡ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಝಿಲೆಂಡ್ ತಂಡವು 62 ರನ್​ಗೆ ಆಲೌಟ್ ಆಗಿದ್ದು ಕಳಪೆ ಪ್ರದರ್ಶನವಾಗಿತ್ತು. 

78 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. 1946 ರಲ್ಲಿ ನ್ಯೂಝಿಲೆಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿದ್ದರು. 25 ವರ್ಷಗಳ ನಂತರ ಭಾರತ ತಂಡದ ಐವರು ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದಕ್ಕೂ ಮುನ್ನ 1999 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಐವರು ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

ಟೀಂ ಇಂಡಿಯಾ ಕಳಪೆ ರನ್‌ ಗಳಿಸಿದ ಪಂದ್ಯಗಳು
* 36 ರನ್‌ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್‌ ಮೈದಾನ (2020)
* 42 ರನ್‌ – ಇಂಗ್ಲೆಂಡ್‌ ವಿರುದ್ಧ – ಲಾರ್ಡ್ಸ್‌ ಮೈದಾನ (1974
* 46 ರನ್‌ – ನ್ಯೂಜಿಲೆಂಡ್‌ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
* 58 ರನ್‌ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್‌(1952)
* 66 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್‌ ಮೈದಾನ (1996)

ಇನ್ನು ಭಾರತ ತಂಡ ಇಂದು ಗಳಿಸಿದ 46ರನ್ ಮೊತ್ತ ಪಾಕಿಸ್ತಾನದ ಕಳಪೆ ದಾಖಲೆಯನ್ನೂ ಹಿಂದಿಕ್ಕಿದ್ದು. ಈ ಹಿಂದೆ ಪಾಕಿಸ್ತಾನ 1986ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ 53ರನ್ ಗಳಿಗೇ ಆಲೌಟ್ ಆಗಿತ್ತು. ಈ ಎರಡು ಪಂದ್ಯಗಳು ಫೈಸಲಾಬಾದ್ ಮತ್ತು ಶಾರ್ಜಾದಲ್ಲಿ ನಡೆದಿತ್ತು. ಹೀಗಾಗಿ ಭಾರತ ಇಂದು ಗಳಿಸಿದ 46ರನ್ ಮೊತ್ತ ಏಷ್ಯಾದಲ್ಲಿ ದಾಖಲಾದ ತಂಡವೊಂದರ ಅತ್ಯಂತ ಕಳಪೆ ಮೊತ್ತವಾಗಿದೆ.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಅಜಾಝ್ ಪಟೇಲ್, ವಿಲಿಯಂ ಒರೋಕ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist