ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Vijay Mallya: ವಿಜಯ್ ಮಲ್ಯಗೆ ಶಾಕ್ ನೀಡಿದ ಸೆಬಿ; 3 ವರ್ಷಗಳ ಕಾಲ ಸೆಕ್ಯುರಿಟೀಸ್ ವಹಿವಾಟಿನಿಂದ ನಿರ್ಬಂಧ

Twitter
Facebook
LinkedIn
WhatsApp
Vijay Mallya

ಮಾಜಿ ಮದ್ಯದ ದೊರೆ ವಿಜಯ್​​​ ಮಲ್ಯಗೆ (Vijay Mallya) ಸೆಬಿ (Securities and Exchange Board of India) ಬಿಗ್​​ ಶಾಕ್​​​ ನೀಡಿದೆ. ವಿಜಯ್​​​ ಮಲ್ಯ ಯುಬಿಎಸ್ ಎಜಿ ಹೊಂದಿರುವ ದೇಶದ ಬೇರೆ ಬೇರೆ ಬ್ಯಾಂಕ್​​ ಖಾತೆಗಳ ಮೂಲಕ ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಗೆ ಹಣವನ್ನು ರೂಟಿಂಗ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಮೂರು ವರ್ಷಗಳ ಕಾಲ ಸೆಬಿ, ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿದೆ. ಮೂರು ವರ್ಷಗಳವರೆಗೆ ಸೆಬಿ ಪಟ್ಟಿ ಮಾಡಿರುವ ಸಂಸ್ಥೆಯೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಹೇಳಿದೆ.

ಈಗಾಗಲೇ ಕಿಂಗ್‌ಫಿಷರ್ ಏರ್‌ಲೈನ್ಸ್‌ ವಂಚನೆ ಆರೋಪವನ್ನು ಹೊತ್ತಿರುವ ಅವರು ಭಾರತದಿಂದ ಪರಾರಿಯಾಗಿ ಯುಕೆಯಲ್ಲಿ ನೆಲೆಸಿದ್ದಾರೆ. ಅವರನ್ನು ಯುಕೆಯಿಂದ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. 2016ರಿಂದ ಮಲ್ಯ ಅವರು ಯುಕೆಯಲ್ಲಿ ನೆಲೆಸಿದ್ದಾರೆ. ಇದೀಗ ಇದರ ಜತೆಗೆ ಈ ಆರೋಪವನ್ನು ಕೂಡ ಮಲ್ಯ ಹೊತ್ತುಕೊಂಡಿದ್ದಾರೆ.

ಜನವರಿ 2006 ರಿಂದ ಮಾರ್ಚ್ 2008 ರವರೆಗೆ ಸೆಬಿ ನಡೆಸಿದ ತನಿಖೆಯಲ್ಲಿ ಮಲ್ಯ ಅವರು ಮ್ಯಾಟರ್‌ಹಾರ್ನ್ ವೆಂಚರ್ಸ್, ವಿದೇಶಿ ಸಾಂಸ್ಥಿಕ ಹೂಡಿಕೆದಾರ (ಎಫ್‌ಐಐ)ರಿಗೆ ತಮ್ಮ ಕಂಪನಿಗಳಾದ ಹರ್ಬರ್ಟ್‌ಸನ್ಸ್ ಲಿಮಿಟೆಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಗಳ ಷೇರುಗಳನ್ನು ರಹಸ್ಯವಾಗಿ ವ್ಯಾಪಾರ ಮಾಡಲು ಮುಂದಾಗಿದ್ದರು ಎಂದು ಸೆಬಿ ಹೇಳಿದೆ.

UBS AG ಯ ವಿವಿಧ ಖಾತೆಗಳ ಮೂಲಕ ಮ್ಯಾಟರ್‌ಹಾರ್ನ್ ವೆಂಚರ್ಸ್ ಅನ್ನು ಬಳಸಿಕೊಂಡು ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಗೆ ಹಣವನ್ನು ರವಾನಿಸಿದರು. ಇದಕ್ಕಾಗಿ ತಮ್ಮ ಹೆಸರನ್ನು ಮರೆಮಾಚಿ ಬೇರೆ ಬೇರೆ ಖಾತೆಗಳಿಂದ ಹಣವನ್ನು ರವಾನಿಸಿದ್ದಾರೆ ಎಂದು ಹೇಳಿದೆ. ಮ್ಯಾಟರ್‌ಹಾರ್ನ್ ವೆಂಚರ್ಸ್ ಕಂಪನಿಯನ್ನು ಸಾರ್ವಜನಿಕ ಷೇರುದಾರ ಎಂದು ತಪ್ಪಾಗಿ ಗುರುತಿಸಲಾಗಿದೆ. ಆದರೂ ಅದರ 9.98 ಶೇಕಡಾ ಷೇರುಗಳು ಪ್ರವರ್ತಕ ವರ್ಗಕ್ಕೆ ಸೇರಿದೆ ಎಂಬುದನ್ನು ಸೆಬಿ ತನಿಖೆಯಲ್ಲಿ ಹೇಳಿದೆ.

ಸೆಬಿ ತನ್ನ 37 ಪುಟಗಳ ತನಿಖಾ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಇದೀಗ ಸೆಬಿ ಮುಖ್ಯ ಜನರಲ್ ಮ್ಯಾನೇಜರ್ ಅನಿತಾ ಅನೂಪ್ ಅವರು ಮಲ್ಯ ಅವರಿಗೆ ನೋಟಿಸ್ ನೀಡಿದ್ದಾರೆ. 

ಈ ನೋಟಿಸ್​​​ನಲ್ಲಿ ತಮ್ಮ ವಹಿವಾಟುಗಳು / ನಿಧಿಯ ಹರಿವಿನ ಅಕ್ರಮವಾಗಿದ್ದು, ಷೇರುಗಳಲ್ಲಿ ಪರೋಕ್ಷವಾಗಿ ವ್ಯಾಪಾರ ಮಾಡುವ ಯೋಜನೆ ಹಾಕಿದ್ದು , ನಮ್ಮ ಮಾನದಂಡಗಳನ್ನು ಧಿಕ್ಕರಿಸಿ ಭಾರತೀಯ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಅಕ್ರಮವಾಗಿ ವ್ಯಾಪಾರ ಮಾಡಲು ಮುಂದಾಗಿದ್ದೀರಾ. ಈ ಕೃತ್ಯಗಳು ಮೋಸ ಮತ್ತು ವಂಚನೆ ಮಾತ್ರವಲ್ಲದೆ ಸೆಕ್ಯುರಿಟೀಸ್ ಮಾರುಕಟ್ಟೆಯ ಸಮಗ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ.

ಇದಕ್ಕಾಗಿ ಮಲ್ಯ ಅವರನ್ನು ಸೆಬಿಯು ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಹಾಗೂ ಸೆಕ್ಯುರಿಟಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ಇತರ ರೀತಿಯಲ್ಲಿ ವ್ಯವಹಾರ ನಡೆಸುವುದು ಹಾಗೂ ಯಾವುದೇ ರೀತಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಗೆ ಪ್ರವೇಶ ನಡೆಸದಂತೆ ನಿರ್ಬಂಧಿಸಲಾಗಿದೆ. ಇದರ ಜತೆಗೆ ಮಲ್ಯ ಅವರನ್ನು ತನಿಖೆ ಒಳಪಡಿಸುವಂತೆ ಆದೇಶ ನೀಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist