Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಮಂಗಳೂರು: ಮಹಿಳಾ ನಿರ್ದೇಶಕಿ ಜೋಶ್ನಾ ರಾಜ್ ಅದ್ಭುತ ನಿರ್ದೇಶನದ, ಪ್ರತಿಭಾವಂತ ಕಾರ್ತಿಕ್ ರಾಜ್ ನೀಡಿರುವ ಅದ್ಭುತ ಹಿನ್ನೆಲೆ ಸಂಗೀತ , ನಾಯಕ ನಟಿ ಚೈತ್ರಾ ಶೆಟ್ಟಿ, ನಾಯಕ ನಟ ವಿಕ್ಕಿ ರಾವ್ ಮನೋಜ್ಙ ಅಭಿನಯದ ಭರವಸೆಯ ಚಲನಚಿತ್ರ ಸಾಂಕೇತ್ (Sanket) ಈ ತಿಂಗಳ 26ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಇನ್ನುಳಿದ ಪಾತ್ರಗಳಲ್ಲಿ ರೂಪ ಶ್ರೀ ವಾರ್ಕಡಿ, ಮೋಹನ್ ಶೇನಿ, ಅಮೀನ್ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಪ್ರೀಮಿಯರ್ ಶೋಗಳಲ್ಲಿ ಎಲ್ಲರಿಂದಲೂ ಬೇಸ್ ಎನಿಸಿಕೊಂಡಿರುವ ಸಿನಿಮಾ ತನ್ನ ಮಿಸ್ಟ್ರಿಗಾಗಿ ಈಗಾಗಲೇ ಪ್ರೀಮಿಯರ್ ಶೋ ನೋಡಿದವರ ಗಮನ ಸೆಳೆದಿದೆ.
ಕನ್ನಡದ ಭರವಸೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳನ್ನು ಈ ಸಿನಿಮಾ ಹೊಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ತಿಂಗಳ 26 ರಂದು ಕರ್ನಾಟಕ ರಾಜ್ಯದ್ಯಂತ ಬಿಡುಗಡೆಯಾಗಲಿರುವ ಭರವಸೆಯ ಚಲನಚಿತ್ರ ಸಾ೦ಕೇತ್, ತನ್ನ ರೋಮಾಂಚನದ ಕಥೆಯ ಮೂಲಕ ಪ್ರೇಕ್ಷಕರನ್ನು ಮುಟ್ಟಲಿದೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.
ವ್ಯಕ್ತಿಗಳು ಎದುರಿಸುವ ಸಾಮಾಜಿಕ ಹಾಗೂ ಮಾನಸಿಕ ಒತ್ತಡಗಳ ಆಧಾರವಾಗಿರಿಸಿ, ಒಬ್ಬ ವ್ಯಕ್ತಿಯ ಮದುವೆ-ಮಕ್ಕಳ ವಿಷಯದ ತೊಳಲಾಟವನ್ನು ಬಿಂಬಿಸುವ ವಿಭಿನ್ನ ಶೈಲಿಯ ‘ಸಾಂಕೇತ್’ ಕನ್ನಡ ಸಿನೆಮಾ ಜು.26ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಪತ್ರಿಕಾಭವನದಲ್ಲಿ ಸೋಮವಾರ (ಜು.15ರಂದು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನೆಮಾದ ನಿರ್ದೇಶಕಿ ಜ್ಯೋತ್ಸ್ನಾ ಕೆ.ರಾಜ್ ಅವರು, ತನ್ನ ಜೀವನವು ಮದುವೆ ಆಗಿ ಮಕ್ಕಳನ್ನು ಹೊಂದಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಒಬ್ಬ ಯುವಕ ನಂಬಿರುತ್ತಾನೆ. ಆದರೆ ಮದುವೆಯ ಕೆಲವು ವರ್ಷಗಳ ನಂತರ ಮಕ್ಕಳನ್ನು ಹೊಂದುವ ಯಾವುದೇ ವಿಧಾನ ಫಲ ನೀಡದಾಗ ತಲ್ಲಣಗೊಂಡ ವ್ಯಕ್ತಿ ಅಸಾಂಪ್ರದಾಯಿಕ ವಿಧಾನ ಪರಿಶೀಲಿಸಲು ಹೊರಡುತ್ತಾನೆ. ತನ್ನ ಸುತ್ತಲಿನ ಪ್ರತಿಯೊಬ್ಬರ ಜೀವನವನ್ನು ಯಾವ ರೀತಿ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ಆಧಾರವಾಗಿಸಿ ಸಿನಿಮಾ ಮಾಡಲಾಗಿದೆ. ಇದೊಂದು ಕನ್ನಡದ ವಿಭಿನ್ನ ಪ್ರಯತ್ನ ಎಂದರು.
ನಟಿ ಚೈತ್ರಾ ಶೆಟ್ಟಿ ಮಾತನಾಡಿ, ಸ್ವತಃ ಸಂಪಾದನೆ, ಧ್ವನಿ ವಿನ್ಯಾಸ ಹಾಗೂ ನಿರ್ದೇಶನವನ್ನು ಜ್ಯೋತ್ಸ್ನಾ ಕೆ.ರಾಜ್ ನಿಭಾಯಿಸಿದ್ದಾರೆ. ವಿಕ್ಕಿ ರಾವ್, ಮೋಹಣ್ ಶೇಣಿ, ರೂಪಾಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಗಮನಸೆಳೆದಿದೆ. ಹೀಗಾಗಿ ಸಿನೆಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ ಎನ್ನುತ್ತಾರೆ.
ನಿರ್ದೇಶಕಿ ಜ್ಯೋತ್ಸ್ನಾ ಕೆ.ರಾಜ್ ಅವರು ಸಂಕಲನಕಾರ ಹಾಗೂ ಧ್ವನಿ ವಿನ್ಯಾಸಕಿಯಾಗಿ ಸಾಧನೆ ಮಾಡಿದ್ದು ಕೇರಳದ ಕುಂಬಳೆಯವರು. 2018ರಲ್ಲಿ ನಾಟಕ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದರು. ಸಿನಿಮಾ ಕುರಿತಾದ ವಿಶೇಷ ಅನುಭವ ಪಡೆದಿದ್ದಾರೆ. ರಾಜ್ ಕಾರ್ತಿಕ್ ಅವರು ಸಿನೆಮಾಟೊಗ್ರಫಿ ನಡೆಸಿದ್ದಾರೆ. ಪ್ರಕಾಶ್ ವಿ.ರಾವ್ ಸಾಹಿತ್ಯ ಬರೆದಿದ್ದು, ವಿವಿಧ ಯುವ ತಂಡವೇ ಸಿನೆಮಾ ಮಾಡಿದ್ದಾರೆ ಎಂದರು.