ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು; ಮೂವರ ರಕ್ಷಣೆ
Twitter
Facebook
LinkedIn
WhatsApp
ಮಂಗಳೂರು: ಉಳ್ಳಾಲದ ಕಡಲ ತೀರದಲ್ಲಿ (Ullala beach) ಅಲೆಗಳ ಅಬ್ಬರಕ್ಕೆ ಪ್ರವಾಸಕ್ಕೆ ಬಂದಿದ್ದ ಓರ್ವ ಮಹಿಳೆ ಸಮುದ್ರದ ಪಾಲಾಗಿದ್ದು, ಮೂವರು ಮಹಿಳೆಯರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ
ಮೃತ ಮಹಿಳೆಯನ್ನು ಪರಿಮೀ ರತ್ನ ಕುಮಾರಿ (57) ಎಂದು ಗುರುತಿಸಲಾಗಿದೆ. ಆಂದ್ರಪ್ರದೇಶದ Andhra Pradesh) ಸಿರಿಲಿಂಗಪಲ್ಲಿ ಮೂಲದ ನಾಲ್ವರು ಮಹಿಳೆಯರು ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದರು. ನೀರಿನಲ್ಲಿ ಆಟ ಆಡುತ್ತಿದ್ದ ವೇಳೆ ಬೃಹತ್ ಅಲೆಯೊಂದು ಮೂವರು ಮಹಿಳೆಯರನ್ನು ಎಳೆದೊಯ್ದಿದೆ. ಈ ವೇಳೆ ರತ್ನ ಕುಮಾರಿ ಸಾವಿಗೀಡಾಗಿದ್ದು, ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ
ಪರಿಮೀ ರತ್ನ ಕುಮಾರಿಯವರನ್ನು ಸಹ ಸ್ಥಳೀಯರು ತಕ್ಷಣ ದಡಕ್ಕೆ ತಂದಿದ್ದು, ಈ ವೇಳೆ ಮಹಿಳೆ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿರುವುದನ್ನು ಕಂಡು, ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ
ಹೈದರಾಬಾದ್‍ನಿಂದ 5 ಮಂದಿ ಮಹಿಳೆಯರ ತಂಡ ಜೂ.ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಬಳಿಕ ಕಾರಿನ ಮೂಲಕ ಜೂ.7 ಕ್ಕೆ ಕೊಡಗಿಗೆ ತೆರಳಿ, ಬಳಿಕ ಜೂ.9ಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳಿ ಅಲ್ಲಿಂದ ಉಳ್ಳಾಲಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ