Pears: ಪಿಯರ್ಸ್ ಹಣ್ಣು ಮಾರುಕಟ್ಟೆಯಲ್ಲಿ ಎಷ್ಟು ಫೇಮಸೋ ಅಷ್ಟೇ ಆರೋಗ್ಯಕ್ಕೂ; ಇಲ್ಲಿದೆ ಮಾಹಿತಿ
ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಲ್ಲಿ ಪಿಯರ್ಸ್ ಹಣ್ಣು ಸಹ ಒಂದು. ಇದು ಬಹು ದಿನಗಳ ಕಾಲ ಕೆಡದಂತೆ ಇಡಬಹುದಾದ ಹಣ್ಣು ಎಂದು ಪರಿಗಣಿಸಲಾಗಿದೆ. ಚೀನಾ ಮತ್ತು ಮಧ್ಯಪ್ರಾಚ್ಯ ಎನ್ನುವ ಎರಡು ವಿಭಿನ್ನ ಪ್ರದೇಶಗಳು ಈ ಹಣ್ಣಿನ ಮೂಲ ಸ್ಥಾನ. ಪ್ರಸ್ತುತವಾಗಿ ಒರೆಗಾನ್ ಮತ್ತು ವಾಷಿಂಗ್‍ಟನ್ ಅಲ್ಲಿ ಈ ಹಣ್ಣನ್ನು ಅಧಿಕವಾಗಿ ಬೆಳೆಯುತ್ತಾರೆ. ಉತ್ತಮ ಆದಾಯವನ್ನು ನೀಡುವ ಈ ಹಣ್ಣು ಆರೋಗ್ಯಕ್ಕೂ ಉತ್ತಮ ಪೋಷಣೆ ನೀಡುವುದು. ಗಣನೀಯವಾಗಿ ಇದನ್ನು ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು.
ಇದರಲ್ಲಿ ಪೊಟ್ಯಾಶಿಯಂ ಪೋಷಕಾಂಶ ಹಾಗೂ ದೇಹಕ್ಕೆ ಅಗತ್ಯವಿರುವ ವಿಟಮಿನ್ಗಳು ಕಂಡು ಬರುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಕಂಡು ಬರುವುದರಿಂದ ಇದು ದೇಹದಲ್ಲಿ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಋತು ಬದಲಾದಂತೆ ವೈರಸ್ ಸೋಂಕಿನ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಳೆಗಾಲದ ಆರಂಭ, ಚಳಿಗಾಲದ ಆರಂಭದಲ್ಲಿ ಅನೇಕರಿಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಋತುವಿನ ಖಾಯಿಲೆಯಾದ ನೆಗಡಿ, ಕೆಮ್ಮು (Cough), ಜ್ವರ ಸಮಸ್ಯೆಗಳು ಬರಲಾರಂಭಿಸುತ್ತವೆ. ನೀವು ಸಹ ಈ ಕಾಯಿಲೆಗಳಿಂದ ಬಳಲುತ್ತಿದ್ದರೆ ಆ ಸಂದರ್ಭದಲ್ಲಿ ಪಿಯರ್ಸ್ ಸೇವಿಸಬೇಡಿ. ಪಿಯರ್ಸ್ ಗುಣದಲ್ಲಿ ತಣ್ಣನೆ ಸ್ವಭಾವ ಹೊಂದಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು . ಆದ್ದರಿಂದ, ಶೀತ (Cold), ಕೆಮ್ಮಿನ ಸಮಯದಲ್ಲಿ ಪಿಯರ್ಸ್ ಹಣ್ಣಿನಿಂದ ದೂರವಿರುವುದು ಒಳ್ಳೆಯದು.
ಪಿಯರ್ಸ್ ಹಣ್ಣನ್ನು ಮರಸೇಬು ಎಂದೂ ಕರೆಯುತ್ತಾರೆ. ಇದು ಹೃದಯದ ಆರೋಗ್ಯವನ್ನು ಸದೃಢವಾಗಿರಿಸಲು ಸಹಾಯಕವಾಗಿದೆ. ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಈ ಹಣ್ಣಿನ ಸೇವನೆ ಉತ್ತಮವಾಗಿದೆ. ಮರಸೇಬು ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಎ, ಬಿ ಮತ್ತು ಸಿ ಜೀವಸತ್ವಗಳು ಕಂಡು ಬರುತ್ತವೆ. ಇವು ನಿಮ್ಮ ಆರೋಗ್ಯ ಸುಧಾರಣೆಗೆ ಅವಶ್ಯಕವಾಗಿದೆ.
ಪಿಯರ್ಸ್ ಹಣ್ಣನ್ನು ಖರೀದಿಸುವಾಗ ಕೆಲವು ಜಾಗ್ರತೆಯನ್ನು ನಿರ್ವಹಿಸಬೇಕು. ಹಣ್ಣು ತುಂಬಾ ಗಟ್ಟಿಯಾಗಿರುವುದನ್ನು ಖರೀದಿಸಬೇಡಿ. ಹಣ್ಣಿನ ಸಿಪ್ಪೆಯು ನಯವಾಗಿದೆಯೇ ಎನ್ನುವುದನ್ನು ಪರಿಶೀಲಿಸಿ. ಕಂದು ಬಣ್ಣದಿಂದ ಕೂಡಿರುವ ಹಣ್ಣು ಹೆಚ್ಚು ಪರಿಮಳದಿಂದ ಕೂಡಿರುತ್ತದೆ. ಪಿಯರ್ಸ್ ಹಣ್ಣನ್ನು ಮುಟ್ಟಿದ ತಕ್ಷಣ ಅದು ಮೃದುವಾಗಿದ್ದಂತೆ ಇದ್ದರೆ ಅತಿಯಾಗಿ ಹಣ್ಣಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಅಂತಹ ಹಣ್ಣುಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸಿಕೊಳ್ಳಬಹುದು. ಕಚ್ಚಾ ಹಣ್ಣನ್ನು ಸೇವಿಸಲು ಅಷ್ಟು ಉತ್ತಮವಾಗಿ ಇರುವುದಿಲ್ಲ. ಹಣ್ಣಿನ ತೊಟ್ಟಿನ ಭಾಗದಲ್ಲಿ ಅತಿಯಾಗಿ ಮೃದುವಾಗಿದ್ದರೆ ಅದು ಹೆಚ್ಚು ಹಣ್ಣಾಗಿರುವುದನ್ನು ಸೂಚಿಸುತ್ತದೆ.
ತೂಕ ಹೆಚ್ಚಿಸದೆ ಸಾಕಷ್ಟು ಕ್ಯಾಲೋರಿ ನೀಡುತ್ತದೆ
ತೂಕ ಹೆಚ್ಚಾಗುವ ಭಯವಿಲ್ಲದೇ ನಿಮಗೆ ಬೇಕಾದಷ್ಟು ಪೇರಳೆ ಹಣ್ಣುಗಳನ್ನು ಸೇವಿಸಿ. ಏಕೆಂದರೆ ಪಿಯರ್ ಕಡಿಮೆ ಕ್ಯಾಲೋರಿಯ ಆಹಾರವಾಗಿದೆ. ಮಧ್ಯಮ ಗಾತ್ರದ ಪೇರಳೆಯು ಸುಮಾರು 96 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ದೊಡ್ಡದು ಸುಮಾರು 130 ಕ್ಯಾಲೋರಿ ನೀಡುತ್ತದೆ. ಸರಾಸರಿ ಪುರುಷನಿಗೆ ದಿನಕ್ಕೆ 2,700 ಕೆ.ಕೆ.ಎಲ್ ಮತ್ತು ಸರಾಸರಿ ಮಹಿಳೆಗೆ ದಿನಕ್ಕೆ 2,200 ಕೆ.ಕೆ.ಎಲ್ ಅಗತ್ಯವಿದೆ ಮತ್ತು ಈ ಕ್ಯಾಲೋರಿಗಳು ನೈಸರ್ಗಿಕ ಮತ್ತು ಆರೋಗ್ಯಕರ ಆಹಾರದಿಂದ ಬರಬೇಕು. ಪೇರಳೆಯು ಉತ್ತಮ ಕ್ಯಾಲೋರಿಗಳಿಗೆ ಅವಲಂಬಿತವಾಗಿರುವಂತಹ ಆಹಾರವಾಗಿದೆ.
ಸಾಕಷ್ಟು ಫೈಬರ್
ಪಿಯರ್‌ನಲ್ಲಿ ಮುಖ್ಯ ಗುಣಲಕ್ಷಣವೆಂದರೆ ಅದರಲ್ಲಿ ಕರಗಬಲ್ಲ ಮತ್ತು ಕರಗದ ಎರಡೂ ಫೈಬರ್ ಅಂಶಗಳಿದೆ. ಮಧ್ಯಮ ಪೇರಳೆಯಲ್ಲಿ ಸುಮಾರು 5.5 ಗ್ರಾಂನಿಂದ 7 ಗ್ರಾಂ ಫೈಬರ್ ಇರುತ್ತದೆ. ಆಹಾರದಲ್ಲಿ ನಾರಿನಂಶ ಹೆಚ್ಚಾದಷ್ಟೂ ಊಟದ ನಂತರ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ನೀವು ದಿನವಿಡೀ ಕಡಿಮೆ ತಿನ್ನಲು ಒಲವು ತೋರುವುದರಿಂದ ಇದು ತೂಕ ನಷ್ಟಕ್ಕೆ ಸಹ ಸಹಾಯ ಮಾಡುತ್ತದೆ. ಫೈಬರ್ ದೇಹಕ್ಕೆ ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
ಕ್ಯಾನ್ಸರ್ ತಡೆಯುವುದು
ಪಿಯರ್ಸ್ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದನ್ನು ಗಣನೀಯವಾಗಿ ಸೇವಿಸುವುದರಿಂದ ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್ಸ್‍ಗಳ ವಿರುದ್ಧ ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ಹಣ್ಣನ್ನೇ ಮಿತಿಯಿಲ್ಲದೆ ಸೇವಿಸುವುದರಿಂದ ಪ್ರಮಾಣವು ಹೆಚ್ಚಾಗಿ ಕ್ಯಾನ್ಸರ್ ಬರುವ ಸಾಧ್ಯತೆಯೂ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು
ಪಿಯರ್ಸ್ ಹಣ್ಣಿನಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಂ ಖನಿಜಗಳು ತುಂಬಿರುತ್ತವೆ. ಇವು ರಕ್ತ ಪರಿಚಲನೆ ಮತ್ತು ಹೃದಯದ ಸ್ನಾಯುಗಳ ಸುಧಾರಣೆಗೆ ಸಹಾಯ ಮಾಡುವುದು. ಇದರಲ್ಲಿ ಇರುವ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಹೃದಯದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡುವಂತೆ ಮಾಡುವುದು. ರಕ್ತ ಸಂಚಾರವನ್ನು ಸುಗಮ ಗೊಳಿಸುವುದು. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯುವುದು.
ಕೊಲೈಟಿಸ್ ಅಪಾಯವನ್ನು ತಡೆಯುವುದು
ಕರುಳಿನಲ್ಲಿ ಉರಿಯೂತದಿಂದ ಉಂಟಾಗುವ ಅನಾರೋಗ್ಯಕ್ಕೆ ಕೊಲೈಟಿಸ್ ಎಂದು ಕರೆಯಲಾಗುವುದು. ಪಿಯರ್ಸ್ ಹಣ್ಣಿನಲ್ಲಿ ಇರುವ ನಾರಿನಂಶವು ಕರುಳಿನ ಆರೋಗ್ಯವನ್ನು ಕಾಪಾಡುವುದು. ಕರುಳಿನಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯಮಾಡುವುದು. ಕೊಲೋನ್ ಸಮಸ್ಯೆ ಇರುವವರು ದಿನದ ಪ್ರಮುಖ ಮೂರು ಊಟದ ಮೊದಲು ಪಿಯರ್ಸ್ ಹಣ್ಣನ್ನು ಸೇವಿಸಬೇಕು. ದಿನಕ್ಕೆ ಅರ್ಧ ಕಿಲೋ ಗಳಷ್ಟು ಪಿಯರ್ಸ್ ಹಣ್ಣನ್ನು ಸೇವಿಸಿದರೆ ಒಂದು ವಾರದಲ್ಲಿ ಕೋಲನ್ ಸಮಸ್ಯೆಯನ್ನು ನಿವಾರಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಣ್ಣಿನ ಸಿಪ್ಪೆಯನ್ನು ತೆಗೆದು ಸೇವಿಸಬೇಕು ಎಂದು ಹೇಳಲಾಗುವುದು.
ವಿಷವನ್ನು ನಿವಾರಿಸುತ್ತದೆ
ಪಿಯರ್‌ನಲ್ಲಿರುವ ಫೈಬರ್ ಅಂಶವು ಡೈವರ್ಟಿಕ್ಯುಲೈಟಿಸ್‌ನಂತಹ ರೋಗಗಳನ್ನು ತಡೆಗಟ್ಟಲು ಈ ಹಣ್ಣು ಸಹಕಾರಿ. ಡೈವರ್ಟಿಕ್ಯುಲೈಟಿಸ್ ಎಂಬುದು ದೊಡ್ಡ ಕರುಳಿನಲ್ಲಿ ಜೀರ್ಣಕಾರಿ ಸ್ಥಿತಿಯಾಗಿದೆ. ದೊಡ್ಡ ಕರುಳಿನ ಒಳಪದರದಲ್ಲಿ ಉಬ್ಬುವ ಚೀಲಗಳು ಉಬ್ಬಿದಾಗ ಇದು ಸಂಭವಿಸುತ್ತದೆ. ಹೆಚ್ಚಿನ ಫೈಬರ್ ಆಹಾರವು ಕರುಳಿನಲ್ಲಿರುವ ನೀರನ್ನು ಹೀರಿಕೊಳ್ಳುವ ಮೂಲಕ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಸುಲಭವಾದ ಕರುಳಿನ ಚಲನೆಯು ಕರುಳಿನಲ್ಲಿ ಉರಿಯೂತವನ್ನು ತಡೆಯುತ್ತದೆ.