ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.!

Twitter
Facebook
LinkedIn
WhatsApp
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು.!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಇರುವುದೇ ಹಾಗೆ. ಮಳೆ ಬಂದರೆ ಅತಿಯಾದ ಮಳೆ, ಚಳಿಗಾಲದಲ್ಲಿ ವಿಪರೀತ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲು. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯ ಮಂಗೇಶ್‌ಪುರದಲ್ಲಿ (Mungeshpur) ಬುಧವಾರ (ಮೇ 29) ಮಧ್ಯಾಹ್ನ 2.30ರ ಸುಮಾರಿಗೆ 52.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ (Delhi Temperature) ದಾಖಲಾಗಿದ್ದು, ದೇಶದ ಇತಿಹಾಸದಲ್ಲಿಯೇ ಗರಿಷ್ಠ ತಾಪಮಾನ ಇದಾಗಿದೆ ಎಂದು ತಿಳಿದುಬಂದಿದೆ. ಚುರುಗುಡುವ ಬಿಸಿಲು, ಮನೆಯಲ್ಲಿ ಕೂತರೂ ಬೆವರುವ ಪರಿಸ್ಥಿತಿ ಎದುರಾದ ಕಾರಣ ರಾಜಧಾನಿ ಜನ ಪರಿತಪಿಸುವಂತಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯತ್ತ ಉಷ್ಣಮಾರುತ ಅಪ್ಪಳಿಸುತ್ತಿದೆ. ಮಳೆಯೂ ಇಲ್ಲದ ಕಾರಣ ಬಿಸಿಲು ಮತ್ತಷ್ಟು ಜೋರಾಗಿದೆ. ನಿರೀಕ್ಷೆಗಿಂತ ಬರೋಬ್ಬರಿ 9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಾಗಿರುವುದು ಜನ ಹೈರಾಣಾಗುವಂತೆ ಮಾಡಿದೆ. ದೆಹಲಿಯಲ್ಲಿ 2002ರಲ್ಲಿ 49.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆದರೀಗ, ತಾಪಮಾನವು 50 ಡಿಗ್ರಿ ಸೆಲ್ಸಿಯಸ್‌ ದಾಟಿರುವುದು ಜನರಿಗೆ ಚಿಂತೆಯಾಗಿದೆ. ತಾಪಮಾನದ ಕುರಿತು ದೆಹಲಿಯ ಹವಾಮಾನ ಇಲಾಖೆಯ ಕಚೇರಿಯು ಮಾಹಿತಿ ನೀಡಿದೆ.

 

ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯುತ್‌ ಬೇಡಿಕೆ ಪ್ರಮಾಣವೂ ದಾಖಲೆಯಾಗಿದೆ. ದೆಹಲಿಯ ವಿದ್ಯುತ್‌ ಬಳಕೆಯು ಗುರುವಾರ ಮಧ್ಯಾಹ್ನದ 3.36ರ ಸುಮಾರಿಗೆ 8,300 ಮೆಗಾವ್ಯಾಟ್‌ ದಾಟಿದೆ. ಇದು ದೆಹಲಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಳಕೆಯಾದ ವಿದ್ಯುತ್‌ ಪ್ರಮಾಣ ಎಂಬ ದಾಖಲೆಯಾಗಿದೆ. ವಿದ್ಯುತ್‌ ಪೂರೈಕೆ ಕಂಪನಿಗಳ ಪ್ರಕಾರ ದೆಹಲಿಗೆ ನಿತ್ಯ 8,200 ಮೆಗಾ ವ್ಯಾಟ್‌ ವಿದ್ಯುತ್ ಬೇಕಾಗುತ್ತಿತ್ತು. ಆದರೆ, ತಾಪಮಾನ ಜಾಸ್ತಿಯಾದ ಕಾರಣ ಪ್ರತಿಯೊಂದು ಮನೆಯಲ್ಲೂ ನಿರಂತರವಾಗಿ ಫ್ಯಾನ್‌, ಕೂಲರ್‌ ಹಾಗೂ ಎ.ಸಿ ಬಳಸುತ್ತಿರುವ ಕಾರಣ ವಿದ್ಯುತ್‌ ಬೇಡಿಕೆಯೂ ದಾಖಲೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ನಜಾಫ್‌ಗಢ, ಮಂಗೇಶ್‌ಪುರ ಹಾಗೂ ನರೇಲಾದಲ್ಲಿ ಗುರುವಾರ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕನಿಷ್ಠ ಎಂಬಂತಾಗಿದೆ. ಇದರಿಂದಾಗಿ ಬಹುತೇಕ ನಗರಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹೆಚ್ಚು ಮರುಭೂಮಿ ಹೊಂದಿರುವ ರಾಜಸ್ಥಾನದ ಫಲೋಡಿಯಲ್ಲಿ ಗರಿಷ್ಠ 51 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಬಂಗಾಳ ಕೊಲ್ಲಿಯಿಂದ ತಂಪು ಗಾಳಿ ಬೀಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ತಾಪಮಾನ ನಿಯಮಿತವಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist