ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಸಿಟ್ಟಿಗೆದ್ದು ಚಾಕುವಿನಿಂದ ಇರಿದು ಹಲ್ಲೆ ; ಆರೋಪಿ ವಶಕ್ಕೆ..!

ಗದಗ, ಮೇ 26: ಭಜನಾ ಮಂಡಳಿಗೆ ಸೇರಿಸಿಕೊಳ್ಳದ್ದಕ್ಕೆ ಸಿಟ್ಟಿಗೆದ್ದು ಹಾಡ ಹಗಲೇ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ (knife) ಇರಿದು ಹಲ್ಲೆ (attack) ಮಾಡಿರುವಂತಹ ಘಟನೆ ಗದಗದ ಟಾಂಗಾ ಕೂಟ್ ಬಳಿ ನಡೆದಿದೆ. ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ವಿನಾಯಕ ಕಬಾಡಿಯಿಂದ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿ ವಿನಾಯಕನನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಲ್ಲೆಗೊಳಗಾದ ಗೋವಿಂದರಾಜ ಶಿರಹಟ್ಟಿ ಇಸ್ಕಾನ್ ಕೀರ್ತನೆ ಸಂಘ ನಡೆಸುತ್ತಿದ್ದರು. ಇದೇ ಸಂಘದಿಂದ ವಿನಾಯಕನನ್ನ ತೆಗೆದು ಹಾಕಲಾಗಿತ್ತು. 2018ರಿಂದ 2023ರವರೆಗೆ ಕೀರ್ತನಾ ಸಂಘದಲ್ಲಿದ್ದ ವಿನಾಯಕ ಕಬಾಡಿ, ಕಳೆದ 1 ವರ್ಷದಿಂದ ದೂರ ಇಡಲಾಗಿತ್ತು. ಇದಕ್ಕೆ ಆಕ್ರೋಶ ಕೂಡ ವ್ಯಕ್ತಪಡಿಸಲಾಗಿತ್ತು.
ಕಾರಣ ತಿಳಿಸದೆ ಸಂಘದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡಿದ್ದ ವಿನಾಯಕ, ಇದೇ ವಿಚಾರಕ್ಕೆ 1 ವರ್ಷದಿಂದ ಗೋವಿಂದರಾಜ ಜತೆ ಗಲಾಟೆ ಮಾಡುತ್ತಿದ್ದ. ಇಂದು ಟಾಂಗಾಕೂಟ್ ಬಳಿಯಿರುವ ಜಗನ್ನಾಥ ಕಿರಾಣಿ ಅಂಗಡಿಯಲ್ಲಿ ಕೂತಿದ್ದಾಗ ಗೋವಿಂದರಾಜ ಶಿರಹಟ್ಟಿ ಮೇಲೆ ಹಲ್ಲೆ ಮಾಡಲಾಗಿದೆ.
ಬೆಳ್ತಂಗಡಿ: ವಿದ್ಯಾರ್ಥಿಯ ಖಾತೆಯಿಂದ ಲಕ್ಷಾಂತರ ರೂ. ನಗದು ಅಪಹರಣ; ಪ್ರಕರಣ ದಾಖಲು
ಬೆಳ್ತಂಗಡಿ: ಉಜಿರೆಯ ಕಾಲೇಜೊಂದರ ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಯಿಂದ ಅಪರಿಚಿತರು ಲಕ್ಷಾಂತರ ರೂಪಾಯಿ ನಗದನ್ನು ಅಪಹರಿಸಿದ ಘಟನೆ ನಡೆದಿದ್ದು ಯು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ಕಾಲೇಜೊಂದರಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಪ್ರದೀಪ್ ಸುರೇಶ್ ರೂಗಿ ಎಂಬವವರ ಖಾತೆಯಲ್ಲಿದ್ದ 3.14 ಲಕ್ಷ ರೂ. ಹಣವನ್ನು ಅಪಹರಿಸಲಾಗಿದೆ.
ಮೇ 23 ರ ವರೆಗೆ ವಿದ್ಯಾರ್ಥಿ ಪ್ರದೀಪ್ ಅವರ ಖಾತೆಯಲ್ಲಿ ಹಣವಿತ್ತು. ಆ ಬಳಿಕ ಇವರ ಮೊಬೈಲ್ ಗೆ ಸಂದೇಶಗಳು ಬಂದಿದ್ದು, ಇದರಲ್ಲಿ ಒಟಿಪಿ ಬಂದಿದೆ. ಈ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು ಮರುದಿನ ಬೆಳಿಗ್ಗೆ ಖಾತೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಖಾತೆಯಲ್ಲಿದ್ದ 3,14,000 ರೂ. ವನ್ನು ಯಾವುದೋ ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದಕ ತಿಳಿದುಬಂದಿದೆ. ಇನ್ನು ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉಡುಪಿ – ನಡು ರಸ್ತೆಯಲ್ಲಿ ಗ್ಯಾಂಗ್ ವಾರ್ ನಡೆಸಿದ್ದ ಗುರುಡಾ ಗ್ಯಾಂಗ್ 6 ಮಂದಿ ಪುಡಿ ರೌಡಿಗಳ ಅರೆಸ್ಟ್
ಉಡುಪಿ : ರಾಷ್ಟ್ರೀಯ ಹೆದ್ದಾರಿ ಸಿನೆಮಾ ಸ್ಟೈಲ್ ನಲ್ಲಿ ಗ್ಯಾಂಗ್ ವಾರ್ ನಡೆಸಿದ್ದ ಉಡುಪಿಯ ಗರುಡಾ ಗ್ಯಾಂಗ್ ನ ಆರು ಪುಡಿ ರೌಡಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಂದು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಮಜೀದ್, ಅಲ್ಫಾಝ್, ಶರೀಫ್ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿ ಕಾಪುವಿನ ಕೊಂಬಗುಡ್ಡೆಯ ಆಶಿಕ್ ತೋನ್ಸೆಯ ರಾಕೀಬ್, ಸಕ್ಲೈನ್ ಈಗಾಗಲೇ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಶಾರದಾ ಮಂಟಪ ಜಂಕ್ಷನ್ ಬಳಿ ಲಾಂಗ್ ಹಿಡಿದು ಸಿನೆಮಾ ಸ್ಟೈಲ್ ನಲ್ಲಿ ಗಲಾಟೆ ಮಾಡಿಕೊಂಡಿದ್ದ ಗರುಡಾ ಗ್ಯಾಂಗ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು. ಇದೀಗ ಬಂಧಿತರ ಸಂಖ್ಯೆಸ 6 ಕ್ಕೆ ಏರಿಕೆಯಾಗಿದೆ. ಉಡುಪಿಯ ಗ್ಯಾಂಗ್ ವಾರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.