ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!
ಕಾವ್ಯಾ ಮಾರನ್ ಹೆಸರು ಈಗ ಐಪಿಎಲ್ ಜೊತೆಗೆ ಬೆರೆತು ಹೋಗಿದ್ದು, ಈಕೆಯ ಸೌಂದರ್ಯ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಓನರ್ ಈ ಬೆಡಗಿ. ಕಾವ್ಯಾ ಮಾರನ್ ತಂದೆಯ ಆಸ್ತಿಯೇ ಸಾವಿರಾರು ಕೋಟಿ ರೂಪಾಯಿ
ಸನ್ರೈಸರ್ಸ್ ಹೈದರಾಬಾದ್ ತಂಡವು (SRH) ಐಪಿಎಲ್ ಸೀಸನ್ 17ರ ಫೈನಲ್ಗೆ ಪ್ರವೇಶಿಸಿದೆ. ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 36 ರನ್ಗಳ ಜಯ ಸಾಧಿಸಿ ಎಸ್ಆರ್ಹೆಚ್ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಅತ್ತ ಎಸ್ಆರ್ಹೆಚ್ ಗೆಲ್ಲುತ್ತಿದ್ದಂತೆ ತಂಡದ ಮಾಲಕಿ ಕಾವ್ಯ ಮಾರನ್ ಕುಣಿದು ಕುಪ್ಪಳಿಸಿದರು
ನಿಮಗೆ ದೇಶದ ಅತ್ಯಂತ ಹಳೆಯ ಟಿವಿ ನೆಟ್ವರ್ಕ್ಗಳಲ್ಲಿ ಒಂದಾದ ಸನ್ ನೆಟ್ವರ್ಕ್ಸ್ ಗೊತ್ತೆ ಇರುತ್ತದೆ, ಹೀಗೆ ‘ಸನ್ ನೆಟ್ವರ್ಕ್ಸ್’ ಮಾಧ್ಯಮ ಸಮೂಹವನ್ನು ಹೊಂದಿರುವ ಕಲಾನಿಧಿ ಮಾರನ್ ಅವರ ಮಗಳೇ ಈ ಕಾವ್ಯಾ ಮಾರನ್. ಇದೇ ಕಲಾನಿಧಿ ಮಾರನ್ ಅವರು ಭಾರತದ ಅತ್ಯಂತ ಶ್ರೀಮಂತ ಮಾಧ್ಯಮ ಮಾಲೀಕರ ಪೈಕಿ ಪ್ರಮುಖರು ಎನ್ನಬಹುದು. ಯಾಕಂದ್ರೆ ಕಲಾನಿಧಿ ಮಾರನ್ ಬಳಿ ಸುಮಾರು 19,000 ಕೋಟಿ ರೂಪಾಯಿಗೂ ಆಸ್ತಿ ಇದೆ. ಹಾಗಾದರೆ ಕಲಾನಿಧಿ ಮಾರನ್ ಅವರ ಮಗಳು ಕಾವ್ಯಾ ಮಾರನ್ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇರಬಹುದು? ಈ ಒಂದು ಪ್ರಶ್ನೆ ನಿಮ್ಮಲ್ಲಿದ್ರೆ ಮುಂದೆ ತಿಳಿಯಿರಿ
ಕಾವ್ಯಾ ಮಾರನ್ ಅವರ ತಂದೆ ಕೋಟ್ಯಾಧಿಪತಿ, ದೇಶದ ಹಿರಿಯ ಉದ್ಯಮಿ. ಅವರು ಸನ್ ಗ್ರೂಪ್ನ ಮಾಲೀಕರಾಗಿದ್ದಾರೆ. ಅವರು ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ ಸಂಸ್ಥಾಪಕರೂ ಆಗಿದ್ದಾರೆ. ಫೋರ್ಬ್ಸ್ನ ಭಾರತೀಯ ಬಿಲಿಯನೇರ್ಗಳ ಪಟ್ಟಿಯಲ್ಲಿ ಕಲಾನಿದಿ ಮಾರನ್ 82ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಅವರ ಒಟ್ಟು ಸಂಪತ್ತು $2.85 ಶತಕೋಟಿಗಿಂತ ಹೆಚ್ಚು ಅಂದರೆ ಸರಿಸುಮಾರು 23,000 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. .ಕಲಾನಿದಿ ಮಾರನ್ ಅವರು 2010 ರಿಂದ 2015 ರವರೆಗೆ ಸ್ಪೈಸ್ಜೆಟ್ ಏರ್ಲೈನ್ನಲ್ಲಿ ಮಹತ್ವದ ಪಾಲನ್ನು ಹೊಂದಿದ್ದರು. ಕಲಾನಿತಿ ಮಾರನ್ ಅವರ ಪ್ರಸ್ತುತ ನಿವ್ವಳ ಮೌಲ್ಯ 23,633 ಕೋಟಿ ರೂ. ಕಲಾನಿತಿ ಮಾರನ್ ಅವರು ತಮ್ಮ ಅಪಾರ ಸಂಪತ್ತಿನ ಕಾರಣದಿಂದ ತಮಿಳುನಾಡು ರಾಜ್ಯದಿಂದ IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019 ರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಹಾಗಿದ್ರೆ ಕಾವ್ಯ ಮಾರಾನ್ ಆಸ್ತಿ ಎಷ್ಟಿರಬಹುದು?
ಕಾವ್ಯಾ ಮಾರನ್ ಅವರು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಸನ್ ನೆಟ್ವರ್ಕ್ಸ್ ಸಮೂಹದ ವ್ಯವಹಾರದಲ್ಲಿ ಕೂಡ ಸಹಾಯ ಮಾಡಿದ್ದರು. ಹೀಗೆ ತಮ್ಮ ಕುಟುಂಬದ ಉದ್ಯಮದಲ್ಲಿ ಪಳಗಿದ್ದ ಅವರು ಈಗ ಸನ್ರೈಸರ್ಸ್ ಹೈದರಾಬಾದ್ ತಂಡದ ಒಡತಿಯಾಗಿ ಮುನ್ನಡೆಸುತ್ತಿದ್ದಾರೆ. ಕಾವ್ಯಾ ಮಾರನ್ ಬಳಿಯಲ್ಲಿ, ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ ಎನ್ನಲಾಗುತ್ತದೆ. ಆದರೆ ಇದರ ಬಗ್ಗೆ ಈವರೆಗೂ ಅವರಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಎಸ್ಆರ್ಎಚ್ ನಿರ್ವಹಣೆಯ ಹೊರತಾಗಿ, ಕಾವ್ಯಾ ಮಾರನ್ ಅವರು ಸನ್ ಟಿವಿ ನೆಟ್ವರ್ಕ್ನ ವ್ಯಾಪಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಾವ್ಯಾ ಮಾರನ್ ಅವರ ನಿವ್ವಳ ಮೌಲ್ಯ 50 ಮಿಲಿಯನ್ ಡಾಲರ್ ಅಂದರೆ ಸುಮಾರು 409 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.