ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಎರಡು ಕಣ್ಣುಗಳು

Twitter
Facebook
LinkedIn
WhatsApp
ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಎರಡು ಕಣ್ಣುಗಳು

ನವದೆಹಲಿ: ನಿನ್ನೆ (ಮೇ.22) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಮತ್ತು ಆರ್ಆರ್ ನಡುವಿನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಪಡೆ 4 ವಿಕೆಟ್ಗಳ ಅಂತರದಿಂದ ಬೆಂಗಳೂರು ಪಡೆಯನ್ನು ಮಣಿಸಿ, ಕ್ವಾಲಿಫೈರ್ 2ಗೆ ಅಧಿಕೃತ ಪ್ರವೇಶ ಪಡೆಯಿತು. ಈ ಸೀಸನ್ನ ಮೊದಲಿನಿಂದಲೂ ಆರ್ಸಿಬಿ ಗೆಲುವಿನ ಮೇಲೆ ಭಾರೀ ಕಣ್ಣಿಟ್ಟಿದ್ದ ಕ್ರಿಕೆಟ್ ಫ್ಯಾನ್ಸ್ ಮತ್ತು ಮಾಜಿ ಕ್ರಿಕೆಟಿಗರು, ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ಸಿಬಿ ಸೋಲುತ್ತಿದ್ದಂತೆ, ಈ ಬಾರಿಯೂ ಕಪ್ ಕನಸು ನುಚ್ಚನೂರಾಯಿತು ಎಂದೇ ಅಭಿಪ್ರಾಯಿಸಿದರು.

ಕಳೆದ 16 ವರ್ಷಗಳಿಂದಲೂ ಒಂದು ಬಾರಿಯೂ ಕಪ್ ನೋಡದ ಆರ್ಸಿಬಿ ಖಂಡಿತ 17ನೇ ಸೀಸನ್ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಲೀಗ್ನ ಮಧ್ಯಂತರದಲ್ಲಿ ಸತತ ಸೋಲುಗಳಿಂದ ಕಂಗೆಟ್ಟು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿದ್ದನ್ನು ನೋಡಿ, ಪ್ಲೇಆಫ್ ಕನಸು ಮುಗಿಯಿತು ಎಂದೇ ಭಾವಿಸಿದ್ದರು. ಇದೆಲ್ಲದರ ನಡುವೆ ಬ್ಯಾಕ್ ಟು ಬ್ಯಾಕ್ ಗೆಲುವಿನ ಮೂಲಕ ಟಾಪ್ ಐದಕ್ಕೆ ಬಂದು, ರೋಚಕ ನಾಕೌಟ್ ಪಂದ್ಯದಲ್ಲಿಯೂ ಸಿಎಸ್ಕೆ ಮಣಿಸಿದ ಆರ್ಸಿಬಿ, ಐತಿಹಾಸಿಕವಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತು. ಇದು ನೋಡುಗರ ಹುಬ್ಬೇರುವಂತೆ ಮಾಡಿತು. ಜತೆಗೆ ಕೆಲವರ ಬಾಯಿಯನ್ನು ಮುಚ್ಚುವಂತೆ ಸಹ ಮಾಡಿತ್ತು.

ಇನ್ನು ಈ ಸೀಸನ್ನಲ್ಲಿ ಕಳೆದ ಆರ್ಸಿಬಿ ಮತ್ತು ಸಿಎಸ್ಕೆ ನಾಕೌಟ್ ಪಂದ್ಯವನ್ನು ನೋಡಿದವರ ಸಂಖ್ಯೆ ಗಮನಿಸಿದರೆ ಒಂದು ನಿಮಿಷ ಭಾರೀ ಆಶ್ಚರ್ಯಕ್ಕೆ ಒಳಗಾಗುವುದರಲ್ಲಿ ಅನುಮಾನವೇ ಬೇಡ. ಯಾಕಂದ್ರೆ, ಈ ರೋಚಕ ಪಂದ್ಯವನ್ನು ಕೇವಲ ಆನ್ಲೈನ್ನಲ್ಲಿ ನೋಡಿದವರು 50 ಕೋಟಿ ಜನ. ಅಂದಮೇಲೆ ಉಳಿದದ್ದು? ನೀವೇ ಊಹಿಸಿ. ಪ್ರತಿಬಾರಿಯ ಸೀಸನ್ನಲ್ಲಿಯೂ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ನೋಡಲು ಫ್ಯಾನ್ಸ್ ಹಂಬಲಿಸಿದರೆ, ಸಿಎಸ್ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಸದ್ಯ ಇದೇ ವಿಷಯವನ್ನು ಉಲ್ಲೇಖಿಸಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಧೋನಿ ಮತ್ತು ಕೊಹ್ಲಿ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ಅತ್ಯಂತ ಯಶಸ್ವಿ ನಾಯಕತ್ವ ಹೊಂದಿರುವ ಕ್ರಿಕೆಟಿಗ ಎಂದರೆ ಅದು ಮಹೇಂದ್ರ ಸಿಂಗ್ ಧೋನಿ. ಅದು ಕೇವಲ ಒಂದು ಫಾರ್ಮೆಟ್ಗೆ ಮಾತ್ರ ಸೀಮಿತವಲ್ಲ. ಐಪಿಎಲ್ ಇತಿಹಾಸದಲ್ಲಿ ಮಾಹಿ ಅವರದ್ದೇ ಅತ್ಯುತ್ತಮ ಕ್ಯಾಪ್ಟನ್ಸಿ ಮೊದಲಿಗೆ ಕಾಣುವುದು. ಈ ಸಂಗತಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಸಹ ತಿಳಿದಿದೆ. ಕ್ಯಾಪ್ಟನ್ಸಿಯಲ್ಲಿ ಧೋನಿ ಮೊದಲಿಗರಾದರೆ, ರನ್ಗಳ ಸುರಿಮಳೆ ಹರಿಸುವಲ್ಲಿ, ದಾಖಲೆಗಳನ್ನು ಮುರಿದು ತನ್ನದೇ ಹೊಸ ದಾಖಲೆ ಸೃಷ್ಟಿಸುವಲ್ಲಿ ವಿರಾಟ್ ಕೊಹ್ಲಿ ಮೊದಲಿಗರು. ಈ ಇಬ್ಬರನ್ನು ಮೈದಾನದಲ್ಲಿ ನೋಡುವುದೇ ಕ್ರಿಕೆಟ್ ಪ್ರಿಯರಿಗೆ ಒಂದು ಹಬ್ಬ.

ಆರ್ಸಿಬಿ ಪಂದ್ಯ ಸೋತ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, “ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಕಣ್ಣುಗಳು. ಒಮ್ಮೆ ಇವರಿಬ್ಬರು ನಿವೃತ್ತಿ ಘೋಷಿಸಿ, ಹೊರನಡೆದರೆ, ಖಂಡಿತವಾಗಿ ಈಗ ನಾವು ಹೇಗೆ ಐಪಿಎಲ್ ನೋಡುತ್ತಿದ್ದೇವೋ, ಆ ರೀತಿ ಮುಂದಿನ ದಿನಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಟಿ20 ಲೀಗ್ನಲ್ಲಿ ಪ್ರೀತಿಯಲ್ಲಿ ಬೀಳುವಂತೆ ಮಾಡಿದವರು ಈ ಎರಡು ಸ್ತಂಭಗಳು. ಇಂತಹ ಅದ್ಭುತ ಸ್ಪರ್ಧೆಯಲ್ಲಿ ಧೋನಿ ಮತ್ತು ವಿರಾಟ್ ಆಡುವುದನ್ನು ನೋಡುವುದೇ ನಮ್ಮ ಸೌಭಾಗ್ಯ” ಎಂದು ಅಭಿಮಾನಿಗಳ ಧ್ವನಿಯಾಗಿ ಈ ಮಾತನ್ನು ಹೇಳಿದ್ದಾರೆ,(ಏಜೆನ್ಸೀಸ್).

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist