ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!
ಬೆಳ್ತಂಗಡಿ: ಬೆಳ್ತಂಗಡಿಯ ರಾಜಕೀಯ ಇನ್ನೊಂದು ಮಜಲನ್ನು ತಲುಪುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ರಾಜಕೀಯ ಸಂಘರ್ಷದ ಮುನ್ಸೂಚನೆಯನ್ನು ಎರಡು ಪಕ್ಷದ ನಾಯಕರುಗಳು ನೀಡಿರುವ ಸಂಕೇತಗಳು ಲಭ್ಯವಾಗಿವೆ.
ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂದ್ವೇಷ ರಾಜಕಾರಣ ಶುರು ಮಾಡಿದ್ದಾರೆ ಇಂದು ಎಂಎಲ್ಎ ಹರೀಶ್ ಪೂಂಜಾ ಬಣದ ಆರೋಪ. ನಾವು ದ೦ಧೆಗಳನ್ನು ಮಟ್ಟ ಹಾಕುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ಎಂಎಲ್ಎ ಅಭ್ಯರ್ಥಿ ರಕ್ಷಿತ್ ಶಿವರಾಂ.
ಕಾಂಗ್ರೆಸಿನವರು ದ೦ದೇ ನಡೆಸುತ್ತಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ ಬಿಜೆಪಿ ನಾಯಕರುಗಳು.
ಎರಡು ಪಕ್ಷಗಳ ನಡುವೆ ವಾದ ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇದೆ. ಆದರೆ ಇದುವರೆಗೆ ನಡೆಯದೇ ಇದ್ದ ರಾಜಕೀಯ ಸಂಘಕ್ಕೆ ಬೆಳ್ತಂಗಡಿ ವೇದಿಕೆ ಒದಗಿಸಿದೆ.
ಇದು ದ್ವೇಷ ರಾಜಕೀಯಯೋ ಅಥವಾ ಕಾನೂನು ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಪ್ರಯತ್ನವೂ ಎಂಬುದನ್ನು ಬೆಳ್ತಂಗಡಿಯ ಜನ ತೀರ್ಮಾನಿಸಲಿದ್ದಾರೆ. ಯಾಕೆಂದರೆ ಬೆಳ್ತಂಗಡಿಯ ಜನರು ಎರಡು ನಾಯಕರುಗಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ವ್ಯವಸ್ಥೆ ದ್ವೇಷದ ಕಡೆಗೆ ತಿರುಗಿದಾಗ ಬೆಳ್ತಂಗಡಿಯ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.