ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಜನಪ್ರಿಯ ರಾಜಕೀಯ ನಾಯಕರಾಗಿ ಭಾರತದಲ್ಲಿ ಮೆರೆದಿದ್ದರು.
ಆದರೆ ಐದು , ಆರು ಹಂತದ ಚುನಾವಣೆಗಳನ್ನು ಪರಿಶೀಲಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ತುಸು ಕುಸಿದ ರೀತಿಯಲ್ಲಿ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಹಳೆಯ ಜನಪ್ರಿಯತೆಯನ್ನು ನರೇಂದ್ರ ಮೋದಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ದೇಶದ ಹಲವಾರು ರಾಜಕೀಯ ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶ, ಬಿಹಾರಗಳಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಹಿಂದಿಗಿಂತಲೂ ಕುಸಿದಿದೆ ಎಂದು ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿರುವ ಅನಿಸಿಕೆಯಾಗಿದೆ.
ಈ ಮೂಲಕ ಬಿಜೆಪಿ ತನ್ನ 400 ಸೀಟುಗಳ ಟಾರ್ಗೆಟನ್ನು 272 ಸೀಟುಗಳಿಗೆ ಇಳಿಸಿದೆ ಎಂದು ಆಂತರಿಕ ಮೂಲಗಳಿಂದ ತಿಳಿದು ಬಂದಿದೆ.
ಮೋದಿ ಜನಪ್ರಿಯತೆ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲುವ ಚುನಾವಣೆ ರಣತಂತ್ರಗಾರರ(Election strategyist )ಯೋಜನೆ ಈಗ ತುಸು ಹಿನ್ನಡೆ ಕಂಡಿದಂತೆ ಆಗಿದೆ ಎಂದು ತಿಳಿದು ಬಂದಿದೆ.
ರಾಜಕೀಯ ರಣತಂತ್ರಗಾರು ಯೋಚಿಸಿದಂತೆ ನರೇಂದ್ರ ಮೋದಿಯವರ ಜನಪ್ರಿಯತೆ ಆಧಾರದ ಮೇಲೆ ಚುನಾವಣೆಗಳನ್ನು ಗೆಲ್ಲುವ ವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆಯಾದಂತೆ ಭಾಸವಾಗುತ್ತಿದೆ.
ಈಗ ಇರುವ ರಣತಂತ್ರಗಳ ಆಧಾರದ ಮೇಲೆ ಟಾರ್ಗೆಟ್ ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಚಿ೦ತೆಗೆ ಒಡ್ಡಿದ ವಿಷಯವಾಗಿದೆ ಎಂಬುದು ಬಿಜೆಪಿಯ ಆಂತರಿಕ ವಲಯಗಳಿಂದ ತಿಳಿದು ಬಂದಿದೆ.
ಬಿಜೆಪಿ ಈ ಮೂಲಕ ಕೇವಲ 272 ಗಡಿ ದಾಟಿದರೆ ಸಾಕು ಎಂಬ ನಿರೀಕ್ಷೆಯಲ್ಲಿ ಇದೆ ಎಂದು ಆಂತರಿಕ ಮೂಲಗಳಿಂದ ತಿಳಿದು ಬಂದಿದೆ.