ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಂತಿಮ ಹಂತಕ್ಕೆ ಬಂದಿದ್ದು, ಮತದಾನ ಮುಗಿಯುವುದಕ್ಕೆ ಕೆಲವೇ ನಿಮಿಷಗಳು ಬಾಕಿ ಇವೆ. ಇನ್ನು ಸಂಜೆ 5 ಗಂಟೆ ವರೆಗೆ ಒಟ್ಟು 66.05ರಷ್ಟು ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ರಾಯಚೂರು 59.48%, ಬೀದರ್ 60.17%, ಕಲಬುರಗಿ 57.20%, ಚಿಕ್ಕೋಡಿ 72.75%, ಕೊಪ್ಪಳ 66.05%, ವಿಜಯಪುರ 60.95%, ಬಾಗಲಕೋಟೆ 65.55%, ಬೆಳಗಾವಿ 65.67%, ಬಳ್ಳಾರಿ 68.94%, ಹಾವೇರಿ 71.90%, ಶಿವಮೊಗ್ಗ 72.07% ಉತ್ತರ ಕನ್ನಡ 69.75%, ದಾವಣಗೆರೆ 70.90%, ಧಾರವಾಡ ಕ್ಷೇತ್ರದಲ್ಲಿ ಶೇ.67.15ರಷ್ಟು ಮತದಾನವಾಗಿದೆ.
ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!
Twitter
Facebook
LinkedIn
WhatsApp
ಮಧ್ಯಾಹ್ನ 3 ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.54.20 ರಷ್ಟು ಮತದಾನ
14 ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಶೇ.59.65, ಹಾವೇರಿಯಲ್ಲಿ ಶೇ.58.45, ಗುಲ್ಬರ್ಗದಲ್ಲಿ ಅತಿ ಕಡಿಮೆ ಶೇ.47.67ರಷ್ಟು ಮತದಾನವಾಗಿದೆ.
ಮಧ್ಯಾಹ್ನ 1 ಗಂಟೆ ವೇಳೆಗೆ ಕರ್ನಾಟಕದಲ್ಲಿ ಶೇ.41.59ರಷ್ಟು ಮತದಾನ
ಸುರಪುರದಲ್ಲಿ ಕಲ್ಲು ತೂರಾಟ
ಲೋಕಸಭಾ ಚುನಾವಣೆ ನಡುವೆ ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಶುರುವಾಗಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟದ ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಮತದಾನದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೈ-ಕಮಲ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಹಿನ್ನೆಲೆ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.