ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!

Twitter
Facebook
LinkedIn
WhatsApp
ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!

ಇದೀಗ ಅದರ ಫಲವಾಗಿ ವಿರಾಟ್ ಕೊಹ್ಲಿ ದಂಡದ ಭಾರ ಹೊರಬೇಕಾಗಿ ಬಂದಿದೆ. ವಾಸ್ತವವಾಗಿ ನಿನ್ನೆಯ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿನ ಅಸಮಾಧಾನ ಹೊರಹಾಕಿದ್ದ ಕೊಹ್ಲಿ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಅವರ ಈ ನಡುವಳಿಕೆಯ ವಿರುದ್ಧ ಬಿಸಿಸಿಐ ಕ್ರಮ ಕೈಗೊಂಡಿದೆ.

ಅದರಂತೆ ಕೊಹ್ಲಿ ಪಂದ್ಯ ಶುಲ್ಕದ 50 ಪ್ರತಿಶತ ಸಂಭಾವನೆಯನ್ನು ದಂಡವಾಗಿ ಪಾವತಿಸಬೇಕಾಗಿದೆ. ಈ ಮೂಲಕ ನಿನ್ನೆ ನಡೆದ ಎರಡು ಪಂದ್ಯಗಳಲ್ಲಿ ಮೂವರು ಆಟಗಾರರು ದಂಡಕ್ಕೊಳಗಾದಂತ್ತಾಗಿದೆ. ಕೊಹ್ಲಿಗೂ ಮುನ್ನ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೂಡ ನಿಧಾನಗತಿಯ ಓವರ್​ನಿಂದಾಗಿ ದಂಡಕ್ಕೊಳಗಾಗಿದ್ದರು.

ವಾಸ್ತವವಾಗಿ ಕೆಕೆಆರ್ ನೀಡಿದ 223 ರನ್‌ಗಳ ಗುರಿ ಬೆನ್ನತ್ತಿದ ಆರ್​ಸಿಬಿಗೆ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಆದರೆ ಇನ್ನಿಂಗ್ಸ್​ನ ಮೂರನೇ ಓವರ್​ ಬೌಲ್ ಮಾಡಲು ದಾಳಿಗಿಳಿದ ಹರ್ಷಿತ್ ರಾಣಾ ಎಸೆದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನವಾಯಿತು.

ರಾಣಾ ಬೌಲ್ ಮಾಡಿದ ಆ ಎಸೆತ ನಿಧಾನಗತಿಯ ಫುಲ್ ಟಾಸ್‌ ಬಾಲ್ ಆಗಿತ್ತು. ಈ ವೇಳೆ ಗೊಂದಲಕ್ಕೀಡಾದ ವಿರಾಟ್, ಆ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದರು. ಆದರೆ ಚೆಂಡು ಕೊಹ್ಲಿಯ ಬ್ಯಾಟ್​ಗೆ ತಗುಲಿ ಮೇಲೆ ಹೋಯಿತು. ಬೌಲರ್ ಹರ್ಷಿತ್ ರಾಣಾ ಸುಲಭ ಕ್ಯಾಚ್ ತೆಗೆದುಕೊಂಡರು.

ಅಂಪೈರ್ ಕೂಡ ಔಟೆಂದು ತೀರ್ಪು ನೀಡಿದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಶಾಕ್​ಗೆ ಒಳಗಾದ ಕೊಹ್ಲಿ, ರಿವ್ಯೂ ತೆಗೆದುಕೊಂಡರು. ಇಲ್ಲಿ ಮೂರನೇ ಅಂಪೈರ್ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದರು. ಇದರಿಂದ ಕೋಪಗೊಂಡ ಕೊಹ್ಲಿ, ಫೀಲ್ಡ್ ಅಂಪೈರ್​ ಜೊತೆ ಕೆಲ ಸಮಯ ವಾಗ್ವಾದ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ