ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಬ್ರಿಜಿಶ್ ಚೌಟ ಹರಿವಾಣಕ್ಕೆ ಮೇಲಿಂದ ಬಿದ್ದ ಹೂ; ವಿಡಿಯೋ ವೈರಲ್!
ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಹರಿವಾಣಕ್ಕೆ ಮೇಲಿಂದ ಹೂ ಬಿದ್ದ ಅಪರೂಪದ ಪ್ರಸಂಗ ಜರುಗಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಈಗ ವೈರಲ್ ಆಗಿದ್ದು ಬಹುತೇಕ ಜನರಿಂದ ಈ ವಿಡಿಯೋ ಮೆಚ್ಚುಗೆ ಗಳಿಸಿದೆ. ಚುನಾವಣಾ ಸಂದರ್ಭದಲ್ಲಿ ಪ್ರತಿಯೊಂದು ವಿಡಿಯೋ ತನ್ನದೇ ಆದ ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಈ ವಿಡಿಯೋ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದ್ದು, ಈಗ ಜನರ ಗಮನ ಸೆಳೆಯುತ್ತಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಯಾರು?
ದಕ್ಷಿಣ ಕನ್ನಡ: ಅಚ್ಚರಿಯ ಬೆಳವಣಿಗೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಬದಲಾಯಿಸಿದೆ. ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಅದಕ್ಕೆ ತಕ್ಕಂತೆ, ಮಾ. 13ರಂದು ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಆ ಕ್ಷೇತ್ರಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಬಹುತೇಕರಿಗೆ ಇವರು ಅಪರಿಚಿತರಾಗಿದ್ದಾರೆ. ಟಿಕೆಟ್ ಘೋಷಣಯಾದ ಬೆನ್ನಲ್ಲೇ ಕರ್ನಾಟಕದ ಅನೇಕ ಮಂದಿಗೆ ಕ್ಯಾಪ್ಟನ್ ಬ್ರಿಜೇಶ್ ಯಾರು, ಅವರ ಹಿನ್ನೆಲೆಯೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿವೆ.
ಚೌಟಾ ಅವರು ಹುಟ್ಟಿದ್ದು 1981ರಲ್ಲಿ. ಅವರಿಗೀಗ 42 ವರ್ಷ. ಪ್ರಸ್ತುತ ಅವರು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ, ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಆರ್ ಎಸ್ ಎಸ್ ನಲ್ಲಿದ್ದುಕೊಂಡು ಸಮಾಜ ಸೇವೆ ಮಾಡಿದ್ದಾರೆ. ಮಂಗಳೂರಿನ ರಥಬೀದಿಯಲ್ಲಿ ಅವರ ನಿವಾಸವಿದೆ. ಬಂಟ ಸಮುದಾಯದ ಗುತ್ತಿನ ಮನೆಗೆ ಸೇರಿರುವ ಅವರು ಅವಿವಾಹಿತರು. ಆ ಮೂಲಕ ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ.
ಎಂಬಿಎ ಪದವೀಧರ
ಇನ್ನು, ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ಆನಂತರ, 2022ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಆನಂತರ, ಅವರು, ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಐಐಎಂ ನಲ್ಲಿ ಎಕ್ಸಿಕ್ಯೂಟಿವ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪ್ರೋಗ್ರಾಂ ವಿಷಯದಲ್ಲಿ ಎಂಬಿಎ ಪದವಿಯನ್ನು 2011ರಲ್ಲಿ ಪಡೆದಿದ್ದಾರೆ.
ಸೇನೆಯಲ್ಲಿ ಸೇವೆ
ಚೌಟಾ ಅವರ ಸೇನಾ ತರಬೇತಿಯು 2003ರಲ್ಲಿ ಚೆನ್ನೈ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಶುರುವಾಗಿತ್ತು. ಅವರದ್ದು ಶಾರ್ಟ್ ಸರ್ವೀಸ್ ಕಮೀಷನ್ ನಡಿ ನೇಮಕಗೊಂಡಿದ್ದ ಅವರು, 8ನೇ ಗೋರ್ಖಾ ರೈಫಲ್ಸ್ ವಿಭಾಗದ 7ನೇ ಬೆಟಾಲಿಯನ್ ನಲ್ಲಿ 2003ರಿಂದ 2010ರವರೆಗೆ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ದೇಶದ ನಾನಾ ಭಾಗಗಳಲ್ಲಿ ಸೇನಾ ಸಿಬ್ಬಂದಿಯಾಗಿ ದುಡಿದಿದ್ದಾರೆ. ಅರಣ್ಯಗಳಲ್ಲಿ ಅಡಗಿರುವ ಶತ್ರುಗಳನ್ನು ಸದೆಬಡಿಯುವ, ಗಡಿಗಳಲ್ಲಿ ಅದರಲ್ಲೂ ವಿಶೇಷವಾಗಿ ಮಣಿಪುರ ಹಾಗೂ ಅಸ್ಸಾಂನಲ್ಲಿ ಒಳನುಸುಳುಕೋರರನ್ನು ಬಗ್ಗುಬಡಿಯುವ ಕಾರ್ಯಾಚರಣೆಗಳಲ್ಲಿ ಇವರು ಭಾಗಿಯಾಗಿದ್ದು ಇವರ ಹೆಗ್ಗಳಿಕೆ.
ರಾಜಕೀಯ ಜೀವನ
ಶಾಲಾ – ಕಾಲೇಜು ಮಟ್ಟದಲ್ಲಿದ್ದಾಗಲೇ ಅವರು ಆರ್ ಎಸ್ ಎಸ್ ಜೊತೆಗೆ ಒಡನಾಟ ಹೊಂದಿದ್ದರು. ಅದೇ ಹಿನ್ನೆಲೆಯಿಂದಾಗಿ, ಸೇನೆಯಿಂದ ನಿವೃತ್ತಿಯಾದ ನಂತರ ಸಕ್ರಿಯ ರಾಜಕೀಯಕ್ಕೆ ಧುಮುಕಿದ ಚೌಟಾ, 2013ರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸೇವಾ ಮನೋಭಾವ ಹಾಗೂ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಇವರ ಕಾರ್ಯವೈಖರಿಯನ್ನು ಗಮನಿಸಿ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳು ಇವರ ಹೆಗಲೇರಿದ್ದವು. ಅವುಗಳಲ್ಲಿ ಪ್ರಮುಖವಾದದ್ದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2023ರ ಡಿಸೆಂಬರ್ ನಲ್ಲಿ ಕರ್ನಾಟದ ಬಿಜೆಪಿಯ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. 2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕರ್ತವ್ಯ ಮಾಡಿದ್ದಾರೆ. ಬೈಂದೂರು ಉಪ ಚುನಾಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಇವರ ಶ್ರಮ ಗಣನೀಯವಾಗಿತ್ತು.