ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಿಹಾರ್ ಜೈಲಿನಿಂದಲೇ ತನಿಖೆಗೆ ಕೆ ಕವಿತಾರನ್ನು ಬಂಧಿಸಿದ ಸಿಬಿಐ..!

Twitter
Facebook
LinkedIn
WhatsApp
ತಿಹಾರ್ ಜೈಲಿನಿಂದಲೇ ತನಿಖೆಗೆ ಕೆ ಕವಿತಾರನ್ನು ಬಂಧಿಸಿದ ಸಿಬಿಐ..!

ದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಆರ್​ಎಸ್​​ ನಾಯಕಿ ಕೆ. ಕವಿತಾ (K Kavitha) ಅವರನ್ನು ಸಿಬಿಐ ಗುರುವಾರ ಬಂಧಿಸಿದೆ. ವಿಶೇಷವೆಂದರೆ, ಕವಿತಾ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ ಮತ್ತು ಕಳೆದ ಶನಿವಾರ ಜೈಲಿನೊಳಗೆ ತನಿಖಾ ಸಂಸ್ಥೆ ಅವರನ್ನು ಪ್ರಶ್ನಿಸಿತ್ತು. ಇದೀಗ ಅವರನ್ನು ಕೋರ್ಟ್​ ಅನುಮತಿ ಮೇರೆಗೆ ಬಂಧಿಸಲಾಗಿದೆ. ಕವಿತಾ ಅವರು ಇದೇ ಪ್ರಕರಣದಲ್ಲಿ ಇಡಿ ವಶಕ್ಕೆ ಒಳಗಾಗಿದ್ದರು. ಅಲ್ಲಿಂದ ಅವರು ಜೈಲು ಸೇರಿದ್ದರು.

ಇದಕ್ಕೂ ಮುನ್ನ ಬುಧವಾರ ತಿಹಾರ್ ಜೈಲಿನಲ್ಲಿರುವ ಕೆ ಕವಿತಾ ಅವರನ್ನು ಸಿಬಿಐ ಪ್ರಶ್ನಿಸಿತು. ಕವಿತಾ ಅವರನ್ನು ಜೈಲಿನಲ್ಲಿ ಪ್ರಶ್ನಿಸಲು ದೆಹಲಿ ನ್ಯಾಯಾಲಯವು ಏಪ್ರಿಲ್ 5 ರಂದು ಸಿಬಿಐಗೆ ಅನುಮತಿ ನೀಡಿತ್ತು. ತೆಲಂಗಾಣ ಎಂಎಲ್​​ಸಿ ಮತ್ತು ಬಿಆರ್​ಎಸ್​ ನಾಯಕ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರು ಅವರನ್ನು ಮಾರ್ಚ್ 15 ರಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹೈದರಾಬಾದ್​ನ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತ್ತು.

ಸಿಬಿಐ ತನ್ನ ಹೇಳಿಕೆಯನ್ನು ಜೈಲಿನಲ್ಲಿ ದಾಖಲಿಸಿದೆ. ಈ ಬಳಿಕ ಹೇಳಿಕೆ ನೀಡಿದ್ದ ಕವಿತಾ ಅವರು ಇದು “ರಾಜಕೀಯ ಪ್ರಕರಣ” ಎಂಬುದಾಗಿ ಹೇಳಿದ್ದರು.

ಇದು ಸಂಪೂರ್ಣವಾಗಿ ಹೇಳಿಕೆಯನ್ನು ಆಧರಿಸಿದ ಪ್ರಕರಣವಾಗಿದೆ. ಇದೊಂದು ರಾಜಕೀಯ ಪ್ರಕರಣ. ಇದು ವಿರೋಧ ಪಕ್ಷಗಳನ್ನು ಗುರಿಯಾಗಿಸುವ ಪ್ರಕರಣವಾಗಿದೆ. ಸಿಬಿಐ ಈಗಾಗಲೇ ಜೈಲಿನಲ್ಲಿ ನನ್ನ ಹೇಳಿಕೆಯನ್ನು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ಸಹ ಆರೋಪಿ ಬುಚ್ಚಿ ಬಾಬು ಅವರ ಫೋನ್​ನಿಂದ ವಶಪಡಿಸಿಕೊಳ್ಳಲಾದ ವಾಟ್ಸ್​ಆ್ಯಪ್​ ಚಾಟ್​ಗಳು ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಬಿಆರ್​​ಎಸ್​ ನಾಯಕಿಯನ್ನು ಪ್ರಶ್ನಿಸಲಾಗಿತ್ತು. ದೆಹಲಿ ಅಬಕಾರಿ ನೀತಿಯಡಿ ಮದ್ಯದ ಲಾಬಿಯ ಪರವಾಗಿ ಕೆಲಸ ಮಾಡಲು ಎಎಪಿಗೆ ಪಕ್ಷಕ್ಕೆ 100 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಈ ಪ್ರಕರಣದಲ್ಲಿ ಆರೋಪಿಸಲಾಗಿದೆ.

ಪ್ರಕರಣದ ಈ ಅಂಶಗಳ ಬಗ್ಗೆ ಕವಿತಾ ಅವರನ್ನು ಪ್ರಶ್ನಿಸಲು ಸಿಬಿಐ ಏಪ್ರಿಲ್ 6 ರಂದು ತಿಹಾರ್ ಜೈಲಿಗೆ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ