ಶುಕ್ರವಾರ, ಮಾರ್ಚ್ 14, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸೇಲ್ಸ್ ಮ್ಯಾನ್ ಎದುರೇ ಬಟ್ಟೆ ಬದಲಾಯಿಸಿದ ಯುವತಿ ;ರೀಲ್ಸ್ ಹುಚ್ಚಿಗೆ ಇನ್ನೇನೆಲ್ಲಾ ನೋಡ್ಬೇಕು ಗುರುವೇ ಎಂದ ನೆಟ್ಟಿಗರು..!

Twitter
Facebook
LinkedIn
WhatsApp
ಸೇಲ್ಸ್ ಮ್ಯಾನ್ ಎದುರೇ ಬಟ್ಟೆ ಬದಲಾಯಿಸಿದ ಯುವತಿ ;ರೀಲ್ಸ್ ಹುಚ್ಚಿಗೆ ಇನ್ನೇನೆಲ್ಲಾ ನೋಡ್ಬೇಕು ಗುರುವೇ ಎಂದ ನೆಟ್ಟಿಗರು..!

ನವದೆಹಲಿ: ಇತ್ತೀಚೆಗೆ ರೀಲ್ ಹುಚ್ಚು ಯಾವ ಪರಿ ಆವರಿಸಿಕೊಂಡಿದೆ ಎಂದರೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಲು, ಜನಪ್ರಿಯತೆ ಗಳಿಸಲು ಏನು ಬೇಕಾದರೂ ಮಾಡಲು ಕೆಲವರು ತಯಾರಿರುತ್ತಾರೆ. ಇದನ್ನು ನಾವು ಸುಮ್ಮನೆ ಹೇಳುತ್ತಿಲ್ಲ. ಯಾವ ಮಟ್ಟಕ್ಕೂ ಇಳಿಯಲು ಮುಂದಾಗುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಮಹಿಳೆಯೊಬ್ಬಳು ಬಟ್ಟೆ ಅಂಗಡಿಯೊಂದರಲ್ಲಿ ಟ್ರಯಲ್‌ ರೂಮ್‌ಗೆ ತೆರಳದೆ ಸೇಲ್ಸ್‌ ಮ್ಯಾನ್‌ ಎದುರೇ ಬಟ್ಟೆ ಬದಲಾಯಿಸುತ್ತಿರುವ ವಿಡಿಯೊ ಇದಾಗಿದೆ. ಇದನ್ನು ಆಕೆಯ ಅನುಮತಿ ಮೇರೆಗೆ ಚಿತ್ರೀಕರಿಸಲಾಗಿದೆ. ಸದ್ಯ ಈ ವಿಡಿಯೊ ವೈರಲ್‌ (Viral News) ಆಗಿದೆ.

 

ದೆಹಲಿಯ ಪಾಲಿಕಾ ಬಜಾರ್‌ನಲ್ಲಿ ಈ ವಿಡಿಯೊ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಕೆಲವರು ಇದು ಗೋವಾದ ಬಟ್ಟೆ ಅಂಗಡಿಯ ದೃಶ್ಯ ಎಂದಿದ್ದಾರೆ. ಅದೇನೇ ಇರಲಿ ಮಹಿಳೆಯ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತನ್ನ ಶಾರ್ಟ್ಸ್‌ ತೆಗೆದು ಆಕೆ ಬಹಿರಂಗವಾಗಿಯೇ ಮತ್ತೊಂದು ಉಡುಪು ತೊಟ್ಟುಕೊಳ್ಳುವ ಈ ದೃಶ್ಯ ನೋಡಿ ಹಲವರು ಕೆಂಡಾಮಂಡಲರಾಗಿದ್ದಾರೆ. ಅಚ್ಚರಿ ಎಂದರೆ ಆಕೆಯ ಎದುರು, ಕೈ ಅಳತೆಯ ದೂರಲ್ಲಿ ಸೇಲ್ಸ್‌ಮ್ಯಾನ್‌ ಇದ್ದರೂ ಆಕೆ ಯಾವುದೇ ಮುಜುಗರ, ಭಯ, ನಾಚಿಕೆ ಇಲ್ಲದೆ ಬಟ್ಟೆ ಬಿಚ್ಚುತ್ತಿರುವುದು ಕಂಡು ಬಂದಿದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಆಗಿ ಅಪ್‌ಲೋಡ್‌ ಮಾಡುವ ಉದ್ದೇಶದಿಂದ ಚಿತ್ರೀಕರಿಸಲಾಗಿತ್ತು ಎನ್ನವುದು ನೋಡುವಾಗಲೇ ಸ್ಪಷ್ಟವಾಗುತ್ತದೆ.

ವೈರಲ್‌ ಆಗುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಭ್ಯ ವರ್ತನೆ ತೋರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. ಕೇವಲ ರೀಲ್‌ಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸುವವರಿಗೆ ಪೊಲೀಸರು ಮತ್ತು ಸರ್ಕಾರ ಎಚ್ಚರಿಕೆ ನೀಡಿದರೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಕಳವಳಕಾರಿ ಅಂಶ.

ನೆಟ್ಟಿಗರು ಏನಂದ್ರು?

ʼʼಈ ವಿಡಿಯೊವನ್ನು ಯುವಕನೊಬ್ಬ ಮಾಡಿದ್ದರೆ ಆಕೆ ಸುಮ್ಮನಿರುತ್ತಿದ್ದಳೆ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼಯಾಕೆ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಕೇವಲ ಒಂದು ರೀಲ್‌ ಮಾಡುವ ಉದ್ದೇಶಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯಬೇಕೆ? ಇಂತಹ ಮನಸ್ಥಿತಿ ಏಕೆ?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ʼʼರೀಲ್‌ ಮಾಡುವ ಹುಚ್ಚು ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದೆʼʼ ಎಂದು ಮಗದೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼʼಈ ಹಿಂದೆ ಇಂತಹ ರೀಲ್‌ಗಳು ಮೆಟ್ರೋ, ಬಸ್‌ ಮುಂತಾದೆಡೆ ಕಂಡು ಬರುತ್ತಿತ್ತು. ಇದೀಗ ಅಂಗಡಿಗೂ ಕಾಲಿಟ್ಟಿದೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇಂತಹ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ

ಕೆಲವು ದಿನಗಳ ಹಿಂದೆ ಹೋಳಿಯಂದು ಚಲಿಸುವ ಸ್ಕೂಟರ್‌ನಲ್ಲಿ ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸಿದ ವಿಡಿಯೊ ವೈರಲ್‌ ಆಗಿತ್ತು. ಬಳಿಕ ಚಲಿಸುವ ಸ್ಕೂಟಿಯ ಮೇಲೆಯೇ ಹೋಳಿ ಆಚರಣೆ ನೆಪದಲ್ಲಿ ರೊಮ್ಯಾನ್ಸ್‌ ಮಾಡಿದ ಇಬ್ಬರು ಯುವತಿಯರಿಗೆ ನೊಯ್ಡಾ ಟ್ರಾಫಿಕ್‌ ಪೊಲೀಸರು ದಂಡ ವಿಧಿಸಿದ್ದರು. ಯುವಕನು ಸ್ಕೂಟರ್ ಚಾಲನೆ ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದರು. ಇನ್ನೊಬ್ಬ ವ್ಯಕ್ತಿ ವಿಡಿಯೊವನ್ನು ಚಿತ್ರೀಕರಿಸಿದ್ದ. ಇದರ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist