ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯಕ್ಷಗಾನ ವೇಷ ಧರಿಸಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದ ಉಡುಪಿ ಅಧಿಕಾರಿಗಳು..!

Twitter
Facebook
LinkedIn
WhatsApp
ಯಕ್ಷಗಾನ ವೇಷ ಧರಿಸಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದ ಉಡುಪಿ ಅಧಿಕಾರಿಗಳು..!

ಉಡುಪಿ: ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಅತ್ಯುತ್ತಮವಾಗಿ ಜಾಗೃತಿ ಕಾರ್ಯ ಮೂಡಿಸಿದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಪಾರಿತೋಷಕವನ್ನು ನೀಡುತ್ತದೆ.

ಉಡುಪಿ ಜಿಲ್ಲೆಯ ಅಧಿಕಾರಿಗಳಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸ್ವತಹ ತಾವೇ ಯಕ್ಷಗಾನದ ಬಗೆಬಗೆಯ ವೇಷಗಳನ್ನು ತೊಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಶ್ರಮಪಟ್ಟು ಗಂಟೆಗಟ್ಟಲೆ ಕುಳಿತು ಯಕ್ಷಗಾನ ವೇಷ ಧರಿಸಿ ಜಾಗೃತಿ ಕಾರ್ಯಕ್ರಮದ ವಿಡಿಯೋಗಳಿಗೆ ಪೋಸ್ಟರ್‌ಗಳಿಗೆ ಪೋಸ್ ನೀಡಿದ್ದಾರೆ.

ಕರಾವಳಿಯ ಪ್ರಸಿದ್ಧ ಜಾನಪದ ಕಲೆಯಾದ ಯಕ್ಷಗಾನದ ಮೂಲಕ ಈಗಾಗಲೇ ಹಲವು ರೀತಿಯಲ್ಲಿ ಮತದಾನದ ಜಾಗೃತಿ ನಡೆಸಲಾಗಿದೆ . ಆದರೆ ಸ್ವತಃ ಅಧಿಕಾರಿಗಳೇ ಯಕ್ಷಗಾನ ವೇಷ ಧರಿಸಿ ಮತದಾನ ಜಾಗೃತಿ ಮೂಡಿಸಿರುವುದು ಇದೇ ಪ್ರಥಮ.

ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತಿಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಕರಾವಳಿ ಕಾವಲುಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಸ್ವತಹ ಆಸಕ್ತಿಯಿಂದ ಬಡಗುತಿಟ್ಟು ಯಕ್ಷಗಾನ ಶೈಲಿಯ ವೇಷ ಭೂಷಣ ಧರಿಸಿಕೊಂಡದ್ದು ಗಮನ ಸೆಳೆಯಿತು.

ವಿಶ್ವ ಪ್ರಸಿದ್ಧ ಕಾಪು ಬೀಚ್ ಸೇರಿದಂತೆ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈ ಮೂಲಕ ಮತದಾನದ ಮಹತ್ವವನ್ನು ಅಧಿಕಾರಿಗಳು ಸಾರಿದ್ದಾರೆ.ಯಕ್ಷಗಾನ ನಮ್ಮ ದೇಶದ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದ್ದು ಜಿಲ್ಲಾ ಸ್ವೀಪ್ ಕಾರ್ಯಕ್ರಮದ ಭಾಗವಾಗಿ ಈ ಕಲೆಯ ಮೂಲಕ ಜನರನ್ನು ತಲುಪುತ್ತಿದ್ದೇವೆ.

ಯಕ್ಷಗಾನ ಕಲೆಯ ಬಗ್ಗೆ ಹಿಂದಿನಿಂದಲೂ ನಾವು ಕೇಳಿದ್ದು ಇದೀಗ ಸ್ವತಹ ವೇಷ ಧರಿಸಿರುವುದು ಖುಷಿ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಡಗುತಿಟ್ಟು ಯಕ್ಷಗಾನದ ಕೇದೆಗೆ ಮುಂಡಾಸು ಹಾಗೂ ಸ್ತ್ರೀ ವೇಷವನ್ನು ಧರಿಸುವ ಮೂಲಕ ಅಧಿಕಾರಿಗಳು ಕಲೆಗೂ ಗೌರವ ಸಲ್ಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ