ಧಗಧಗಿಸಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್..!

ಬೆಂಗಳೂರು, ಏಪ್ರಿಲ್, 05: ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಾನಿಕ್ ವಾಹನಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿದಿರುವ ಘಟನೆಗಳು ನಡೆದಿವೆ. ಅದೇ ರೀತಿ ಇಂದು (ಏಪ್ರಿಲ್ 05) ಮಧ್ಯಾಹ್ನ ಬೆಂಗಳೂರಿನ ಹೊರವಲಯದ ಬಿಡದಿಯ ರೈಲ್ವೆ ನಿಲ್ದಾಣದ ಹತ್ತಿರ ಬಿಎಂಟಿಸಿ ಇ.ವಿ.ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಸುತ್ತಲೂ ಮಂಜಿನಂತೆ ದಟ್ಟ ಹೊಗೆ ಆವರಿಸಿದೆ. ಸದ್ಯ ಬಸ್ನಲ್ಲಿ ಯಾರೂ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ಸುಮಾರು 3.40ರ ವೇಳೆಗೆ ಈ ಘಟನೆ ನಡೆದಿದ್ದು, ಬಿಡಡಿ ಬಳಿಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೋ ಆವರಣದಲ್ಲಿ ನಿಲ್ಲಿಸಿದ್ದ ವೇಳೆ ಬಸ್ನಲ್ಲಿದ್ದ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ಬಸ್ನಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡ ತಕ್ಷಣ ಡಿಪೋ ಸಿಬ್ಬಂದಿ ಈ ದೃಶ್ಯವನ್ನು ಕಂಡು ಆತಂಕಕ್ಕೆ ಒಳಗಾಗಿದ್ದರು. ಇನ್ನು ಈ ವೇಳೆ ತಕ್ಷಣ ತಾಂತ್ರಿಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿತ್ತು.
ಅದರಲ್ಲೂ ಇದೀಗ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ನಗರದಲ್ಲಿ ವಾಹನಗಳನ್ನು ನಿಲ್ಲಿಸಲು ಎಲ್ಲಿ ನೆರಳು ಸಿಗುತ್ತದೆಯೋ ಎಂದು ಕಾಯುತ್ತಿರುತ್ತಾರೆ. ಇನ್ನು ಬೆಂಗಳೂರಿನ ಜೀನನಾಡಿ ಸಾರಿಗೆಯಲ್ಲೊಂದಾದ ಬಿಎಂಟಿಸಿ ಬಸ್ಗಳು ದಿನದ ಬೆಳ್ಳಗೆಯಿಂದಲೂ ಸಂಜೆವರೆಗೂ ಯಾವುದೇ ಬಿಸಿಲನ್ನೂ ಲೆಕ್ಕಿಸದೇ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯುತ್ತಲೇ ಇರುತ್ತವೆ.
A BMTC Switch (AL) non-AC electric bus caught fire at Bidadi depot (49). No injuries have been reported@BMTC_BENGALURU pic.twitter.com/coxy0UM8kO
— ChristinMathewPhilip (@ChristinMP_) April 5, 2024
ಈ ಸಾರಿಗಗಳಲ್ಲಿ ಕೆಸಲ ಮಾಡುವ ಚಾಲಕ ಮತ್ತು ನಿರ್ವಾಹಕರ ಪಾಡಂತೂ ಹೇಳತೀರದಾಗಿರುತ್ತದೆ. ಯಾವಾಗ ವಿಶ್ರಾಂತಿಗೆ ನೆಲ ಸಿಗುತ್ತದೆಯೋ ಎನ್ನುವ ಪರಿಸ್ಥಿತಿಯಲ್ಲಿರುತ್ತಾರೆ.