ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಚಲಿಸುತ್ತಿದ್ದವರನ್ನು ಕಚ್ಚಲು ಹೋದ ವಿದೇಶಿ ವ್ಯಕ್ತಿ; ಇಲ್ಲಿದೆ ವಿಡಿಯೋ

ಚೆನ್ನೈ: ತಮಿಳುನಾಡಿನಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ. ಸಕತ್ ಆಗಿ ಕುಡಿದು, ಶರ್ಟ್ ಧರಿಸದ ವಿದೇಶಿ ಪ್ರಜೆಯೊಬ್ಬರು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದವರಿಗೆ ಕಚ್ಚಲು ಯತ್ನಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ರಾಯಪೆಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿದೇಶಿ ಪ್ರಜೆಯೊಬ್ಬ ಬೀದಿಯಲ್ಲಿ ಹೇಗೆ ಬೇಕೋ ಹಾಗೆ ಓಡಾಡಿಕೊಂಡು ಗಲಾಟೆ ಮಾಡಿದ್ದಾರೆ. ಟೀ ಶರ್ಟ್ ತೆಗೆದು ಎಸೆದು ಚೆನ್ನೈನ ರಾಯಪೆಟ್ಟಾ ಜಂಕ್ಷನ್‌ನ ರಸ್ತೆಯಲ್ಲಿ ಹೋಗುವವರಿಗೆ ತೊಂದರೆ ನೀಡಿದ್ದಾರೆ. ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಕಚ್ಚಲು ಹೋಗಿದ್ದಾರೆ.
ಮದ್ಯದ ಅಮಲಿನಲ್ಲಿ ಇದ್ದ ಅವರನ್ನು ಜನ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲ. ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಎಳೆದಾಡಿದರೂ ಕೂಡ ನಿಯಂತ್ರಣಕ್ಕೆ ಬರದ ವ್ಯಕ್ತಿ ಜನರನ್ನು ಕಚ್ಚಲು ಓಡಾಡಿದ್ದಾರೆ. ಬೈಕ್ ಓಡಿಸುತ್ತಿದ್ದ ವ್ಯಕ್ತಿ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ ಪೊಲೀಸರು ಪಾನಮತ್ತ ವ್ಯಕ್ತಿಯನ್ನು ಎಳೆದುಕೊಂಡು ಹೋಗಬೇಕಾಯಿತು. ಇಬ್ಬರು ಕುಡುಕರನ್ನು ನಿಯಂತ್ರಿಸಲು ಮೂವರು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವು ನೆಟಿಜನ್‌ಗಳು ವಿದೇಶಿಯರ ವರ್ತನೆಯನ್ನು ಝೋಂಬಿಗಳ (zombie) ವರ್ತನೆಗೆ ಹೋಲಿಸಿದ್ದಾರೆ. ಕೆಲವು ನೆಟ್ಟಿಗರು ಈ ವ್ಯಕ್ತಿಗಳು ಅತಿಯಾಗಿ ಡ್ರಗ್ಸ್ ತೆಗೆದುಕೊಂಡಿರಬೇಕು ಎಂದು ಶಂಕಿಸಿದ್ದಾರೆ.
ಇನ್ನೂ ಸಿಕ್ಕಿಲ್ಲ ವಿದೇಶಿ ಪ್ರಜೆಗಳ ಗುರುತು ಘಟನೆಯು ಯಾವಾಗ ನಡೆದಿದೆ ಮತ್ತು ಈ ವಿಷಯದಲ್ಲಿ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಜೊತೆಗೆ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ವಿದೇಶಿ ವ್ಯಕ್ತಿಗಳ ಗುರುತು ಇನ್ನೂ ದೃಢಪಟ್ಟಿಲ್ಲ. ಆದರೆ, ವೈರಲ್ ವಿಡಿಯೋಗೆ ಮಾತ್ರ ಸಕತ್ ಕಾಮೆಂಟ್‌ಗಳು ಹರಿದಾಡುತ್ತಿವೆ.
ಒಬ್ಬ ನೆಟ್ಟಿಗರು ಈ ವಿದೇಶಿ ವ್ಯಕ್ತಿ ವರ್ತನೆಯನ್ನು ‘ಝೋಂಬಿ ಬಿಹೇವಿಯರ್’ ಎಂದರೇ ಮತ್ತೊಬ್ಬರು, ಆತನಿಗೆ ಝೋಂಜಿ ವೈರಸ್ ಅಂಟಿಕೊಂಡಿದೇಯೇ?” ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ಇವರಿಗೆ ಮಸಾಲೆ ಹಾಕಿರುವ ಇಂಡಿಯನ್ ಫುಡ್ ತಿನ್ನಲು ಆಗದೆ ಹೀಗೆ ಆಡುತ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ.
“ಭಾರತೀಯರೊಬ್ಬರು ಇದನ್ನು ಲಂಡನ್ ಅಥವಾ ನ್ಯೂಯಾರ್ಕ್‌ನಲ್ಲಿ ಮಾಡಿದ್ದರೆ, ಪ್ರವಾಸಿಗರು ಮತ್ತು ವಲಸೆಗಾಗಿ ಬರುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಂಡು ಇಡೀ ವಲಸಿಗರನ್ನು ದೂಷಿಸಲಾಗುತ್ತಿತ್ತು” ಎಂದು ಮತ್ತೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಇದೇ ಕೆಲಸವನ್ನು ಒಬ್ಬ ಭಾರತೀಯ ಯಾವುದೋ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಮಾಡಿದ್ದಾನೆ ಎಂದು ಅಂದುಕೊಳ್ಳಿ. ಇಷ್ಟೋತ್ತಿಗೆ ಈ ವೀಡಿಯೊ ಟ್ವಿಟರ್‌ನಲ್ಲಿ ಲಕ್ಷಾಂತರ ಮಂದಿ ಶೇರ್ ಮಾಡಿ ಟ್ರೆಂಡಿಂಗ್ ಆಗುತ್ತಿತ್ತು. ಜನ ಭಾರತ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರು” ಎಂದು ಟೀಕಿಸಿದ್ದಾರೆ.
This happened in Chennai..
— Pramod Madhav (@PramodMadhav6) April 2, 2024
A foreign National reportedly in an inebriated state, running around trying to bite commuters.. pic.twitter.com/wT2Y5B0HIy