Padmaraj Ramaiah: ನಾಳೆ ಮಂಗಳೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ನಾಮಪತ್ರ ಸಲ್ಲಿಕೆ
ಮಂಗಳೂರು: ಮಂಗಳೂರು ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್(Padmaraj Ramaiah) ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭಗೊಳ್ಳುವ ನಾಮಪತ್ರ ಸಲ್ಲಿಕೆ ಯಾತ್ರೆ ಮಂಗಳೂರು ಡಿಸಿ ಭವನದ ತನಕ ಜರುಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿಕೊಂಡಿವೆ.
ಮಂಗಳೂರು ಲೋಕಸಭೆಯಲ್ಲಿ ಸಂಘ ಪರಿವಾರದ ಹಿಂದುತ್ವದ ಭದ್ರಕೋಟೆ ಯನ್ನು ಭೇದಿಸಲು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರವರನ್ನು ಹೈಕಮಾಂಡ್ ಕಣಕ್ಕೆ ಇಳಿಸಿದೆ, ಈ ಮೂಲಕ ಸಂಘ ಪರಿವಾರದ ಕೋಟೆಯನ್ನು ಕೆಡವಲು ಹೈಕಮಾಂಡ್ ತಂತ್ರ ರೂಪಿಸಿದೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.ಕಳೆದ 30 ವರ್ಷಗಳಿಂದ ಸಂಘ ಪರಿವಾರದ ಹಿಂದುತ್ವದ ಪ್ರಬಲ ಹಿಡಿತದಲ್ಲಿರುವ ಕರಾವಳಿಯ ಮಂಗಳೂರು ಜಿಲ್ಲೆಯಿಂದ ಸಂಘ ಪರಿವಾರ ಹಾಗೂ ಬಿಜೆಪಿಯ ಹಿಡಿತವನ್ನು ಕಡಿಮೆಗೊಳಿಸಲು ಹಾಗೂ ಬಿಡುಗಡೆಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತಂತ್ರಗಾರಿಕೆ ಹೆಣದಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸಿನ ತಂತ್ರಗಾರಿಕೆಗೆ ಬಿಜೆಪಿ, ಸಂಘ ಪರಿವಾರ ಯಾವ ರೀತಿ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಮೇಲ್ನೋಟಕ್ಕೆ ಇದು ಚೌಟ v/s ಪದ್ಮರಾಜ್ ಎಂದು ಅನಿಸಿದರು ಇದು ಒಳಗಡೆಯಿಂದ ಸಂಘ ಪರಿವಾರದ ಭದ್ರಕೋಟೆಯನ್ನು ಭೇದಿಸಲು ಕಾಂಗ್ರೆಸ್ ಹೂಡಿದ ರಣತಂತ್ರ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.