ಗುರುವಾರ, ಮೇ 9, 2024
ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?-ಐಪಿಎಲ್ ನಲ್ಲಿ ಮಿಂಚುತ್ತಿದೆ ಹೆಡ್ ಮತ್ತು ಅಭಿಷೇಕ್ ಜೋಡಿ ; 58 ಎಸೆತಗಳಲ್ಲಿ 167 ರನ್ ಸಿಡಿಸಿ ಜಯಗಳಿಸಿದರ ಹೈದರಾಬಾದ್.!-ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?

Twitter
Facebook
LinkedIn
WhatsApp
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?
ತನ್ನ ನಡಾವಳಿ ಹಾಗೂ ದುರಂಹಕಾರಗಳಿಂದ ತನ್ನ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡವರು ಗೋವಿಂದ(Govinda). ಆ ಕಾಲದಲ್ಲಿಯೇ ಸೂಪರ್ ಸ್ಟಾರ್(Super star) ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ ಬಾಲಿವುಡ್ ನಿಂದ ಕಣ್ಮರೆಯಾದ ಗೋವಿಂದ ಸದ್ಯಕ್ಕೆ ರಾಜಕೀಯದ ಪಡಸಾಲೆಗೆ ಎರಡನೇ ಬಾರಿ ಬಂದಿದ್ದಾರೆ.

ಹೌದು, ಸರಿ ಸುಮಾರು 20 ವರ್ಷಗಳ ಹಿಂದೆ, ಕಾಂಗ್ರೆಸ್(Congress) ಕೈ ಹಿಡಿದು ರಾಜಕೀಯದ ದೋಣಿಯನ್ನ ಹತ್ತಿದ್ದ ಗೋವಿಂದ ಮುಂಬೈನ ವಿರಾರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಚ್ಚರಿ ಅಂದರೆ ಆ ಕಾಲದಲ್ಲಿ ಬಿಜೆಪಿಯ ರಾಮ್ ನಾಯಕ್ ಅವರನ್ನ 50000 ಮತಗಳ ಅಂತರದಿಂದ ಸೋಲಿಸಿದ್ದರು. ಗೆದ್ದು ಬೀಗಿದ್ದರು. ಆ ನಂತರ 2009ರವರೆಗೆ ಹೆಚ್ಚು ಕಡಿಮೆ ರಾಜಕೀಯದಲ್ಲಿ ಆಕ್ಟಿವ್ ಆಗಿದ್ದ ಗೋವಿಂದಗೆ ಏನಾಯಿತು ಗೊತ್ತಿಲ್ಲ. ಏಕಾಏಕಿ ರಾಜಕೀಯಕ್ಕೆ ಧೀರ್ಘ ದಂಡ ನಮಸ್ಕಾರ ಹಾಕಿ ಮರಳಿ ಚಿತ್ರರಂಗಕ್ಕೆ ಬಂದರು.

ಇಂಥ ಗೋವಿಂದ ಈಗ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಾಳಯದಿಂದ ಅಲ್ಲ, ಬದಲಿಗೆ ಶಿವಸೇನಾ(Shiv Sena) ಕಡೆಯಿಂದ ಅನ್ನುವುದು ವಿಶೇಷ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಇಂದು ಶಿವಸೇನೆಗೆ ಸೇರ್ಪಡೆಗೊಂಡ ಗೋವಿಂದ, ಎಲ್ಲವೂ ದೈವಿಚ್ಚೆ ಮತ್ತೆ ರಾಜಕೀಯಕ್ಕೆ ನಾನು ಬರ್ತಿನಿ ಎಂದು ಅಂದುಕೊಂಡಿರಲಿಲ್ಲ ಎಂದರು.

2004ರಿಂದ 2009ರವರೆಗೆ ನಾನು ರಾಜಕೀಯದಲ್ಲಿದ್ದೆ. ಆಗ 2009ರಲ್ಲಿ 14ನೇ ಲೊಕಸಭಾ ಚುನಾವಣೆ ನಡೆದಿತ್ತು. ಕಾಕತಾಳೀಯ ಎಂದರೆ 14 ವರ್ಷದ ನಂತರ ಮತ್ತೆ ನಾನು ರಾಜಕೀಯ ಜೀವನಕ್ಕೆ ಮರಳಿದ್ದೇನೆ ಎಂದರು. ಏಕನಾಥ್ ಶಿಂಧೆ ನೇತೃತ್ವದಲ್ಲಿ ಮುಂಬೈ ನಗರವು ಈಗ ಸ್ವಚ್ಛವಾಗಿ ಮತ್ತು ಉತ್ತಮವಾಗಿ ಕಾಣುತ್ತಿದೆ ಎಂದು ತಮ್ಮ ಮನದ ಮಾತನ್ನ ಹಂಚಿಕೊಂಡರು.
ಮಿಕ್ಕಂತೆ ಶಿವಸೇನಾ ಶಿದೆ ಬಣ ಸೇರಿರುವ ಗೋವಿಂದ, ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನುವ ಸುದ್ದಿ ಇದೆ. ವಾಯುವ್ಯ ಮುಂಬೈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯೂ ಇದೆ ಎಂಬ ಮಾತು ಇದೆ. ಎರಡರಲ್ಲಿ ಗೋವಿಂದ ಎಲ್ಲಿಂದ ಅಖಾಡಕ್ಕಿಳಿಯುತ್ತಾರೆ ಅನ್ನುವುದು ಸದ್ಯಕ್ಕೆ ಗೌಪ್ಯವಾದರೂ, ವಾಯುವ್ಯ ಮುಂಬೈ ಕ್ಷೇತ್ರದಿಂದ ಉದ್ಭವ್ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಅವರನ್ನು ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ.
ಹೀಗಾಗಿ ಒಂದು ವೇಳೆ ಗೋವಿಂದ ವಾಯುವ್ಯ ಮುಂಬೈ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದೆ ಆದಲ್ಲಿ ಅಮೋಲ್ ಕೀರ್ತಿಕರ್ ಅವರನ್ನ ಸೆಡ್ಡು ಹೊಡೆದು ಗೆಲ್ಲುತ್ತಾರಾ ಅನ್ನುವ ಕುತೂಹಲ ಈಗ ಅನೇಕರಲ್ಲಿದೆ. ಯಾಕೆಂದರೆ ಕಾಲ ಬದಲಾಗಿದೆ. ಗೋವಿಂದ ಅವರ ಜನಪ್ರಿಯತೆಯೂ ಕುಗ್ಗಿದೆ.
ಒಟ್ನಲ್ಲಿ ಸಿನಿಮಾದಲ್ಲಿ ಗೋವಿಂದ ಕೊನೆಯದಾಗಿ ಗೆಲುವಿನ ನಗೆ ಬೀರಿದ್ದು 2007ರಲ್ಲಿ. ಅದು ಪಾರ್ಟನರ್ ಚಿತ್ರದ ಮೂಲಕ. ಆ ನಂತರ ಗೋವಿಂದ ಕಾಲಿಟ್ಟಲೆಲ್ಲಾ ಸಿಕ್ಕಿದ್ದು ನಿರಾಸೆಯೇ. ಶಿವಸೇನೆಯಿಂದ ಆದರೂ ಗೋವಿಂದ ಅದೃಷ್ಟ ಬದಲಾಗುತ್ತಾ. ಲೆಟ್ಸ್ ಸೀ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ