ಗುರುವಾರ, ಮೇ 9, 2024
SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?-ಐಪಿಎಲ್ ನಲ್ಲಿ ಮಿಂಚುತ್ತಿದೆ ಹೆಡ್ ಮತ್ತು ಅಭಿಷೇಕ್ ಜೋಡಿ ; 58 ಎಸೆತಗಳಲ್ಲಿ 167 ರನ್ ಸಿಡಿಸಿ ಜಯಗಳಿಸಿದರ ಹೈದರಾಬಾದ್.!-ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!

Twitter
Facebook
LinkedIn
WhatsApp
ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!
ಬ್ರೆಜಿಲ್​​: ಹಾಲಿವುಡ್‌ನ ʼಆನಕೊಂಡʼ (Anaconda) ಸಿನಿಮಾವನ್ನು ನೋಡದವರು ವಿರಳ. ಅದರಲ್ಲಿ ಕಂಡು ಬರುವ ಬೃಹತ್‌ ಗಾತ್ರದ ಹಾವನ್ನು ನೋಡಿ ಬಹುತೇಕರು ಬೆಚ್ಚಿ ಬಿದ್ದಿದ್ದರು. ಇಂತಹ ದೈತ್ಯ ಗಾತ್ರದ ಹಾವು ಇರಲು ಸಾಧ್ಯವೇ ಇಲ್ಲ ಎಂಬ ಸಂಶಯ ಬಹುತೇಕರನ್ನು ಕಾಡಿತ್ತು. ಆದರೆ ಇಂತಹ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಶ್ವದಲ್ಲಿಯೇ ಅತೀದೊಡ್ಡ ಹಾವು ಅಮೆಜಾನ್​ ಮಳೆಕಾಡಿನಲ್ಲಿ (Amazon rainforest) ಪತ್ತೆಯಾಗಿದೆ. ಈ ಹಾವು ಬರೋಬ್ಬರಿ 26 ಅಡಿಗಳಷ್ಟು ಉದ್ದ ಇದ್ದು, ಸುಮಾರು 440 ಪೌಂಡ್‌ (200 ಕೆ.ಜಿ.) ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ. ಇದು ಇಲ್ಲಿಯವರೆಗೆ ಪತ್ತೆಯಾದ ವಿಶ್ವದ ಅತಿದೊಡ್ಡ ಹಾವು (Biggest Snake) ಎನಿಸಿಕೊಂಡಿದೆ.

ಪತ್ತೆಯಾಗಿದ್ದು ಹೇಗೆ?

ನ್ಯಾಷನಲ್‌ ಜಿಯಾಗ್ರಾಫಿಕ್‌ (National Geographic) ಚಾನಲ್‌ನ ಕಾರ್ಯಕ್ರಮಕ್ಕೆ ಕಾಡು ಪ್ರಾಣಿಗಳನ್ನು ಪರಿಚಯಿಸುವ ಪ್ರೊಫೆಸರ್‌ ಫ್ರೀಕ್‌ ವಾಂಕ್‌ (Professor Freek Vonk) ಅಮೆಜಾನ್‌ ಕಾಡಿನ ಹೃದಯ ಭಾಗದಲ್ಲಿ, ಅತ್ಯಂತ ದುರ್ಗಮ ಪ್ರದೇಶದಲ್ಲಿ ನೀರಿನೊಳಗೆ ಈ ಬೃಹತ್‌ ಆನಕೊಂಡವನ್ನು ಪತ್ತೆ ಹಚ್ಚಿದ್ದಾರೆ.

ಮಾನವನ ತಲೆ ಗಾತ್ರದ ಶಿರ!

ಈ ಆನಕೊಂಡದ ಗಾತ್ರ ಎಷ್ಟು ದೊಡ್ಡದಾಗಿದೆ ಎಂದರೆ ಇದರ ತಲೆ ಮಾನವನ ತಲೆಯ ಗಾತ್ರದಲ್ಲಿದೆಯಂತೆ. ಇದರ ಶರೀರ ಕಾರಿನ ಟಯರ್‌ನಷ್ಟು ದಪ್ಪವಿದೆ ಎಂದು ಮೂಲಗಳು ತಿಳಿಸಿವೆ. ಅತೀ ಭಾರದ ಹಾವಿನ ಪ್ರಬೇಧವಾದ ಇದಕ್ಕೆ ಯುನೆಕ್ಟಸ್‌ ಅಕಯಿಮ (Eunectes akayima) ಎಂದು ವಿಜ್ಞಾನಿಗಳು ಹೆಸರಿಟ್ಟಿದ್ದಾರೆ. ಅಂದರೆ ಉತ್ತರದ ಹಸಿರು ಆನಕೊಂಡ ಇದರರ್ಥ. ಈ ಪ್ರಬೇಧವು ಸುಮಾರು 10 ಲಕ್ಷ ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದ ದಕ್ಷಿಣ ಹಸಿರು ಅನಕೊಂಡದಿಂದ ಬೇರ್ಪಟ್ಟಿದೆ ಎಂದು ಅಂದಾಜಿಸಲಾಗಿದೆ. ಅದಕ್ಕಿಂತ ಆನುವಂಶಿಕವಾಗಿ ಶೇಕಡಾ 5.5ರಷ್ಟು ಭಿನ್ನವಾಗಿದೆ. ಈ ದೃಷ್ಟಿಕೋನದಲ್ಲಿ ಹೇಳುವುದಾದರೆ ಮಾನವರು ಚಿಂಪಾಂಜಿಗಳಿಗಿಂತ ಕೇವಲ ಶೇಕಡಾ 2ರಷ್ಟು ಮಾತ್ರ ಭಿನ್ನರಾಗಿದ್ದಾರೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಕಳವಳಕಾರಿ

ಪರಿಸರ ಸಮತೋಲನದಲ್ಲಿ ಆನಕೊಂಡಗಳ ಪಾತ್ರ ನಿರ್ಣಾಯಕವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಕುಸಿತವಾಗುತ್ತಿರುವುದು ಕಳವಳ ಮೂಡಿಸುತ್ತಿದೆ. ಪರಿಸರ ಮಾಲಿನ್ಯ, ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶಗಳು, ಕಾಡ್ಗಿಚ್ಚು, ಬರ, ಹವಾಮಾನ ಬದಲಾವಣೆ, ಮಿತಿ ಮೀರಿದ ತೈಲ ಹೊರ ಸೂಸುವಿಕೆ ಮುಂತಾದ ಚಟುವಟಿಕೆಗಳಿಂದ ಅನಕೊಂಡಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕುತೂಹಲಕಾರಿ ಅಂಶಗಳು

  • ಯುನೆಕ್ಟಸ್‌ ಅಕಯಿಮ-ಇದುವರೆಗೆ ಪತ್ತೆಯಾದ ಹಾವುಗಳ ಪೈಕಿ ಅತ್ಯಂತ ದೊಡ್ಡದು ಮತ್ತು ಅತೀ ಹೆಚ್ಚು ಭಾರದಿಂದ ಕೂಡಿದ್ದು ಎನ್ನುವ ದಾಖಲೆ ಬರೆದಿದೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಪ್ರೊಫೆಸರ್ ಫ್ರೀಕ್‌ ವಾಂಕ್‌ ಈ ಬೃಹತ್ ಅನಕೊಂಡ ಪಕ್ಕದಲ್ಲಿ ಈಜುತ್ತಿರುವುದನ್ನು ಕಂಡು ಬಂದಿದ್ದು, ರೋಮಾಂಚನಕಾರಿ ಅನುಭವ ನೀಡುತ್ತದೆ.
  • ಪರಭಕ್ಷಕಗಳಾಗಿರುವ ಅನಕೊಂಡಗಳು ತಮ್ಮ ಗಮನಾರ್ಹ ವೇಗ, ಅಪಾರ ಶಕ್ತಿ ಮತ್ತು ಬೇಟೆಯಾಡುವ ಸಾಮರ್ಥ್ಯಕ್ಕೆ ಹೆಸರುವಾಸಿ.
  • ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಬ್ರಿಯಾನ್ ಫ್ರೈ ನೇತೃತ್ವದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ನಡೆಸಿದ ಆನುವಂಶಿಕ ವಿಶ್ಲೇಷಣೆಯು ಎರಡು ಅನಕೊಂಡ ಪ್ರಬೇಧಗಳ(ಉತ್ತರದ ಹಸಿರು ಆನಕೊಂಡ ಮತ್ತು ದಕ್ಷಿಣದ ಹಸಿರು ಆನಕೊಂಡ) ನಡುವಿನ ಗಮನಾರ್ಹ ಆನುವಂಶಿಕ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ.

ಅಮೆಜಾನ್​ ಮಳೆಕಾಡು ಭಯಂಕರ ದಟ್ಟಾರಣ್ಯವಾಗಿದ್ದು, ಇದು ವಾಯುವ್ಯ ಬ್ರೆಜಿಲ್​​ನ ಹೆಚ್ಚಿನ ಭಾಗವನ್ನು ಆವರಿಸಿದೆ. ಜತೆಗೆ ಕೊಲಂಬಿಯಾ, ಪೆರು ಮತ್ತಿತರ ದೇಶಗಳಿಗೂ ಹರಡಿದೆ. ಇದು ಅಪಾರ ಜೀವ ವೈವಿಧ್ಯಗಳಿಗೆ ಆಶ್ರಯ ತಾಣ ಎನಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ