ಗುರುವಾರ, ಮೇ 9, 2024
SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?-ಐಪಿಎಲ್ ನಲ್ಲಿ ಮಿಂಚುತ್ತಿದೆ ಹೆಡ್ ಮತ್ತು ಅಭಿಷೇಕ್ ಜೋಡಿ ; 58 ಎಸೆತಗಳಲ್ಲಿ 167 ರನ್ ಸಿಡಿಸಿ ಜಯಗಳಿಸಿದರ ಹೈದರಾಬಾದ್.!-ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿಯ ಕ್ಯಾಚ್ ಗೆ ಫಿದಾ ಆದ ಫ್ಯಾನ್ಸ್..!

Twitter
Facebook
LinkedIn
WhatsApp
ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿಯ ಕ್ಯಾಚ್ ಗೆ ಫಿದಾ ಆದ ಫ್ಯಾನ್ಸ್..!

ಎಂಎಸ್‌ ಧೋನಿ.. ವಿಶ್ವ ಕ್ರಿಕೆಟ್‌ನಲ್ಲಿ ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತಿ ಪಡೆದಿರುವ ಆಟಗಾರ. ತಮ್ಮ ಕಾಲತ್ಮಕ ಬ್ಯಾಟಿಂಗ್‌ ಹಾಗೂ ಚಾಣಕ್ಯತನದ ವಿಕೆಟ್‌ ಕೀಪಿಂಗ್‌ನಿಂದಾಗಿ ಸದ್ದು ಮಾಡಿದ ಪ್ಲೇಯರ್‌. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾಹಿ ನಿವೃತ್ತಿ ಘೋಷಿಸಿದರೂ ಸಹ, ಇನ್ನು ಇವರ ಮ್ಯಾಜಿಕ್‌ನ್ನು ಐಪಿಎಲ್‌ನಲ್ಲಿ ನಡೆಯುತ್ತಿದೆ. ಧೋನಿ ತಮ್ಮ 42ನೇ ವಯಸ್ಸಿನಲ್ಲೂ ಯುವಕರು ನಾಚಿಸುವಂತೆ ಕ್ರಿಕೆಟ್ ಆಡುತ್ತಾರೆ. ಇದಕ್ಕೆ ಗುಜರಾತ್‌ ವಿರುದ್ಧದ ಪಂದ್ಯವೇ ಸಾಕ್ಷಿ..

ಮಂಗಳವಾರ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಗುಜರಾತ್‌ ಹಾಗೂ ಚೆನ್ನೈ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 206 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್‌ ಸೇರಿಸಿ ಸೋಲು ಕಂಡಿತು. ಈ ಪಂದ್ಯದ ಪ್ರಮುಖ ಆಕರ್ಷಣೆ ಎಂಎಸ್ ಧೋನಿ ಅವರ ಕ್ಯಾಚ್.

ಗುರಿಯನ್ನು ಬೆನ್ನಟ್ಟಿದ ಟೈಟನ್ಸ್‌ ತಂಡ 34 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಿಜಯ್‌ ಶಂಕರ್‌ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದರು. ಒಂದು ಕಡೆಯಲ್ಲಿ ಸ್ಕೋರ್‌ ಬೋರ್ಡ್‌ ಒತ್ತಡ ಇವರ ಮೇಲೆ ಸದಾ ಇತ್ತು. ಇವರು ಬಿಗ್ ಹಿಟ್ ಬಾರಿಸಿ ತಂಡಕ್ಕೆ ಅಗತ್ಯವಾಗಬೇಕಿತ್ತು. ಈ ಸಂದರ್ಭದಲ್ಲಿ ಔಟ್‌ ಸೈಡ್‌ ಆಫ್‌ ಸ್ಟಂಪ್‌ ಚೆಂಡನ್ನು ಕೆಣಕಿ ವಿಜಯ್‌ ಔಟ್ ಆದರು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್‌ರೌಂಡರ್‌ ಡೇರಿಲ್‌ ಮಿಚೆಲ್‌ ಇನ್ನಿಂಗ್ಸ್‌ 8ನೇ ಎಸೆಯಲು ಮುಂದಾದರು. ಓವರ್‌ನ ಮೂರನೇ ಎಸೆತದಲ್ಲಿ ವಿಜಯ್‌ ಶಂಕರ್‌ ಸ್ಟಂಪ್‌ ಆಚೆ ಹೊರಟಿದ್ದ ಚೆಂಡನ್ನು ಕೆಣಕಿ, ಬೌಂಡರಿ ಪಡೆಯುವ ಆಸೆಯನ್ನು ಹೊಂದಿದ್ದರು. ಆದರೆ ಸ್ಟಂಪ್‌ ಹಿಂದೆ ಇದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ಚಾಣಕ್ಯತನವನ್ನು ಮೆರೆದರು. ಫಸ್ಟ್‌ ಸ್ಲೀಪ್‌ನತ್ತ ಸಾಗಿದ ಚೆಂಡನ್ನು ಗುರುತಿಸಿದ ಮಾಹಿ ಗಾಳಿಯಲ್ಲಿ ಜಿಗಿದು ಕ್ಯಾಚ್‌ ಪಡೆದರು. ಧೋನಿ ಹಿಡಿದ ಕ್ಯಾಚ್‌ಗೆ ಇಡೀ ಚೆಪಾಕ್ ಸ್ಟೇಡಿಯಂನಲ್ಲಿನ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಆರ್‌ಸಿಬಿ ವಿರುದ್ಧ ರನ್‌ಔಟ್‌ ಆರ್‌ಸಿಬಿ ವಿರುದ್ಧವೂ ಮಹೇಂದ್ರ ಸಿಂಗ್‌ ಧೋನಿ ವಿಕೆಟ್‌ ಹಿಂದೆ ಇಂತಹದ್ದೇ ಕಾರ್ಯವನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಅಸಲಿಗೆ ಅದು ಆರ್‌ಸಿಬಿ ಇನ್ನಿಂಗ್ಸ್‌ನ ಕೊನೆಯ ಎಸೆತವಾಗಿತ್ತು. ದಿನೇಶ್‌ ಕಾರ್ತಿಕ್‌ ಈ ಚೆಂಡನ್ನು ಮುಟ್ಟಲು ಸಾಧ್ಯವೇ ಆಗಲಿಲ್ಲ. ಓಡಿ ಒಂದು ರನ್‌ ಕದಿಯಲು ಮುಂದಾದರು. ಅದಾಗಲೇ ಎಚ್ಚೆತ್ತುಕೊಂಡಿದ್ದ ಧೋನಿ ಅಂಡರ್ ಆರ್ಮ್ ಥ್ರೋ ಮಾಡಿ ರನ್ ಔಟ್‌ ಮಾಡಿದರು.

ಪಂದ್ಯವನ್ನು ಕೈಚೆಲ್ಲಿದ ಬಳಿಕ ಮಾತನಾಡಿರುವ ಟೈಟನ್ಸ್ ತಂಡದ ನಾಯಕ ಶುಭಮನ್‌ ಗಿಲ್‌, “ನಾವು ಪವರ್‌ ಪ್ಲೇನಲ್ಲಿ ಉತ್ತಮ ಆರಂಭವನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದೇವು. ಅದು ಸಾಧ್ಯವಾಗಲಿಲ್ಲ. ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಯೋಜನೆಗೆ ತಕ್ಕಂತೆ ಆಟವಾಡಲಿಲ್ಲ. ಎದುರಾಳಿ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಈ ಪಿಚ್‌ ಬೌಲರ್‌ಗಳಿಗೆ ಸಹಾಯಕವಾಗಿತ್ತು. ಟೂರ್ನಿಯ ಆರಂಭದಲ್ಲಿ ಆದ ತಪ್ಪಿನಿಂದ ನಾವು ಪಾಠ ಕಲಿಯುತ್ತೇವೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ