Gold Rate: ಇಳಿಕೆಯತ್ತ ಆಭರಣದ ಬೆಲೆ; ಇವತ್ತಿನ ಚಿನ್ನದ ದರ ಇಲ್ಲಿದೆ.
Gold Rate: ಭಾರತದಲ್ಲಿ ಚಿನ್ನದ ದರ ಕ್ರಮೇಣ ಏರಿಕೆಯ ಹಾದಿ ಹಿಡಿದಿದೆ. ಇಂದು ಕೊಂಚ ಇಳಿಕೆಯಾಗಿದ್ದು, ಕಳೆದ ಒಂದು ತಿಂಗಳಲ್ಲಿ ಇದ್ದ ಚಿನ್ನದ ದರ ಇಂದು 60,000 ರೂಪಾಯಿ ಗಡಿ ದಾಟಿದೆ. ವಿದೇಶದಲ್ಲೂ ಚಿನ್ನದ ಬೆಲೆ ಏರಿಕೆಯತ್ತ ಸಾಗಿದೆ. ಶುಭಕಾರ್ಯ, ಕಷ್ಟದ ಸಮಯದಲ್ಲಿ ಅಡವಿಟ್ಟು ಸಾಲ ಪಡೆಯಲು ಚಿನ್ನ ಬಹಳ ಅವಶ್ಯಕ. ಆದರೆ ಚಿನ್ನದ ಬೆಲೆ ಈಗ ಬಡವರಿಗೆ ನಿಲುಕದ ನಕ್ಷತ್ರವಾಗಿದೆ. ಗ್ರಾಂಗೆ 6 ಸಾವಿರಕ್ಕೂ ಹೆಚ್ಚು ಬೆಲೆ ಆಗಿದೆ. ಮಾರ್ಚ್ 20 ರಂದು ಏರಿಕೆ ಆಗಿದ್ದ ಚಿನ್ನ, ಮಾರ್ಚ್ 21ರಂದು ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಮಾರ್ಚ್ 22 ರಂದು ಮತ್ತೆ ಏರಿಕೆ ಆಗಿತ್ತು. ಇಂದು ಚಿನ್ನದ ಬೆಳೆ ಇಳಿದಿದ್ದರೂ ಆಭರಣಪ್ರಿಯರಿಗೆ ಭಾರೀ ನಿರಾಸೆಯುಂಟು ಮಾಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಚಿನ್ನದ ಬೆಲೆ ನಿನ್ನೆಗಿಂತ ಇಂದು 1 ರೂ. ಮಾತ್ರ ಇಳಿದಿದೆ.
1 ಗ್ರಾಂ – 6,134 ರೂ
8 ಗ್ರಾಂ – 49,072 ರೂ.
10 ಗ್ರಾಂ – 61,340 ರೂ.
100 ಗ್ರಾಂ – 6,13,400 ರೂ
24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ – 6,692 ರೂ.
8 ಗ್ರಾಂ – 53,536 ರೂ.
10 ಗ್ರಾಂ – 66,920 ರೂ.
100 ಗ್ರಾಂ – 6,69,200 ರೂ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು, 10 ಗ್ರಾಂಗೆ 61,340 ರೂ ಬೆಲೆ ನಿಗದಿ ಆಗಿದೆ. ನಿನ್ನೆ ಚಿನ್ನದ ಬೆಲೆ 66,920 ರೂ. ಇತ್ತು. ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಹಾಗೂ ಇನ್ನಿತರ ನಗರಗಳಲ್ಲಿ ಚಿನ್ನದ ಬೆಲೆ ಒಂದೇ ಇದ್ದರೂ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ (10 ಗ್ರಾಂ) ಚಿನ್ನದ ದರ
ಚೆನ್ನೈನಲ್ಲಿ – 22 ಕ್ಯಾರೆಟ್ಗೆ 61,990 ರೂ.
24 ಕ್ಯಾರೆಟ್ಗೆ 67,630
ಮುಂಬೈನಲ್ಲಿ – 22 ಕ್ಯಾರೆಟ್ಗೆ 61,340 ರೂ
24 ಕ್ಯಾರೆಟ್ಗೆ 66,920 ರೂ.
ದೆಹಲಿಯಲ್ಲಿ – 22 ಕ್ಯಾರೆಟ್ಗೆ 61,490 ರೂ.
24 ಕ್ಯಾರೆಟ್ಗೆ 67,070 ರೂ.
ಕೊಲ್ಕತ್ತಾದಲ್ಲಿ – 22 ಕ್ಯಾರೆಟ್ಗೆ 61,340
24 ಕ್ಯಾರೆಟ್ಗೆ 66,920 ರೂ.
ಹೈದರಾಬಾದ್ನಲ್ಲಿ- 22 ಕ್ಯಾರೆಟ್ಗೆ 61,340 ರೂ.
24 ಕ್ಯಾರೆಟ್ಗೆ 66,920 ರೂ.
ಕೇರಳದಲ್ಲಿ – 22 ಕ್ಯಾರೆಟ್ಗೆ 61,340 ರೂ.
24 ಕ್ಯಾರೆಟ್ಗೆ 66,920 ರೂ.
ಪುಣೆಯಲ್ಲಿ – 22 ಕ್ಯಾರೆಟ್ಗೆ 61,340 ರೂ.
24 ಕ್ಯಾರೆಟ್ಗೆ 66,920 ರೂ.
ಇಂದಿನ ಬೆಳ್ಳಿ ದರ
ಬೆಳ್ಳಿ ನಿನ್ನೆ ( ಮಾ 22) ಕೂಡಾ ಏರಿಕೆ ಆಗಿತ್ತು. ಇಂದು ಗ್ರಾಂಗೆ 10 ಪೈಸೆ ಏರಿಕೆ ಆಗಿದೆ.
1 ಗ್ರಾಂ – 76.20 ರೂ
8 ಗ್ರಾಂ – 609.60 ರೂ
10 ಗ್ರಾಂ – 762 ರೂ.
100 ಗ್ರಾಂ – 7,620 ರೂ.
1 ಕಿಲೋ – 76,200 ರೂ.