ಬುಧವಾರ, ಮೇ 8, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಂಗೀತ ಸಮ್ಮೇಳನದಲ್ಲಿ ಗುಂಡಿನ ದಾಳಿ ; 40 ಮಂದಿ ಸಾವು - 100 ಕ್ಕೂ ಹೆಚ್ಚು ಮಂದಿಗೆ ಗಾಯ.!

Twitter
Facebook
LinkedIn
WhatsApp
ಸಂಗೀತ ಸಮ್ಮೇಳನದಲ್ಲಿ ಗುಂಡಿನ ದಾಳಿ ; 40 ಮಂದಿ ಸಾವು - 100 ಕ್ಕೂ ಹೆಚ್ಚು ಮಂದಿಗೆ ಗಾಯ.!

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅಧಿಕಾರದ ಮೇಲೆ ಹಿಡಿತ ಸಾಧಿಸಿದ ಕೆಲವೇ ದಿನಗಳಲ್ಲಿ ಇಸ್ಲಾಮಿಕ್‌ ಸ್ಟೇಟ್‌ (Islamic State terrorists – ISIS) ಉಗ್ರರು ಮಾಸ್ಕೋದಲ್ಲಿ ಭಯಾನಕ ದಾಳಿ (Moscow Attack) ನಡೆಸಿದ್ದಾರೆ. ಶುಕ್ರವಾರ ಮಾಸ್ಕೋದ ದೊಡ್ಡ ಸಂಗೀತ ಕಚೇರಿ ಹಾಲ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಠ 40 ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಗ್ರರು ಹಾಲ್‌ಗೆ ಬೆಂಕಿ ಹಚ್ಚಿದ್ದಾರೆ.

ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ, 6200 ಜನರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಂಗೀತ ಹಾಲ್‌ ಆದ ಕ್ರೋಕಸ್ ಸಿಟಿ ಹಾಲ್‌ಗೆ ದಾಳಿಕೋರರು ದಾಳಿಯಿಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ದಾಳಿಯ ನಂತರ ದಾಳಿಕೋರರಿಗೆ ಏನಾಯಿತು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಇದನ್ನು “ದೊಡ್ಡ ದುರಂತ” ಎಂದಿದ್ದಾರೆ.

ಉಗ್ರರ ಈ ದಾಳಿಯು ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ದಾಳಿಗಳಲ್ಲಿ ಅತ್ಯಂತ ಮಾರಕವಾದುದು. ಬೆಂಕಿಯಲ್ಲಿ ಉರಿಯುತ್ತಿರುವ ಹಾಲ್‌ನ ಚಾವಣಿ ಕುಸಿಯುತ್ತಿರುವುದು ಕಂಡುಬಂದಿದೆ. ಅದರಡಿ ಇನ್ನೂ ಗಾಯಾಳುಗಳು ಸಿಕ್ಕಿಹಾಕಿಕೊಂಡಿರಬಹುದು ಎಂಬ ಶಂಕೆಯಿಂದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.

ರಷ್ಯಾದ ರಾಕ್ ಬ್ಯಾಂಡ್ ʼಪಿಕ್ನಿಕ್ʼ ಪ್ರದರ್ಶನಕ್ಕಾಗಿ ಜನಸಂದಣಿ ಸೇರುತ್ತಿದ್ದಾಗ ಈ ದಾಳಿ ನಡೆದಿದೆ. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಪ್ರಕಾರ 40 ಮಂದಿ ಸತ್ತಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಕ್ರಮಣಕಾರರು ಮೊದಲು ಸ್ಫೋಟಕಗಳನ್ನು ಎಸೆದರು. ಸ್ಫೋಟಗೊಂಡ ಬೆಂಕಿಯಿಂದ ಹೆಚ್ಚಿನವರು ಗಾಯಗಳಿಗೀಡಾದರು. ನಂತರು ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಕೆಲವು ರಷ್ಯಾದ ವರದಿಗಳು ಸೂಚಿಸಿವೆ. ಗಾಯಗೊಂಡವರಲ್ಲಿ ಐದು ಮಕ್ಕಳು ಸೇರಿದಂತೆ 115 ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ