ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಂದಿ ಕಿಡ್ನಿಯನ್ನು 62 ವರ್ಷದ ವ್ಯಕ್ತಿಗೆ ಜೋಡಿಸಿದ ವೈದ್ಯರು..!

Twitter
Facebook
LinkedIn
WhatsApp
ಹಂದಿ ಕಿಡ್ನಿಯನ್ನು 62 ವರ್ಷದ ವ್ಯಕ್ತಿಗೆ ಜೋಡಿಸಿದ ವೈದ್ಯರು..!

ಬೆಂಗಳೂರು: ಇದೇ ಮೊದಲ ಬಾರಿಗೆ ವೈದ್ಯರ ತಂಡವೊಂದು ಆನುವಂಶಿಕವಾಗಿ ಮಾರ್ಪಾಟು ಮಾಡಿದ ಹಂದಿಯ ಮೂತ್ರ ಪಿಂಡಗಳನ್ನು ಜೀವಂತ ವ್ಯಕ್ತಿಗೆ ಕಸಿ (Kidney Transplant) ಮಾಡಿದ್ದಾರೆ. ಅಂದ ಹಾಗೆ ವೈದ್ಯಕೀಯ ಲೋಕದಲ್ಲಿ ಇದು ಮೊಟ್ಟ ಮೊದಲ ಪ್ರಕರಣ ಹಾಗೂ ಸಾಧನೆ. ಭವಿಷ್ಯದಲ್ಲಿ ಅಂಗಾಂಗಳ ಕೊರತೆಯನ್ನು ನೀಗಿಸುವಲ್ಲಿ ದೊಡ್ಡ ಉಪಕ್ರಮ. ಅಮೆರಿಕದ ಬೋಸ್ಟನ್​​ನಲ್ಲಿ ಇಂಥದ್ದೊಂದು ವೈದ್ಯಕೀಯ ಸಾಧನೆ ನಡೆದಿದೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಚರ್ಡ್ ಸ್ಲೇಮನ್ ಎಂಬುವವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹಂದಿಯ ಕಿಡ್ನಿ ಜೋಡಿಸಲಾಗಿದೆ (pig Kidney) ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ಪ್ರಕಟಿಸಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.

“ನಾನು ಇದನ್ನು ಬದುಕುವ ಮಾರ್ಗವಾಗಿ ಮಾತ್ರವಲ್ಲದೆ, ಅಂಗಾಂಗ ಕಸಿ ಅಗತ್ಯವಿರುವ ಸಾವಿರಾರು ಜನರಿಗೆ ಭರವಸೆ ನೀಡುವ ಮಾರ್ಗವಾಗಿ ಅನುಭವಿಸಿದೆ ” ಎಂದು ಸ್ಲೇಮನ್ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಸಿ ಅಗತ್ಯವಿರುವ ಜನರಿಗೆ ಅಂಗಗಳ ಕೊರತೆಯನ್ನು ನಿವಾರಿಸಲು ಮೂತ್ರಪಿಂಡಗಳು (Kidney Transplant), ಯಕೃತ್ತು, ಹೃದಯಗಳು ಮತ್ತು ಇತರ ಅಂಗಗಳನ್ನು ಒದಗಿಸಲು ಅನುವಂಶಿಕವಾಗಿ ಮಾರ್ಪಡಿಸಿದ ಹಂದಿಗಳನ್ನು ಬೆಳೆಸುತ್ತಿರುವ ನಡುವೆ ಈ ಕಾರ್ಯವಿಧಾನವು ಆಶಾದಾಯಕ ಬೆಳವಣಿಗೆಯಾಗಿದೆ. ಈ ಕಸಿ ವಿಧಾನವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ವಿಶ್ವದಾದ್ಯಂತದ ಲಕ್ಷಾಂತರ ರೋಗಿಗಳಿಗೆ ಭರವಸೆ ನೀಡುತ್ತದೆ ಎಂದು ” ಎಂದು ಆಸ್ಪತ್ರೆಯ ಕ್ಲಿನಿಕಲ್ ಟ್ರಾನ್ಸ್​ಪ್ಲಾಂಟ್​ ಟಾಲರೆನ್ಸ್ ನಿರ್ದೇಶಕ ಡಾ.ತತ್ಸುವೊ ಕವಾಯಿ ಹೇಳಿದ್ದಾರೆ.

ಬಯೋಟೆಕ್ ಕಂಪನಿಗಳು ಕ್ಲೋನ್ ಮಾಡಿದ ಹಂದಿಗಳನ್ನು ಅಭಿ ವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಅವುಗಳ ಡಿಎನ್ಎಯನ್ನು ಆನುವಂಶಿಕವಾಗಿ ಮಾರ್ಪಡಿಸಲಾಗುತ್ತಿದೆ. ಹಾಗಾದರೆ ಅವುಗಳನ್ನು ಮಾನವ ದೇಹವು ತಿರಸ್ಕರಿಸುವುದಿಲ್ಲ ಹಂದಿಗಳ ವೈರಸ್​ಗಳನ್ನು ಜನರಿಗೆ ಹರಡುವುದಿಲ್ಲ ,

ಬೋಸ್ಟನ್ ನಲ್ಲಿ ಕಸಿ ಮಾಡಿದ ಮೂತ್ರಪಿಂಡವು ಕೇಂಬ್ರಿಡ್ಜ್ ನ ಇಜೆನೆಸಿಸ್ ರಚಿಸಿದ ಹಂದಿಯಿಂದ ತೆಗೆಯಲಾಗಿದೆ. ಮಾನವ ಕಸಿಗಾಗಿ ಅಂಗಗಳನ್ನು ತಯಾರಿಸಲು ಇಜೆನೆಸಿಸ್ ಹಂದಿಗಳನ್ನು 69 ಆನುವಂಶಿಕ ಮಾರ್ಪಾಡು ಮಾಡಲಾಗಿದೆ. ಈ ಬದಲಾವಣೆಗಳು ಹಂದಿಗಳಿಗೆ ಸೋಂಕು ತಗುಲುವ ವೈರಸ್​ನಿಂ ರಕ್ಷಿಸುತ್ತವೆ ಹಾಗೂ ಹಂದಿಯ ಜೀನ್​ಗಳನ್ನು ಅಳಿಸುತ್ತವೆ. ಅಂಗಗಳನ್ನು ಮನಷ್ಯರಿಗೆ ಹೊಂದಿಕೆಯಾಗುವಂತೆ ಮಾಡಲು ಮಾನವನ ಜೀನ್​ಗಳನ್ನು ಸೇರಿಸಲಾಗುತ್ತದೆ.

ರೋಗಿಯ ಧೈರ್ಯಶಾಲಿ ನಿರ್ಧಾರ ಮತ್ತು ಕಸಿ ವಿಜ್ಞಾನದ ಪ್ರಗತಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಇಜೆನೆಸಿಸ್​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಕರ್ಟಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಇದು ವೈದ್ಯಕೀಯ ಲೋಕದಲ್ಲಿ ಹೊಸ ಲೋಕಕ್ಕೆ ಪ್ರವೇಶವನ್ನು ಪ್ರತಿನಿಧಿಸುತ್ತದೆ. ಲ ಕ್ಷಾಂತರ ರೋಗಿಗಳ ಜೀವನವನ್ನು ಬದಲಾಯಿಸುವ ಜೀನೋಮ್ ಎಂಜಿನಿಯರಿಂಗ್​ನ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.
ಮಾನವ ಕಸಿಗಾಗಿ ಅಂಗಗಳ ನಿರಂತರ ಕೊರತೆಯನ್ನು ಪರಿಹರಿಸಲು ಕ್ಲೋನಿಂಗ್ ಮತ್ತು ಜೀನ್-ಎಡಿಟಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದಕ್ಕೆ ಈ ಸರ್ಜರಿ ಪ್ರೇರಣೆ ನೀಡಲಿದೆ. ಪ್ರಸ್ತುತ 103,000 ಕ್ಕೂ ಹೆಚ್ಚು ಜನರು ಅಂಗಾಂಗಗಳಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಪ್ರತಿದಿನ ಸುಮಾರು 17 ಜನರು ಅಂಗಾಂಗ ಪಡೆಯಲು ಸಾಧ್ಯವಾಗದ ಕಾರಣ ಸಾಯುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ