ತೆಲಂಗಾಣ ಮಾಜಿ ರಾಜ್ಯಪಾಲೆ ತಮಿಳ್ ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ.!
Twitter
Facebook
LinkedIn
WhatsApp
ಚೆನ್ನೈ: ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಬುಧವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು.
ತಮಿಳುಸೈ ಸೌಂದರರಾಜನ್ ಅವರು ಪ್ರಸ್ತುತ ಆಡಳಿತಾರೂಢ ಡಿಎಂಕೆಯ ಕನಿಮೋಳಿ ಪ್ರತಿನಿಧಿಸುತ್ತಿರುವ ತೂತುಕುಡಿ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿಗೆ ಮರು ಸೇರ್ಪಡೆಯಾದ ನಂತರ ಮಾತನಾಡಿದ ತಮಿಳಿಸೈ ಸೌಂದರರಾಜನ್ ಅವರು, ನಾನು ಚುನಾವಣೆಗೆ ಸ್ಪರ್ಧಿಸಲು ಬಯಸುತ್ತೇನೆ ಮತ್ತು ನಾನು ನನ್ನ ಪಕ್ಷಕ್ಕೂ ನನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದೇನೆ. ನನ್ನ ಬಳಿ ಇರುವ ಸದಸ್ಯತ್ವ ಕಾರ್ಡ್ ಅನ್ನು ಮರಳಿ ಪಡೆಯಲು ನನಗೆ ಸಂತೋಷವಾಗಿದೆ. ಇದು ಅತ್ಯಂತ ಸಂತೋಷದ ದಿನ. ಕಠಿಣ ನಿರ್ಧಾರ ಮತ್ತು ಸಂತೋಷದ ನಿರ್ಧಾರ ಕೂಡ. ರಾಜ್ಯಪಾಲನಾಗಿ ನನಗೆ ಹಲವು ಸೌಲಭ್ಯಗಳಿದ್ದವು ಆದರೆ ನಾನು ಅದನ್ನು ಬಿಟ್ಟು ಬಂದಿದ್ದೇನೆ. ತಮಿಳುನಾಡಿನಲ್ಲಿ ಕಮಲ ಅರಳುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.