ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಎರಡು ಬೇರೆ ಬೇರೆ ರಾಜ್ಯದಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸಹೋದರರು..!

Twitter
Facebook
LinkedIn
WhatsApp
ಎರಡು ಬೇರೆ ಬೇರೆ ರಾಜ್ಯದಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸಹೋದರರು..!

ಅಹಮದಾಬಾದ್: ಇಬ್ಬರು ಸಹೋದರರು ಒಂದೇ ಹಂತದ ಹುದ್ದೆ ಅಲಂಕರಿಸಿದ ಕಾಕತಾಳೀಯ ವಿದ್ಯಮಾನಕ್ಕೆ ಪೊಲೀಸ್​ ಇಲಾಖೆ ಸಾಕ್ಷಿಯಾಗಿದೆ. ಎರಡು ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್​ ಮಹಾನಿರ್ದೇಶಕರಾಗಿ (ಡಿಜಿಪಿ) ಇವರು ಸೇವೆ ಸಲ್ಲಿಸುತ್ತಿದ್ದಾರೆ.

ಬಿಹಾರ ಮೂಲದ ಐಪಿಎಸ್ ಅಧಿಕಾರಿಗಳಾದ ವಿಕಾಸ್ ಸಹಾಯ್ ಮತ್ತು ವಿವೇಕ್ ಸಹಾಯ್ ಪೊಲೀಸ್​ ಇಲಾಖೆಯಲ್ಲಿ ಡಿಜಿಪಿ ಹುದ್ದೆಯನ್ನು ಅಲಂಕರಿಸಿದ ಇಬ್ಬರು ಸಾಧಕರಾಗಿದ್ದಾರೆ. ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಗೆ ವಿವೇಕ್ ಸಹಾಯ್ ಅವರನ್ನು ಇತ್ತೀಚೆಗೆ ನೇಮಕ ಮಾಡುವುದರೊಂದಿಗೆ ಅಭೂತಪೂರ್ವ ಕಾಕತಾಳೀಯ ಘಟನೆ ನಡೆದಿದೆ. ಇವರ ಸಹೋದರ ವಿಕಾಸ್ ಸಹಾಯ್ ಕಳೆದ 1 ವರ್ಷದಿಂದ ಗುಜರಾತ್ ಡಿಜಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಹಾಯ್ ಸಹೋದರರಿಬ್ಬರು ಎರಡು ರಾಜ್ಯಗಳ ಡಿಜಿಪಿಯಾಗಿದ್ದಾರೆ. ದೇಶದ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲ ವಿಶಿಷ್ಟ ವಿದ್ಯಮಾನ ಇದಾಗಿದೆ.

ಸಹಾಯ್​ ಕುಟುಂಬದಲ್ಲಿ ಸಂತಸ: ಬಿಹಾರ ಮೂಲದ ಸಹಾಯ್​ ಕುಟುಂಬದ ಇಬ್ಬರು ಸಹೋದರರು 2 ಪ್ರತ್ಯೇಕ ರಾಜ್ಯಗಳ ಡಿಜಿಪಿ ಆಗಿರುವುದು ಸಂತಸ ತಂದಿದೆ. ಪೊಲೀಸ್ ಇಲಾಖೆಯಲ್ಲಿಯೇ ಇಂತಹ ಅನೂಹ್ಯ ಘಟನೆ ಮೊದಲ ಬಾರಿಗೆ ಸಂಭವಿಸಿದೆ. ಸಹೋದರರ ಈ ಸಾಧನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ನೇಹಿತರು, ಬಂಧುಗಳು ಹಾಗೂ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ. ವಿಶೇಷವೆಂದರೆ ಸಹಾಯ್​ ಕುಟುಂಬದಲ್ಲಿ ಮೂವರು ಸಹೋದರರೂ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ವಿವೇಕ್ ಸಹಾಯ್ ಮತ್ತು ವಿಕಾಸ್ ಸಹಾಯ್ ಡಿಜಿಪಿಗಳಾಗಿದ್ದರೆ, ಮೂರನೇ ಮತ್ತು ಕಿರಿಯ ಸಹೋದರ ವಿಕ್ರಮ್ ಸಹಾಯ್ 1992 ರ ಬ್ಯಾಚ್​ನ ಐಆರ್​​ಎಸ್​ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿವೇಕ್ ಸಹಾಯ್ ಬಗ್ಗೆ ಒಂದಿಷ್ಟು ಮಾಹಿತಿ: ಸಹಾಯ್​ ಕುಟುಂಬದ ಹಿರಿಯ ಪುತ್ರ ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‌ನ 1988 ರ ಬ್ಯಾಚ್​​​ನ ಐಪಿಎಸ್ ಅಧಿಕಾರಿ. 2024 ರ ಮೇ ಅಂತ್ಯಕ್ಕೆ ನಿವೃತ್ತಿ ಆಗಲಿರುವ ವಿವೇಕ್ ​ಅವರನ್ನು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಡಿಜಿಪಿ ಹುದ್ದೆಗೆ ಮೂವರ ಹೆಸರನ್ನು ಪರಿಗಣಿಸಲಾಗಿತ್ತು. ಇದರಲ್ಲಿ ವಿವೇಕ್ ಸಹಾಯ್ ಹೆಸರು ಅಗ್ರಸ್ಥಾನದಲ್ಲಿತ್ತು. ಗೃಹರಕ್ಷಕ ದಳದ ಡಿಜಿ ಹುದ್ದೆಯಲ್ಲಿದ್ದ ಅವರಿಗೆ ಬಡ್ತಿ ನೀಡಲಾಗಿದೆ. ರಾಜೀವ್​ಕುಮಾರ್​ ಅವರನ್ನು ಹುದ್ದೆಯಿಂದ ವರ್ಗ ಮಾಡಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ವಿವೇಕ್ ಸಹಾಯ್ ಅವರನ್ನು ಚುನಾವಣಾ ಆಯೋಗ ಪರಿಗಣಿಸಿದೆ.

ವಿಕಾಸ್ ಸಹಾಯ್ ಯಾರು?: ಸಹಾಯ್​ ಕುಟುಂಬದ ಎರಡನೇ ಪುತ್ರರಾದ ವಿಕಾಸ್ ಸಹಾಯ್ ಅವರು 1989 ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ವಿವೇಕ್​ ಅವರು 1999ರಲ್ಲಿ ಎಸ್​ಪಿಯಾಗಿ ಆಯ್ಕೆಯಾದರು. 2001 ರಲ್ಲಿ ಅಹಮದಾಬಾದ್‌ ಗ್ರಾಮಾಂತರದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ನಡೆದ ಗೋಧ್ರಾ ಘಟನೆಯಲ್ಲಿ ಗಾಯಗೊಂಡಿದ್ದರು. 2002 ರಲ್ಲಿ ಅವರನ್ನು ಅಹಮದಾಬಾದ್‌ನಲ್ಲಿಯೇ ವಲಯ 2 ಮತ್ತು 3 ರ ಡಿಸಿಪಿಯಾಗಿ ನಿಯೋಜಿಸಲಾಯಿತು. 2004ರಲ್ಲಿ ಟ್ರಾಫಿಕ್ ಡಿಸಿಪಿ, 2005ರಲ್ಲಿ ಅಹಮದಾಬಾದ್‌ನಲ್ಲಿ ಹೆಚ್ಚುವರಿ ಟ್ರಾಫಿಕ್ ಸಿಪಿ. 2007 ರಲ್ಲಿ ಅವರನ್ನು ಹೆಚ್ಚುವರಿ ಸಿಪಿಯಾಗಿ ಸೂರತ್‌ಗೆ ನಿಯೋಜಿಸಲಾಗಿತ್ತು. 2008 ರಲ್ಲಿ ಜಂಟಿ ಸಿಪಿಯಾದರೆ, 2009 ರಲ್ಲಿ ಐಜಿ (ಭದ್ರತೆ), 2010 ರಲ್ಲಿ ಐಜಿ (ಸಿಐಡಿ) ಮತ್ತು ಸೂರತ್‌ನಲ್ಲಿ ಐಜಿ, ಐಬಿ ಆಗಿ ಸೇವೆ ಸಲ್ಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist