ಮೈಸೂರು, ಬೆಂಗಳೂರು ದಕ್ಷಿಣದ ಟಿಕೆಟ್ ಕಗ್ಗಂಟು-ಕಾಂಗ್ರೆಸ್ ಟಿಕೆಟ್ ಪಟ್ಟಿ ವಿಳಂಬ

ಬೆಂಗಳೂರು: ಮೈಸೂರು ಹಾಗೂ ಬೆಂಗಳೂರು ದಕ್ಷಿಣದ ಟಿಕೆಟ್ ಕಗ್ಗಂಟು, ಕಾಂಗ್ರೆಸ್ಸಿನ ಟಿಕೆಟ್ ಪಟ್ಟಿಯನ್ನು ವಿಳಂಬ ಮಾಡಿದೆ ಎಂದು ತಿಳಿದುಬಂದಿದೆ.
ಈ ಎರಡು ಕ್ಷೇತ್ರಗಳ ನಡುವಿನ ಆಯ್ಕೆ ಕಗ್ಗಂಟು ಇಡೀ ಕಾಂಗ್ರೆಸ್ಸಿನ ಟಿಕೆಟ್ ಪಟ್ಟಿಯನ್ನು ವಿಳಂಬಗೊಳಿಸಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ.
ಕೇವಲ ಎರಡು ಸೀಟು ಪಡೆಯಲು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ? ಕುಮಾರಸ್ವಾಮಿ ಬೇಸರ..!
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಕೇವಲ ಎರಡು ಸ್ಥಾನಗಳನ್ನು ನೀಡಲಿದೆ ಎಂಬ ವರದಿಗಳ ನಡುವೆಯೇ, ಪ್ರಾದೇಶಿಕ ಪಕ್ಷದ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅಲಕಪ ಸೋಮವಾರ ಕೇಸರಿ ಪಕ್ಷದ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದರೂ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಧಿಕೃತ ಘೋಷಣೆ ಆಗುವವರೆಗೆ ನಾನು ಮಾತನಾಡುವುದಿಲ್ಲ. ನಾನು ಆರು ಅಥವಾ ಏಳು ಸ್ಥಾನಗಳನ್ನು ಕೇಳಿಲ್ಲ, ನಮ್ಮಿಬ್ಬರ ನಡುವೆ ಚರ್ಚೆ ಆರಂಭವಾದ ದಿನದಿಂದಲೂ ನಾವು ಮೂರ್ನಾಲ್ಕು ಸ್ಥಾನಗಳನ್ನು ಕೇಳಿದ್ದೇವೆ ಎಂದರು.
ಇಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಕೋರ್ ಕಮಿಟಿ ಸದಸ್ಯರು, ಎಲ್ಲಾ ಲೋಕಸಭಾ ಕ್ಷೇತ್ರಗಳ ವೀಕ್ಷಕರು, ಜಿಲ್ಲಾಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರ ಸಭೆ ನಡೆಯಿತು.
ನಮ್ಮ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ನಾವು ಗುರಿಮುಟ್ಟುವುದು ಕೇವಲ ಅಧಿಕಾರಕ್ಕೆ ಅಲ್ಲ. ನಮ್ಮ ರಾಜ್ಯಕ್ಕೆ ಹಲವಾರು ರೀತಿಯಲ್ಲಿ ಅನ್ಯಾಯವಾಗಿದೆ, ಅದು ಆ ಪಕ್ಷ ಇ ಪಕ್ಷದಿಂದ ಅಂತಾ ಇಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡುದರೆ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದ್ದು ಸತ್ಯ ಎಂದರು.
ದೇಶದಲ್ಲಿ ಎನ್ಡಿಎ ಸರ್ಕಾರ ಬರುತ್ತದೆ ಎಂಬ ಭಾವನೆ ಇದೆ. ಮೈತ್ರಿಯ ಉದ್ದೇಶ ಅಧಿಕಾರಕ್ಕಿಂತ ಹೆಚ್ಚಾಗಿ ರಾಜ್ಯದ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವುದಾಗಿದೆ. ಇದಕ್ಕೆಲ್ಲ ಪರಿಹಾರ ತರಬೇಕು ಅನ್ನೋದೆ ನಮ್ಮ ಪಕ್ಷದ ನಿಲುವು. ಲೋಕಸಭೆ ಸದಸ್ಯರಿಗೆ ಧ್ವನಿ ಇಲ್ಲ ಅಂತಿದ್ದಾರೆ. ಈ ಧ್ವನಿಯನ್ನ ಲೋಕಸಭೆಯಲ್ಲಿ ತರಬೇಕಂತ ನಿರ್ಧಾರ ಮಾಡಲಾಗಿದೆ. ಒಂದು ಅವಕಾಶವನ್ನ ನಮಗೆ ಕೊಡಿ. ಅನ್ಯಾಯವನ್ನ ಸರಿಪಡಿಸಲು ವಿಫಲ ಆದರೆ ನೇರವಾಗಿ ಪ್ರಶ್ನೆ ಮಾಡಿ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿತ್ತಾರೆ ಎಂದರು.