ನಟಿ ಅರುಂಧತಿ ನಾಯರ್ ಗೆ ಅಪಘಾತ ; ಸ್ಥಿತಿ ಗಂಭೀರ.!
ಬೈಕ್ ಅಪಘಾತದಲ್ಲಿ ನಟಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಇದೀಗ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೇರಳದಲ್ಲಿ ನಡೆದಿದೆ. ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಅರುಂಧತಿ ನಾಯರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರುಂಧತಿ ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾಳೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಹಿಂತಿರುಗುತ್ತಿದ್ದಳು. ಇಬ್ಬರಿಗೆ ಡಿಕ್ಕಿ ಹೊಡೆದ ವಾಹನ ನಿಲ್ಲಲಿಲ್ಲ. ನಟಿ ಮತ್ತು ಆಕೆಯ ಸಹೋದರ ಸುಮಾರು ಒಂದು ಗಂಟೆ ಅಪಘಾತದಿಂದಾಗಿ ರಸ್ತೆಯ ಮೇಲೆ ಬಿದ್ದಿದ್ದರು ಎಂದು ಹೇಳಲಾಗಿದೆ.
ಅಪಘಾತದಲ್ಲಿ ನಟಿ ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಸಹೋದರಿ ಆರತಿ ನಾಯರ್ ತಿಳಿಸಿದ್ದಾರೆ. ತಿರುವನಂತಪುರದ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
‘ಮೂರು ದಿನಗಳ ಹಿಂದೆ ಸಹೋದರಿ ಅರುಂಧತಿ ನಾಐರ್ ಅಪಘಾತಕ್ಕೀಡಾಗಿರೋದು ನಿಜ. ಆಕೆ ತೀವ್ರವಾಗಿ ಗಾಯಗೊಂಡಿದ್ದು, ವೆಂಟಿಲೇಟರ್ನಲ್ಲಿ ಹೋರಾಡುತ್ತಿದ್ದಾರೆ’’ ಎಂದು ಆರತಿ ನಾಯರ್ ಹೇಳಿದ್ದಾರೆ.
ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದಳು ಇನ್ಸ್ಟಾಗ್ರಾಮ್ ಚೆಲುವೆ
ಪ್ರೇಮ ವೈಫಲ್ಯಕ್ಕೆ (Love Failure) ಬೇಸತ್ತ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ. ಬಿಹಾರ ಮೂಲದ ನಾಸಿಂ ಬೇಗಂ(31) ಆತ್ಮಹತ್ಯೆಗೆ ಯತ್ನಿಸಿದವಳು.
ಖಾಸಗಿ ಹೋಟೆಲ್‌ನ ಕಟ್ಟಡದ ಮೇಲ್ಭಾಗದಲ್ಲಿ ನಿಂತು ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯುವುದಾಗಿ ಹೇಳಿ ರಂಪಾಟ ಮಾಡಿದ್ದಾಳೆ. ಕಟ್ಟಡದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸುವುದಾಗಿ ಬೆದರಿಕೆ ಹಾಕಿದ್ದಾಳೆ.
ಈಗಾಗಲೇ ಮದುವೆ ಆಗಿದ್ದ ಬಿಹಾರ ಮೂಲದ ನಾಸಿಂ ಬೇಗಂ, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ವಯಸ್ಸಿನಲ್ಲಿ ಚಿಕ್ಕವನ್ನಾಗಿದ್ದ ಆಸಿಬೂರ್ ರೆಹಮಾನ್ ಎಂಬಾತನನ್ನು ಪ್ರೀತಿಸಿದ್ದಳು. ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದ ಆಸಿಬೂರ್ ರೆಹಮಾನ್ ಏಷಿಯನ್ ಪೈಂಟ್ಸ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ ಪರಿಚಯವು ಪ್ರೀತಿಗೆ ತಿರುಗಿತ್ತು.
ಈ ನಡುವೆ ಆಸಿಬೂರನನ್ನು ನೋಡಲು ನಾಸಿಂ ಬೇಗಂ ಬಿಹಾರದಿಂದ ನಂಜನಗೂಡಿಗೆ ಬಂದಿದ್ದಳು. ಆಕೆಯನ್ನು ಕಾಣಲು ಕಾತುರನಾಗಿದ್ದ ಆಸಿಬೂರ ಮಹಿಳೆಯನ್ನು ಕಂಡ ಮೇಲೆ ಮನಸ್ಸು ಬದಲಾಗಿತ್ತು. ಯಾಕೆಂದರೆ ನಾಸಿಂ ಬೇಗಂಗೆ ಈಗಾಗಲೇ ಮದುವೆ ಆಗಿತ್ತು. ಜತೆಗೆ ವಯಸ್ಸಿನ ಅಂತರ ಹೆಚ್ಚಿದೆ ಎಂದು ಮದುವೆಗೆ ಒಲ್ಲೆ ಎಂದಿದ್ದ.
ಯುವಕನ ಮಾತಿನಿಂದ ಸಿಟ್ಟಿಗೆದ್ದ ವಿವಾಹಿತೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾಳೆ. ಯುವಕ ಮದುವೆಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ನಾಸಿಂ ಬೇಗಂ ತಾನು ತಂಗಿದ್ದ ಹೋಟೆಲ್‌ನ ಕಟ್ಟಡ ಏರಿ ಹೈಡ್ರಾಮಾವನ್ನೇ ಮಾಡಿದ್ದಳು. ಇತ್ತ ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ, ನಾಸಿಂ ಬೇಗಂನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂಜನಗೂಡು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.