ಚುನಾವಣೆ ಘೋಷಣೆ: ಈ ಬಾರಿ ಸಾಮಾಜಿಕ ಜಾಲತಾಣದ ಮೇಲೆ ಎಲ್ಲಿಲ್ಲದ ನಿಗಾ. ಅನುಮತಿ ಇಲ್ಲದ ಸಾಮಾಜಿಕ ಜಾಲತಾಣದ ಉಪಯೋಗಕ್ಕೆ ಜೈಲುವಾಸ ಗ್ಯಾರಂಟಿ!
ಚುನಾವಣೆ ಕಮಿಷನ್ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ಈ ಬಾರಿ ಸಾಮಾಜಿಕ ಜಾಲತಾಣದ ಮೇಲೆ ಚುನಾವಣಾ ಕಮಿಷನ್ ಇದುವರೆಗೆ ಕಂಡಿರದ ನಿಗಾವನ್ನು ವಹಿಸಲಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣನ್ನು ಇಡಲಿರುವ ಚುನಾವಣಾ ಆಯೋಗ, ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣ ದಿನಾಂಕ ಘೋಷಣೆಗೂ ಮುನ್ನ ಸುದೀರ್ಘ ವಿವರ ನೀಡಿದ ರಾಜೀವ್ ಕುಮಾರ್ ಅವರು ”ನಾವು ರಾಷ್ಟ್ರಕ್ಕೆ ನಿಜವಾದ ಹಬ್ಬದ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ಬದ್ಧರಾಗಿದ್ದೇವೆ. 17 ನೇ ಲೋಕಸಭೆಯ ಅವಧಿಯು ಜೂನ್ 16, 2024 ರಂದು ಮುಕ್ತಾಯಗೊಳ್ಳಲಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ವಿಧಾನಸಭೆಗಳ ಅವಧಿಯು ಸಹ ಜೂನ್ 2024 ರಲ್ಲಿ ಮುಗಿಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಚುನಾವಣೆಗಳು ನಡೆಯಬೇಕಿವೆ” ಎಂದರು.
ಚುನಾವಣೆಯಲ್ಲಿ ರಕ್ತಪಾತ, ಹಿಂಸಾಚಾರಕ್ಕೆ ಜಾಗವಿಲ್ಲ.ಹಿಂಸಾಚಾರದ ಮಾಹಿತಿ ಎಲ್ಲಿಂದ ಬಂದರೂ ಅವರ ವಿರುದ್ಧ ತತ್ ಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
”ನಮ್ಮಲ್ಲಿ ಒಟ್ಟು 96.8 ಕೋಟಿ ಮತದಾರರಿದ್ದಾರೆ.1.8 ಕೋಟಿ ಮೊದಲ ಬಾರಿಗೆ ಮತದಾರರು ಮತ್ತು 20-29 ವರ್ಷದೊಳಗಿನ 19.47 ಕೋಟಿ ಮತದಾರರಿದ್ದಾರೆ. 2 ರಾಜ್ಯಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷ ಮತದಾರರಿಗಿಂತ ಹೆಚ್ಚಾಗಿದೆ” ಎಂದು ತಿಳಿಸಿದರು.
10.5 ಲಕ್ಷ ಮತಗಟ್ಟೆಗಳು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿ, 55 ಲಕ್ಷ ಇವಿಎಂಗಳು, 4 ಲಕ್ಷ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.