Lok Sabha Election: ನಾಳೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ; ಚುನಾವಣಾ ಆಯೋಗ
Twitter
Facebook
LinkedIn
WhatsApp
ಲೋಕಸಭೆ ಚುನಾವಣಾ (Lok Sabha election) ದಿನಾಂಕವನ್ನು ಮಾ.16ರಂದು ಘೋಷಣೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಚುನಾವಣಾ ಆಯೋಗದ ನೂತನ ಆಯುಕ್ತರು, ನಾಳೆ ಸಂಜೆ 3.00 ಗಂಟೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಇಂದು (ಮಾ.15) ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಂಧು ಅವರು ಅಧಿಕಾರ ಸ್ವೀಕಾರಿಸಿದ್ದಾರೆ. ಈಗಾಗಲೇ ಚುನಾವಣಾ ಆಯೋಗವು ವಿವಿಧ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದೆ.
ವರದಿಗಳ ಪ್ರಕಾರ, ಆಯೋಗವು ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಈ ಸಮಯಲ್ಲಿ ಇದೀಗ ನೂತನ ಆಯುಕ್ತರ ನೇಮಕದ ಮಾಡಿ. ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡದಿದ್ದಾರೆ. ಇದರ ಜತೆಗೆ 18ನೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯ ಬಗ್ಗೆ ತಿಳಿಸಿದೆ.