ಪುತ್ತೂರು: ಕೆಲಸದ ಆಮಿಷ ನೀಡಿ ಯುವತಿಯ ಮೇಲೆ ಅತ್ಯಚಾರ; ಆರೋಪಿಗಳು ಅರೆಸ್ಟ್.!
ಪುತ್ತೂರು: ಕೆಲಸದ ಆಮಿಷ ನೀಡಿ ಯುವತಿಯ ಮೇಲೆ ಅತ್ಯಚಾರ; ಆರೋಪಿಗಳು ಅರೆಸ್ಟ್.!
ಯುವತಿ ದೂರು ನೀಡಿದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಘಟನೆ ಮಾ.13 ರಂದು ನಡೆದಿದೆ ಎಂದು ವರದಿಯಾಗಿದೆ. ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಉಂಟಾಗಿದೆ. ಆಕೆಯ ಕೋರಿಕೆಯ ಮೇರೆಗೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕೆಂದು ತನ್ನ ಸ್ನೇಹಿತರಲ್ಲಿ ತಿಳಿಸಿದ್ದ ಎನ್ನಲಾಗಿದೆ.
ಯುವಕನ ಸ್ನೇಹಿತರಾದ ಕರ್ವೇಲು ಮತ್ತು ಕಡೇಶಿವಾಲಯದ ಇಬ್ಬರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ವಾಮಂಜೂರಿನ ಆತನ ಸ್ನೆಹಿತೆಯ ನಂಬರ್ ಪಡೆದು ಆಕೆಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಪುತ್ತೂರಿಗೆ ಕರೆಸಿದ್ದು, ಯುವತಿ ತನ್ನ ಸ್ನೇಹಿತೆಯ ಜೊತೆ ಮಾ.13 ರಂದು ಪುತ್ತೂರಿಗೆ ಬಂದಾಗ ಆಪಾದಿತ ಯುವಕರಿಬ್ಬರು ಆಕೆಗೆ ಪ್ರೊಫೈಲ್ ಬರೆಯಲೆಂದು ಹೇಳಿ ಆಕೆಯನ್ನು ಬನ್ನೂರು ಗ್ರಾಮದ ಬನ್ನೂರು ಬೈಲು ಬಳಿಯ ನಿರ್ಜನ ಮನೆಯೊಂದಕ್ಕೆ ಕರೆದು ಕೊಂಡು ಹೋಗಿದ್ದಾರೆ.
ಅಲ್ಲಿ ಅವರು ಒಬ್ಬಾಕೆಯನ್ನು ಹೊರಗೆ ಕುಳ್ಳಿರಿಸಿ, ಇನ್ನೋರ್ವಾಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿರುವುದಾಗಿ ಆರೋಪಿಸಲಾಗಿದೆ. ಘಟನೆಯ ನಂತರ ಯುವಕರಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆ ಯುವತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಂತರ ಪುತ್ತೂರು ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.