Annamalai: ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಣ್ಣಾಮಲೈ..?
ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಹವಾ ಇದೆ. ಇನ್ನು ಕರ್ನಾಟಕ ರಾಜ್ಯದಲ್ಲೂ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ. ಯಾಕಂದ್ರೆ ಇದೇ ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಚಿಕ್ಕಮಗಳೂರು ಭಾಗದಲ್ಲಿ ಇವರ ಹೆಸರಿನ ಬದಲು ‘ಸಿಂಗಂ ಅಣ್ಣಾಮಲೈ’ ಅಂತಾನೆ ಜನರು ಕರೆಯುತ್ತಿದ್ದರು. ಈಗ ಇದೆ ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.
ಕರ್ನಾಟಕಕ್ಕೆ ಅಣ್ಣಾಮಲೈ ಎಂಟ್ರಿ? ಅಣ್ಣಾಮಲೈ ಅವರ ಹೆಸರು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಹೀಗಾಗಿಯೇ ಈ ಬಾರಿ ಕೆ. ಅಣ್ಣಾಮಲೈ ಅವರನ್ನು ಕರ್ನಾಟಕದ ಕರಾವಳಿ ಭಾಗದ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ಸಾಗಿವೆ ಎಂಬ ಮಾತು ಹರಿದಾಡಿದೆ. ಇನ್ನೊಂದು ಕಡೆ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಇದೀಗ ದಕ್ಷಿಣ ಕನ್ನಡದಲ್ಲಿ ಅಸಮಾಧಾನ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿಯೇ ಕಟೀಲ್ ಬದಲು ಈಗ ಅಣ್ಣಾಮಲೈ ಅವರನ್ನ ದಕ್ಷಿಣ ಕನ್ನಡದಿಂದ ಲೋಕಸಭೆಗೆ ಇಳಿಸಲು ಚರ್ಚೆ ನಡೆದಿಯಂತೆ. ಹಾಗಾದರೆ ಇದರ ಹಿಂದಿನ ತಂತ್ರ ಏನು?
ಬಿ.ಎಲ್. ಸಂತೋಷ್ ಅವರ ಆಪ್ತರು ಕೆ. ಅಣ್ಣಾಮಲೈ ಅವರನ್ನು ಕಂಡರೆ ಪ್ರಧಾನಿ ಮೋದಿ ಅವರಿಂದ ಹಿಡಿದು, ಆರ್ಎಸ್ಎಸ್ ಮುಖಂಡರ ತನಕ ಪ್ರತಿಯೊಬ್ಬರಿಗೂ ಭಾರಿ ಗೌರವ. ಬಿಜೆಪಿಗೆ ಬಂದು ಕೆಲವೇ ವರ್ಷದಲ್ಲಿ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ. ಅದ್ರಲ್ಲೂ ಕೆಲವು ದಿನಗಳ ಹಿಂದೆ ಅಷ್ಟೇ ಪ್ರಧಾನಿ ಮೋದಿ ಅವರು ಅಣ್ಣಾಮಲೈ ಅವರನ್ನು ಹೊಗಳಿದ್ದರು. ಇದರ ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್ರ, ಹೊಸ ರಣತಂತ್ರದ ಪ್ರಕಾರ ಅಣ್ಣಾಮಲೈಗೆ ದಕ್ಷಿಣ ಕನ್ನಡ ಲೋಕಸಭೆ ಟಿಕೆಟ್ ಸಿಗುತ್ತದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಒಟ್ನಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡುವುದರ ಒಳಗೆ 2024ರ ಲೋಕಸಭೆ ಚುನಾವಣೆಯು ಬಂದೇ ಬಿಡುತ್ತೆ. ಯಾಕಂದ್ರೆ 2024ರ ಲೋಕಸಭೆ ಚುನಾವಣೆಗೆ ಕಡಿಮೆ ಸಮಯ ಇದ್ದು. ಹೀಗಾಗಿಯೇ ದೇಶದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತೀವ್ರ ಪೈಪೋಟಿ ಶುರುಮಾಡಿವೆ. ಬಿಜೆಪಿಗೆ ಈ ಗೆಲುವು ದೊಡ್ಡ ಬಲ ತಂದುಕೊಡುವ ನಿರೀಕ್ಷೆ ಇದ್ದು, ಹೀಗಾಗಿ ಕಮಲ ಪಡೆ ಅಭ್ಯರ್ಥಿ ಆಯ್ಕೆಯಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿದೆ.