ಗರ್ಭಿಣಿ ಪತ್ನಿ ಮತ್ತು ಪುಟ್ಟ ಮಗುವನ್ನು ಬಿಟ್ಟು ಇಸ್ರೇಲ್ ಗೆ ಹೋದ ಕೇರಳದ ಯುವಕ ಕ್ಷಿಪಣಿ ದಾಳಿಗೆ ಸಾವು!
Twitter
Facebook
LinkedIn
WhatsApp
ಕಳೆದ ವರ್ಷ ಆರಂಭವಾದ ಇಸ್ರೇಲ್-ಹಮಾಸ್ ಯುದ್ದ ಇದೇ ಮೊದಲ ಬಾರಿಗೆ ಭಾರತೀಯ ಪ್ರಜೆಯೊಬ್ಬನ ಬಲಿಪಡೆದಿದೆ.
ಲೆಬನಾನ್ ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್‌ನ ಉತ್ತರ ಗಡಿ ಮಾರ್ಗಲಿಯೊಟ್ ಬಳಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿದೆ.
ಮೃತಪಟ್ಟ ವ್ಯಕ್ತಿಯನ್ನು ಕೇರಳದ ಕೊಲ್ಲಂ ಮೂಲದ ಪಟ್ಟಿಬಿನ್ ಮ್ಯಾಕ್ಸ್‌ವೆಲ್ ಎಂದು ಗುರುತಿಸಲಾಗಿದೆ. ಅವರ ಪಾರ್ಥಿವ ಶರೀರವನ್ನು ಜಿವ್ ಆಸ್ಪತ್ರೆಯಲ್ಲಿ ಗುರುತಿಸಲಾಗಿದೆ. ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಟ್ಯಾಂಕ್ ವಿರೋಧಿ ಕ್ಷಿಪಣಿಯು ಉತ್ತರ ಇಸ್ರೇಲ್‌ನ ಗೆಲಿಲೀ ಪ್ರದೇಶದಲ್ಲಿಕ್ಕೆ ಅಪ್ಪಳಿಸಿತು ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿದೆ.