ಬಿಜೆಪಿ ಸಂಸದನ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್; ಎಫ್ಐಆರ್ ದಾಖಲು..!
ಉತ್ತರ ಪ್ರದೇಶದ ಬಾರಾಬಂಕಿ ಸಂಸದ (BJP MP) ಉಪೇಂದ್ರ ಸಿಂಗ್ ರಾವತ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ವರಿಷ್ಠರು ಟಿಕೆಟ್ ನೀಡಿದ್ದಾರೆ. ಇದಾಗಿ ಒಂದೇ ದಿನದಲ್ಲಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊವೊಂದು (Forged Obscene Video) ಬಹಿರಂಗಗೊಂಡಿದೆ. ಅದು ನಕಲಿ ಎಂದು ಹೇಳಲಾಗುತ್ತಿರುವ ಹೊರತಾಗಿಯೂ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.
ಸಂಸದರ ಕಾರ್ಯದರ್ಶಿ ದಿನೇಶ್ ಚಂದ್ರ ರಾವತ್ ಇದು ನಕಲಿ ಮತ್ತು ದುರುದ್ದೇಶಪೂರಿತ ಎಂದು ಹೇಳಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಕಿಡಿಗೇಡಿಗಳ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಆದಿತ್ಯ ತ್ರಿಪಾಠಿ ತಿಳಿಸಿದ್ದಾರೆ.
ಸಂಸದರಿಗೆ ಮತ್ತೆ ಟಿಕೆಟ್ ದೊರಕಿದ ನಂತರ ಅವರ ವರ್ಚಸ್ಸಿಗೆ ಮಸಿ ಬಳಿಯಲು ಕೆಲವರು ಅವರ ಆಕ್ಷೇಪಾರ್ಹ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಆನ್ ಲೈನ್ ನಲ್ಲಿ ಪ್ರಸಾರವಾದ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಏಕಾಂತದಲ್ಲಿ ಇರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಉಪೇಂದ್ರ ಸಿಂಗ್ ರಾವತ್ ಎಂದು ಹೇಳಲಾಗುತ್ತಿದೆ.
“ನಾನು ಬಾರಾಬಂಕಿಯಿಂದ ಪಕ್ಷದ ಟಿಕೆಟ್ ಪಡೆದ ಕೂಡಲೇ, ನನ್ನ ವಿರೋಧಿಗಳು ಈ ಕೃತ್ಯವನ್ನು ಮಾಡಿದ್ದಾರೆ” ಎಂದು ಸಂಸದರು ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಶಿಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಆಗಿನ ಹಾಲಿ ಸಂಸದ ಪ್ರಿಯಾಂಕಾ ಸಿಂಗ್ ರಾವತ್ ಅವರಿಗೆ ಟಿಕೆಟ್ ನಿರಾಕರಿಸಿತ್ತು ಮತ್ತು ಉಪೇಂದ್ರ ಸಿಂಗ್ ರಾವತ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಈ ಬಾರಿಯೂ ಮತ್ತೆ ಅವರಿಗೆ ಟಿಕೆಟ್ ಸಿಕ್ಕಿದೆ.