ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್
Twitter
Facebook
LinkedIn
WhatsApp
ಶಿವಮೊಗ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಹಳೆ ಭದ್ರಾವತಿ ಬಳೆಗಾರ ಬೀದಿ ನಿವಾಸಿಯಾದ ಚಂದ್ರಾಬಾಯಿ (52) ಎಂಬುವವರು ಬಲಗಾಲು ಕಳೆದುಕೊಂಡಿದ್ದಾರೆ. ಈ ಘಟನೆ ಫೆ.27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೃದ್ಧೆಯೂ ಬಸ್ ಬರುವುದನ್ನು ಗಮನಿಸದೇ ನಡೆದುಕೊಂಡು ಹೋಗುತ್ತಿದ್ದರು ಈ ವೇಳೆ ಬಸ್ ಏಕಾಏಕಿ ವೃದ್ಧೆಯ ಮೇಲೆ ಹರಿದು ಬಿಟ್ಟಿದೆ. ಪರಿಣಾಮ ವೃದ್ಧೆಯು ತನ್ನ ಬಲಗಾಲನ್ನು ಕಳೆದುಕೊಂಡಿದ್ದಾರೆ.