ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರ ಮನೆಗೆ ಬರಲಿದೆ ಕ್ಯೂ ಆರ್ ಕೋಡ್ ಸಹಿತ ನೋಟಿಸ್..!

Twitter
Facebook
LinkedIn
WhatsApp
ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರ ಮನೆಗೆ ಬರಲಿದೆ ಕ್ಯೂ ಆರ್ ಕೋಡ್ ಸಹಿತ ನೋಟಿಸ್..!

ಬೆಂಗಳೂರು ಸಂಚಾರ ಪೊಲೀಸರು  ಟ್ರಾಫಿಕ್​ ರೂಲ್ಸ್​​ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಆದರೆ ಇನ್ಮುಂದೆ ಇದು ನಡೆಯಲ್ಲ. ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ನೋಟಿಸ್​​ ಹೋಗುತ್ತಿತ್ತು. ನೋಟಿಸ್​ ಬಂದರೂ ಹಲವರು ದಂಡ ಕಟ್ಟದೆ ತಕಾರಾರು ತೆಗೆಯುತ್ತಿದ್ದರು. ಇದರಿಂದ ಟ್ರಾಫಿಕ್​ ಪೊಲೀಸರು  ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹೈ ಟೆಕ್ನಾಲಜಿ ಬಳಸಿ ದಂಡ ವಸೂಲಿಗೆ ಮುಂದಾಗಿದ್ದಾರೆ.

ಹೌದು ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ. ಈ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್​​ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್​ ಸಹ ನಿಮ್ಮ ಮೊಬೈಲ್​ಗೆ ಬರಲಿದೆ.

ನಿಯಮ ಉಲ್ಲಂಘನೆಯ ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ನೀವು ಸಂಚಾರಿ ಪೊಲೀಸ್​ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಸಂಚಾರಿ ಪೊಲೀಸ್​ ಇಲಾಖೆ ವೆಬ್​ ಸೈಟ್ Btp.gov.in.

ದೂರು/ ಸಲಹೆ ನೀಡುವುದು ಹೇಗೆ?

  1. Btp.gov.in ವೆಬ್​ಸೈಟ್​ಗೆ ಭೇಟಿ ನೀಡಿದ ಬಳಿಕ ಮೇಲಗಡೆ ಬಲ ಭಾಗದಲ್ಲಿ Complain& Suggestions ಅಂತ ಕಾಣುತ್ತದೆ.
  2. Complain& Suggestions ಮೇಲೆ ಕ್ಲೀಕ್​ ಮಾಡಿದ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
  3. ಅಲ್ಲಿ ಯಾವ ಟ್ರಾಫಿಕ್​ ಸಿಗ್ನಲ್​ ದೂರು ಅಂತ ನಮೂದಿಸಬೇಕು. ಬಳಿಕ ಗಾಡಿ ಸಂಖ್ಯೆ, ಏನು ಸಮಸ್ಯೆ ​ಅಂತ ಬರಿಬೇಕು. ಬಳಿಕ ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಇಮೇಲ್​ ಐಡಿ, ದೂರು ಬರೆದು ಸಬ್​ಮಿಟ್​ ಕೊಟ್ಟರೆ, ನಿಮ್ಮ ದೂರು ಸಂಚಾರಿ ಪೊಲೀಸರಿಗೆ ತಲಪುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ