ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Cristiano Ronaldo : ಅಶ್ಲೀಲ ವರ್ತನೆ ತೋರಿದಕ್ಕೆ ಕ್ರಿಸ್ಟಿಯಾನೋ ರೊನಾಲ್ಡೋಗೆ ಅಮಾನತುಗೊಳಿಸಿದ ಫುಟ್ಬಾಲ್ ಫೆಡರೇಷನ್..!

Twitter
Facebook
LinkedIn
WhatsApp
Cristiano Ronaldo : ಅಶ್ಲೀಲ ವರ್ತನೆ ತೋರಿದಕ್ಕೆ ಕ್ರಿಸ್ಟಿಯಾನೋ ರೊನಾಲ್ಡೋಗೆ ಅಮಾನತುಗೊಳಿಸಿದ ಫುಟ್ಬಾಲ್ ಫೆಡರೇಷನ್..!

ದುಬೈ: ಅಶ್ಲೀಲ ವರ್ತನೆ ತೋರಿದ ಕಾರಣದಿಂದ ಕ್ರಿಸ್ಟಿಯಾನೊ ರೊನಾಲ್ಡೊರನ್ನು(Cristiano Ronaldo) ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅಲ್-ನಾಸರ್(Al-Nassr) ತಂಡವು ಅಲ್ ಶಬಾಬ್(Al-Shabab) ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ನಂತರ ರೊನಾಲ್ಡೊ ಅಶ್ಲೀಲ ವರ್ತನೆ ತೋರಿದ್ದರು.

ಸೌದಿ ಫುಟ್​ಬಾಲ್(Saudi League) ಫೆಡರೇಷನ್​ನ ಶಿಸ್ತು ಮತ್ತು ನೀತಿ ಸಮಿತಿಯು ಕ್ರಿಸ್ಟಿಯಾನೊ ರೊನಾಲ್ಡೊಗೆ ಒಂದು ಪಂದ್ಯ ನಿಷೇಧ ವಿಧಿಸಿದೆ. ಪಂದ್ಯದ ಮುಕ್ತಾಯದ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ಶಬಾಬ್ ತಂಡದ ಬೆಂಬಲಿಗರತ್ತ ಅಶ್ಲೀಲವಾಗಿ ಬೆರಳನ್ನು ತೋರಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ರೊನಾಲ್ಡೊ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿ ಫುಟ್​ಬಾಲ್ ಫೆಡರೇಷನ್​ಗೆ 10,000 ಸೌದಿ ರಿಯಲ್ಸ್ (2,666 ಡಾಲರ್) ಹಾಗೂ ದೂರು ದಾಖಲಿಸಿದ ಶುಲ್ಕವಾಗಿ ಅಲ್ ಶಬಾಬ್ ತಂಡಕ್ಕೆ 20,000 ಸೌದಿ ರಿಯಲ್ಸ್ ಪಾವತಿಸಬೇಕು ಎಂದು ಸಮಿತಿಯು ಸೂಚಿಸಿದೆ. ಈ ನಿರ್ಣಯವು ಅಂತಿಮವಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.

 

ಕತಾರ್​ನಲ್ಲಿ ನಡೆದ 2022ರ ಫಿಫಾ ವಿಶ್ವ ಕಪ್​(Fifa World Cup) ನ 16ರ ಘಟ್ಟದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದರ ಸಿಟ್ಟಿನಲ್ಲಿ ಅವರು ತನ್ನ ತಂಡ 2006ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದರೂ ಆಟಗಾರರೊಂದಿಗೆ ಸಂಭ್ರಮಿಸದೆ ಮೈದಾನದಿಂದ ಹೊರ ನಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ತಂಡದ ಕೋಚ್​ ಫೆರ್ನಾಂಡೊ ಸ್ಯಾಂಟೋಸ್ ಜತೆ ರೊನಾಲ್ಡೊ ವಾಗ್ವಾದ ಕೂಡ ನಡೆಸಿದ್ದರು.

 
 

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ