ಭಾರತ ತಂಡದ ಪರ ಮಿಂಚುತ್ತಿರುವ ಯುವ ಆಟಗಾರರು ; ಮುಂದಿನ ಕ್ರಿಕೆಟ್ ಭವಿಷ್ಯಕ್ಕೆ ಯುವಪಡೆಯೇ ಆಸ್ತಿ..!
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭವಾದ ಸಮಯದಲ್ಲಿ ಭಾರತ ಭಾರಿ ಭೀಕರ ಸೋಲು ಕಂಡಿತ್ತು. ಮೊದಲ ಪಂದ್ಯಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದ ರೋಹಿತ್ ಶರ್ಮಾ ಪಡೆ ಮತ್ತೆ ದೊಡ್ಡ ಮಟ್ಟದಲ್ಲೇ ಕಂಬ್ಯಾಕ್ ಮಾಡಿತ್ತು. ಹೀಗೆ ಒಂದು ಸೋಲಿನ ನಂತರ ಎರಡು ಗೆಲುವನ್ನ ಸಾಧಿಸಿ, ಸರಣಿಯಲ್ಲಿ 2-1 ಅಂತರವನ್ನು ಕಾಪಾಡಿಕೊಂಡಿತ್ತು. ಹೀಗಾಗಿ 4ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಇಂಗ್ಲೆಂಡ್ ಪಡೆ ಅಖಾಡ ಪ್ರವೇಶ ಮಾಡಿತ್ತು. ಅದೇ ರೀತಿ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತವಾಗಿ ಆಡಿದ್ದ ಇಂಗ್ಲೆಂಡ್ ತಂಡ, ಭಾರತಕ್ಕೆ ಸವಾಲಿನ ಮೊತ್ತ ನೀಡಿತ್ತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಮೊತ್ತ ಕಲೆಹಾಕಿತ್ತು. ರಾಂಚಿ ಬೌಲಿಂಗ್ ಪಿಚ್ಗೆ ಇದು ದೊಡ್ಡ ಸ್ಕೋರ್ ಆಗಿರುತ್ತೆ. ಹೀಗಿದ್ದಾಗ ಭಾರತ ತಂಡದ ಬ್ಯಾಟ್ಸ್ಮನ್ಗಳು ತರಗೆಲೆ ರೀತಿ ಔಟ್ ಆಗಲು ಶುರು ಮಾಡಿದ್ರು. ಎದ್ದೂ ಬಿದ್ದು ಭಾರತ 300 ರನ್ ಗಡಿ ದಾಟಿತ್ತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಭಾರತ 40ಕ್ಕೂ ಹೆಚ್ಚು ರನ್ಗಳ ಮುನ್ನಡೆ ಬಿಟ್ಟುಕೊಟ್ಟಿತ್ತು. ನಂತರ 2ನೇ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್, ಭರ್ಜರಿ ರನ್ ಕಲೆಹಾಕುವ ನಿರೀಕ್ಷೆಯಲ್ಲಿತ್ತು. ಆದ್ರೆ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ನರಳಿ ಕೇವಲ 145 ರನ್ಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತಕ್ಕೆ ಕೇವಲ 192 ರನ್ಗಳ ಗುರಿ ನೀಡಿತ್ತು ಇಂಗ್ಲೆಂಡ್.
ಭಾರತಕ್ಕೆ ನೆರವಾಗಿದ್ದು ಯುವ ಪಡೆ!! ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡಕ್ಕೆ ನೆರವಾಗಿ ನಿಂತಿದ್ದು ಯುವ ಪಡೆ. ಇಂಗ್ಲೆಂಡ್ ತಂಡ ಉತ್ತಮವಾಗಿ ಬೌಲಿಂಗ್ ಮಾಡಿದರೂ ಅದನ್ನ ನಿಖರವಾಗಿ ಎದುರಿಸಿದ ಭಾರತೀಯ ಕ್ರಿಕೆಟ್ ತಂಡದ ಯುವ ದಾಂಡಿಗರು, ದೊಡ್ಡ ಹೊಡೆತಗಳಿಗೆ ಕೈ ಹಾಕದೆ ನಿಧಾನ ನಿಧಾನ ಗುರಿ ತಲುಪಿದರು. ಮತ್ತೊಂದು ಕಡೆ ಶುಭಮನ್ ಗಿಲ್ & ಧ್ರುವ್ ಜುರೇಲ್ ಜೋಡಿ ಇಂದು ಕಮಾಲ್ ಮಾಡಿಬಿಟ್ಟಿತು. ಈ ಮೂಲಕ ಯುವ ಪಡೆ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಹೊಸ ವೇದಿಕೆ ಒದಗಿಸಿದೆ.
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಈ ಗೆಲುವಿನ ಮೂಲಕ ಹೊಸ ಹುಮ್ಮಸ್ಸು ತುಂಬಿಕೊಂಡಿದೆ ಅದ್ರಲ್ಲೂ ಇಂಗ್ಲೆಂಡ್ ತಂಡ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ತರಗೆಲೆ ರೀತಿ ಹಾರಿ ಹೋಗಿದೆ. ಭಾರತ ಮತ್ತೊಮ್ಮೆ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಈ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಮತ್ತಷ್ಟು ಹತ್ತಿರವಾಗಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈಗ, ಭರ್ಜರಿ ಗೆಲುವಿನ ಮೂಲಕ ಸಖತ್ ಖುಷಿಯಾಗಿದ್ದಾರೆ.