ಮಂಗಳೂರು :ಪೈಂಟಿಂಗ್ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು
Twitter
Facebook
LinkedIn
WhatsApp
ಮಂಗಳೂರು ಫೆಬ್ರವರಿ 26: ಮನೆಯೊಂದರ ಎರಡನೇ ಮಹಡಿಯ ಪೈಂಟಿಂಗ್ ಕಾರ್ಯ ಮಾಡುತ್ತಿರುವ ವೇಳೆ ಆಯತಪ್ಪಿ ಏಣಿಯ ಜೊತೆಗೆ ಪೈಂಟರ್ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೃತರನ್ನು ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಎಂದು ಗುರುತಿಸಲಾಗಿದೆ.
ಮೋಹಿತ್ ಪೂಜಾರಿ ಅವರು ಮಂಗಳೂರಿನ ಶಿವ ಎಂಡ್ ಡೆಕೋರೇಟರ್ಸ್ ಮಾಲಕ ಚಂದ್ರಶೇಖರ್ ಅವರ ಮನೆಯಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಫೆಬ್ರವರಿ 24ರಂದು ಮೋಹಿತ್ ಮತ್ತು ದೀಪಕ್ ಎರಡನೇ ಮಹಡಿಯಲ್ಲಿ ಹೊರಭಾಗದ ಗೋಡೆಗೆ ಪೈಂಟ್ ಮಾಡುತ್ತಿದ್ದಾಗ ಏಣಿ ಜಾರಿ ಹೊರಕ್ಕೆ ಬಿದ್ದಿದೆ. ಮೋಹಿತ್ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಒಯ್ಯುವ ಮೊದಲೇ ಮೃತಪಟ್ಟಿದ್ದಾರೆ.