ಸೋಮವಾರ, ಫೆಬ್ರವರಿ 3, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಖ್ಯಾತ ಗಜಲ್ ಹಾಗೂ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ..!

Twitter
Facebook
LinkedIn
WhatsApp
ಖ್ಯಾತ ಗಜಲ್ ಹಾಗೂ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ..!

ಮುಂಬೈ: ಖ್ಯಾತ ಗಜಲ್ ಗಾಯಕ (Ghazal Singer) ಪಂಕಜ್ ಉದಾಸ್ (Pankaj Udhas) ಅವರು ತಮ್ಮ 72ನೇ ವಯಸ್ಸಿನಲ್ಲಿ ಸೋಮವಾರ ನಿಧನರಾದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಪಂಕಜ್ ಉದಾಸ್ ಅವರು, ನಟ ಸುದೀಪ್ ಅವರ ‘ಸ್ಪರ್ಶ’ ಚಿತ್ರದ ‘ಚಂದಕ್ಕಿಂತ ಚಂದ… ನೀನೇ ಸುಂದರ…..’ ಗಜಲ್ ಹಾಡಿಗೆ ದನಿಯಾಗಿದ್ದರು.

ಪಂಕಜ್ ಉದಾಸ್ ಅವರ ನಿಧನವನ್ನು ಅವರ ಪುತ್ರಿ ನಯಾಬ್ ಅವರು ಖಚಿತ ಪಡಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪಂಕಜ್ ಉದಾಸ್ ಅವರು ಫೆಬ್ರವರಿ 26 ನಿಧನರಾದರೆಂದು ತುಂಬಾ ಭಾರವಾದ ಹೃದಯದಿಂದ ನಿಮಗೆ ತಿಳಿಸಲು ನಾವು ದುಃಖಿತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪಂಕಜ್ ಅವರ ನಿಧನಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಅವರು, ನನ್ನ ಬಾಲ್ಯದ ಅತ್ಯಂತ ಮಹತ್ವದ ವ್ಯಕ್ತಿಯನ್ನು ನಾನು ಕಳೆದುಕೊಂಡೆ. ಪಂಕಜ್ ಉದಾಸ್ ಅವರೇ ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನೀವು ಇಲ್ಲ ಎಂದು ತಿಳಿದು ನನ್ನ ಹೃದಯ ಭಾರವಾಗಿದೆ ಎಂದು ಹೇಳಿದ್ದಾರೆ.

 

1980ರಲ್ಲಿ ಗಜಲ್ ಆಲ್ಬಮ್ ಬಿಡುಗಡೆ ಮಾಡುವ ಮೂಲಕ ಪಂಕಜ್ ಅವರು ತಮ್ಮ ವೃತ್ತಿಯನ್ನೂ ಆರಂಭಿಸಿದರು. 1981ರಲ್ಲಿ ಮುಕರಾರ್, 1982ರಲ್ಲಿ ತರನ್ನಮ್, 1983ರಲ್ಲಿ ಮೆಹಫಿಲ್ ಆಲ್ಬಮ್‌ಗಳ ಮೂಲಕ ಮನೆ ಮಾತಾದರು. ಗಜಲ್ ಗಾಯಕರಾಗಿ ಖ್ಯಾತಿ ಗಳಿಸಿದ ಬಳಿಕ ಪಂಕಜ್ ಅವರು, ಮಹೇಶ್ ಭಟ್ ನಿರ್ದೇಶನದ ನಾಮ್ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಪರಿಚಿತರಾದರು. ಈ ಚಿತ್ರದ ಚಿಟ್ಟಿ ಆಯೀ ಹೈ ಹಾಡು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಅವರು ಹಿಂದಿ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಲವು ವರ್ಷಗಳಲ್ಲಿ ಗುರುತಿಸಿಕೊಂಡರು.

ಆಲ್ಬಮ್‌ಗಳು ಮತ್ತು ಜಗತ್ತಿನಾದ್ಯಂತ ಲೈವ್ ಕಾನ್ಸರ್ಟ್ ಮೂಲಕ ಪಂಕಜ್ ಅವರು ಹೆಚ್ಚು ಜನಪ್ರಿಯಗೊಂಡರು. 2006ರಲ್ಲಿ ಭಾರತ ಸರ್ಕಾರವು ಅವರಿಗೆ ನಾಲ್ಕನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಪಂಕಜ್ ಅವರ ಸಹೋದರರಾದ, ನಿರ್ಮಲ್ ಉದಾಸ್ ಮತ್ತು ಮನಹಾರ್ ಉದಾಸ್ ಕೂಡ ಗಾಯಕರಾಗಿದ್ದಾರೆ.

 

2000ರಲ್ಲಿ ತೆರೆ ಕಂಡ ಸ್ಪರ್ಶ ಚಲನಚಿತ್ರದಲ್ಲಿನ ಚಂದಕ್ಕಿಂತ ಚಂದ… ಗಜಲ್‌ಗೆ ಪಂಕಜ್ ಅವರು ದನಿಯಾಗಿದ್ದರು. ಹಂಸಲೇಖ ಸಂಗೀತ ನಿರ್ದೇಶನದ ಈ ಹಾಡನ್ನು ಇಟಗಿ ಈರಣ್ಣ ಬರೆದಿದ್ದರು. ಕಿಚ್ಚ ಸುದೀಪ್ ನಿರ್ದೇಶನ ಈ ಚಿತ್ರವನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist