Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್ ಟೀಮ್ನ ರೀಲ್ಸ್ ವೈರಲ್!
ನಾನು ನಂದಿನಿ ಖ್ಯಾತಿಯ ವಿಕ್ಕಿ ಆ್ಯಂಡ್ ಟೀಮ್! ಇದಾಗಲೇ ಹಲವಾರು ರೀಲ್ಸ್ಗಳನ್ನು ಮಾಡಿ ನಕ್ಕು ನಗಿಸುವ ಈ ತಂಡ ಇದೀಗ ಅಕಾಯ್ ಹೆಸರಿನ ಅರ್ಥದ ಕುರಿತು ರೀಲ್ಸ್ ಮಾಡಿದ್ದು, ಅದನ್ನು ನೋಡಿದವರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
ಇದರಲ್ಲಿ ವಿಕ್ಕಿ ಅನುಷ್ಕಾ ಆಗಿದ್ದಾರೆ. ಅವರು ಗಂಡ ವಿರಾಟ್ ಕೊಹ್ಲಿ ಪಾತ್ರಧಾರಿಯ ಜೊತೆ ಗುರುಗಳ ಬಳಿ ಹೋಗಿದ್ದಾರೆ. ಅಲ್ಲಿ ಒಂದಿಷ್ಟು ಮಾತುಕತೆ ನಡೆಯುತ್ತದೆ. ಅವು ಕೂಡ ಹಾಸ್ಯಭರಿತವಾದ ಮಾತುಗಳು. ಬಳಿಕ ಅನುಷ್ಕಾ ನನಗೆ ಈಗ ಎರಡನೆಯ ಮಗುವಾಗಿದ್ದು, ಅದಕ್ಕೊಂದು ಹೆಸರು ಇಡಿ ಎಂದು ಸೂಚಿಸುತ್ತಾರೆ. ಆಗ ಗುರುಗಳು ಸುಮ್ಮನೇ ಇಡಲು ಆಗುವುದಿಲ್ಲ. ದಕ್ಷಿಣೆ ನೀಡಿ ಎನ್ನುತ್ತಾರೆ. ಆಗ ವಿರಾಟ್ ಕೊಹ್ಲಿ ದಕ್ಷಿಣೆ ರೂಪದಲ್ಲಿ ತಂದಿದ್ದ ಹಣ್ಣು-ಹಂಪಲು ಕಾಯಿಗಳನ್ನು ಎಡಗೈಲಿ ಇಡುತ್ತಾರೆ. ದಕ್ಷಿಣೆಯನ್ನು ಎಡಗೈಲಿಯಲ್ಲಿ ಕೊಟ್ಟಿದ್ದನ್ನು ನೋಡಿ ಗುರುಗಳು, ಆ ಕೈ ಆ ಕೈ ಎಂದು ಬಲಗೈಲಿ ನೀಡುವಂತೆ ಸೂಚಿಸುತ್ತಾರೆ. ಇಷ್ಟು ಹೇಳುತ್ತಿದ್ದಂತೆಯೇ ದಂಪತಿ ಎದ್ದು ಹೋಗುತ್ತಾರೆ. ಗುರುಗಳಿಗೆ ಏನು ಆಯಿತೆಂದು ಅರ್ಥ ಆಗುವುದಿಲ್ಲ. ಈ ಕೈಯಲ್ಲಿ ಆ ಕೈ ಅಂದ್ರೆ ಬಲಗೈಲಿ ಕೊಡುವಂತೆ ಹೇಳಿದ್ರೆ ಯಾಕೆ ಎದ್ದು ಹೋದರು ಎಂದು ಅಂದುಕೊಳ್ಳುವಷ್ಟರಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತದೆ. ವಿರುಷ್ಕಾ ದಂಪತಿ ತಮ್ಮ ಮಗುವಿನಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ ಎಂದು!
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ‘ವಿರುಷ್ಕಾ’ ದಂಪತಿ 2ನೇ ಮಗುವಿನ ತಂದೆಯಾಗಿದ್ದಾರೆ. ಇದೇ ಫೆಬ್ರವರಿ 15 ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 2021ರಲ್ಲಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಜನವರಿ 11ರಂದು ಕೊಹ್ಲಿ ದಂಪತಿ ವಮಿಕಾಳ 3ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. 2ನೇ ಮಗುವಾಗಿ 5 ದಿನಗಳ ಬಳಿಕ ಕೊಹ್ಲಿ 2ನೇ ಬಾರಿಗೆ ತಂದೆಯಾಗಿರುವ ಸಂತಸ ಹಂಚಿಕೊಂಡಿದ್ದರು.