ಪಣಂಬೂರು ಬೀಚ್: ಆಟವಾಡುವುದಕ್ಕೆ ತೆರಳಿದ್ದ ವಿದ್ಯಾರ್ಥಿ ಸಮುದ್ರಪಾಲು!
Twitter
Facebook
LinkedIn
WhatsApp
ಮಂಗಳೂರು : ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಶನಿವಾರ ಮಧ್ಯಾಹ್ನ ನೀರಿನಲ್ಲಿ ಆಟವಾಡುವುದಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ.
ಬೈಕಂಪಾಡಿಯ ಮೀನಕಳಿಯ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಬಾಲಕ ತುಕರಾಮ(13) ಶಾಲೆ ಬಿಟ್ಟ ಬಳಿಕ ತನ್ನ ಸ್ನೇಹಿತನೊಂದಿಗೆ ಪಣಂಬೂರು ಬೀಚ್ ಗೆ ಬಂದಿದ್ದ.
ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ನಾಪತ್ತೆಯಾಗಿದ್ದಾನೆ. ಬೀಚ್ ನಲ್ಲಿ ವಿದ್ಯಾರ್ಥಿ ಮುಳುಗುತ್ತಿರುವುದನ್ನು ಕಂಡ ಇತರರು ರಕ್ಷಣಾ ದಳಕ್ಕೆ ತಿಳಿಸಿದ್ದಾರೆ. ತತ್ ಕ್ಷಣ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ .
ಬಾಲಕ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಕೆಲ್ಸದ ನಿಮಿತ್ತ ಈತನ ಪೋಷಕರು ಬೈಕಂಪಾಡಿ ಬಳಿಯ ಮೀನಕಳಿಯ ಬಳಿ ವಾಸವಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.