ಸುರತ್ಕಲ್: ಲಾರಿ - ಸ್ಕೂಟರ್ ಅಪಘಾತ; ಶಿಕ್ಷಕಿ ಸಾವು
Twitter
Facebook
LinkedIn
WhatsApp
ಸ್ಕೂಟರ್‌ಗೆ ರೆಡಿಮಿಕ್ಸ್ ವಾಹನ ಢಿಕ್ಕಿ ಹೊಡೆದು ಸವಾರೆ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬಳಿ ನಡೆದಿದೆ.
ಪೂರ್ಣಿಮಾ (29) ಮೃತಪಟ್ಟವರು. ರೆಹನಾ ಇಂಟರ್‌ನ್ಯಾಶನಲ್ ಶಾಲೆಯ ಶಿಕ್ಷಕಿಯಾಗಿದ್ದ ಪೂರ್ಣಿಮಾ ಸ್ಕೂಟರ್ ನಲ್ಲಿ ಸಹೋದರಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಲಾರಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಮೃತಪಟ್ಟಿದ್ದಾರೆ.