IPL 2024: ಐಪಿಎಲ್ 2024 ರ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.!
Twitter
Facebook
LinkedIn
WhatsApp
IPL 2024: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಮಾರ್ಚ್ 22 ರಂದು ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆತಿಥ್ಯ ವಹಿಸಲಿದೆ.
ಈ ವರ್ಷ ಏಪ್ರಿಲ್ ಮತ್ತು ಮೇ ನಡುವೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಬಿಸಿಸಿಐ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇಡೀ ಐಪಿಎಲ್ ಸೀಸನ್ ಅನ್ನು ಭಾರತದಲ್ಲಿ ಆಯೋಜಿಸಲು ಮಂಡಳಿಯು ಉತ್ಸುಕವಾಗಿದೆ
ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2 ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದ್ದು, ಮೊದಲ ಹಂತವನ್ನು ಈಗ ಪ್ರಕಟಿಸಲಾಗಿದೆ. ಅದರಂತೆ ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ನ ಮೊದಲ ಹಂತ ಏಪ್ರಿಲ್ 7 ರ ವರೆಗೆ ನಡೆಯಲ್ಲಿದೆ. ಅಂದರೆ ಮೊದಲ ಹಂತದ ಐಪಿಎಲ್ 17 ದಿನಗಳವರೆಗೆ ನಡೆಯಲ್ಲಿದೆ. ಈ ಅವದಿಯಲ್ಲಿ 21 ಪಂದ್ಯಗಳು ನಡೆಯಲ್ಲಿವೆ. ಐಪಿಎಲ್ನ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರವಷ್ಟೇ ನಿರ್ಧಾರವಾಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಹಿಂದೆಯೇ ತಿಳಿಸಿದ್ದರು. ಅದರಂತೆ ಐಪಿಎಲ್ನ ಉಳಿದಾರ್ಧದ ವೇಳಾಪಟ್ಟಿ ಲೋಕಸಬೆ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಹೊರಬರಲಿದೆ.